ಕಾರವಾರ| ನದಿಗೆ ಅಡ್ಡಲಾಗಿ ಕಟ್ಟಿದ್ದ ಹಳೆ ಸೇತುವೆಯ 1 ಭಾಗ ಕುಸಿತ

ಕಾರವಾರ: ಸದಾಶಿವಗಢದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಹಳೆಯ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದ್ದು, ಇದರಿಂದ ಆಗುತ್ತಿದ್ದಂತಹ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗೋವಾ ಮತ್ತು ಕಾರವಾರವನ್ನು ಸಂಪರ್ಕಿಸುವ ಈ ಸೇತುವೆ ಬಳಕೆಯಲ್ಲಿಲ್ಲ ಮತ್ತು ದುರಸ್ತಿ ಕಾರ್ಯ ಕೂಡ ನಡೆಯುತ್ತಿತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಉಲ್ಬಣಗೊಂಡ ಮಂಗನ ಕಾಯಿಲೆ: ಒಂದೇ ದಿನ ನಾಲ್ವರಲ್ಲಿ ದೃಢ

ಪಿಲ್ಲರ್‌ ಒಂದು ಭಾಗ ಕುಸಿದು ಬಿದ್ದಿರುವುದಿಂದ ಸ್ಲ್ಯಾಬ್‌ ಮೇಲೆದ್ದಿದೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕಾಳಿ ಸೇತುವೆ ಕುಸಿತಗೊಂಡಿತ್ತು. ಕುಸಿದು ಬಿದ್ದಿದ್ದ ಕಾಳಿ ಸೇತುವೆ ದುರಸ್ತಿ ಮಾಡುತ್ತಿದ್ದಾಗ ಫಿಲ್ಲರ್‌ ಕುಸಿದು ಸ್ಲ್ಯಾಬ್‌ ಸಹಿತ ನದಿಗೆ ಬಿದ್ದ ಪರಿಣಾಮ ಹೊಸ ಸೇತುವೆಗೆ ಸಂಭವಿಸಬಹುದಾದ ಬಹುದೊಡ್ಡ ಅನಾಹುತ ತಪ್ಪಿದೆ.

ಗುರುವಾದ ಇದೇ ಸ್ಲ್ಯಾಬ್‌ ಮೇಲೆ 4-5 ಕಾರ್ಮಿಕರು ತೆರವು ಕಾರ್ಯಾಚರಣೆ ನಡೆಸುತ್ತಿದ್ದರು. ಕಳೆದ ನಾಲ್ಕು ತಿಂಗಳಿನಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಕೆಲ ದಿನ ರಾತ್ರಿ 12 ಗಂಟೆಯವರೆಗೂ ಕೆಲಸ ನಡೆಸುತ್ತಿದ್ದರು. ಆದರೆ ಶುಕ್ರವಾರ ಅನಾಹುತ ಸಂಭವಿಸುವ ವೇಳೆ ಕೆಲಸಗಾರರಿಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಕಳೆದ ಆಗಸ್ಟ್.‌7ರಂದು ಮಳೆಯ ಅಬ್ಬರಕ್ಕೆ ಕಾಳಿ ಸೇತುವೆ ಕುಸಿದು ಬಿದ್ದಿತ್ತು.

ಇದನ್ನೂ ನೋಡಿ: ಎಸ್‌ಸಿ- ಎಸ್‌ಟಿ- ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯದ ಮುಖಂಡರ ರಾಜ್ಯಮಟ್ಟದ ಸಭೆ

Donate Janashakthi Media

Leave a Reply

Your email address will not be published. Required fields are marked *