ಬೆಂಗಳೂರು: ರಾಜ್ಯದಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರ ಶುಲ್ಕವನ್ನು ಒಮ್ಮೆಲೇ 10 ಪಟ್ಟು ಹೆಚ್ಚಳ ಮಾಡಲಾಗಿದೆ. ಪ್ರತಿ ಪ್ರಮಾಣಪತ್ರಕ್ಕೆ 5 ರೂಪಾಯಿ ಶುಲ್ಕವಿದ್ದು, ಇದನ್ನು 50 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 5 ಪ್ರಮಾಣ ಪತ್ರಗಳು ಬೇಕಿದ್ದಲ್ಲಿ 250 ರೂ. ಪಾವತಿಸಬೇಕಿದೆ. ಬೆಂಗಳೂರು
ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು (ತಿದ್ದುಪಡಿ) 2024ರಲ್ಲಿ ಪರಿಷ್ಕರಿಸಲಾಗಿದ್ದು, ಇತ್ತೀಚೆಗೆ ಶುಲ್ಕ ಏರಿಕೆ ಮಾಡಲಾಗಿದೆ. ಅನೇಕ ಉದ್ದೇಶಗಳಿಗಾಗಿ ಜನನ ಮತ್ತು ಮರಣ ಪ್ರಮಾಣ ಪತ್ರಗಳು ಬೇಕಿವೆ. ಮಕ್ಕಳ ಶಾಲಾ ಪ್ರವೇಶ, ಸರ್ಕಾರದ ವಿವಿಧ ಸೌಲಭ್ಯ ಪಡೆದುಕೊಳ್ಳಲು ಜನನ ಪ್ರಮಾಣ ಪತ್ರ ಸಲ್ಲಿಸಬೇಕಿದೆ.
ಇದನ್ನೂ ಓದಿ: ‘ಉಚಿತ ಪಡಿತರ’, ‘ಉಚಿತ ಕೊಡುಗೆ’ ಇತ್ಯಾದಿ ಟಿಪ್ಪಣಿಗಳಿಂದ ಬಡವರ ಘನತೆಯನ್ನು ಕಳಚಿ ಹಾಕಬಾರದು-ಬೃಂದಾ ಕಾರಟ್
ವ್ಯಕ್ತಿ ಮರಣ ಹೊಂದಿದಾಗ ಆತನ ಕುಟುಂಬದವರು ಪ್ರಮಾಣ ವಿವಿಧ ಉದ್ದೇಶಗಳಿಗಾಗಿ ಪ್ರಮಾಣಪತ್ರ ಪಡೆದುಕೊಳ್ಳಬೇಕಿದೆ. ಪ್ರಮಾಣ ಪತ್ರ ಶುಲ್ಕವನ್ನು 10 ಪಟ್ಟು ಹೆಚ್ಚಳ ಮಾಡಲಾಗಿದೆ.
ಸುಮಾರು 10 ಪ್ರಮಾಣ ಪತ್ರದ ಪ್ರತಿಗಳನ್ನು ಪಡೆದುಕೊಂಡಲ್ಲಿ 500 ರೂಪಾಯಿ ಪಾವತಿಸಬೇಕಾಗುತ್ತದೆ. ಶುಲ್ಕ ಹೆಚ್ಚಳದಿಂದ ಸಾರ್ವಜನಿಕರಿಗೆ ಹೊರೆಯಾಗಿದ್ದು, ಮರು ಪರಿಶೀಲಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಇದನ್ನೂ ನೋಡಿ: ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ರೈತ ಕೂಲಿಕಾರರ ಪ್ರತಿಭಟನೆ Janashakthi Media