₹40,000 ಕೋಟಿ ಬ್ಯಾಂಕ್‌ ವಂಚನೆ ಪ್ರಕರಣ: ರಿಲಯನ್ಸ್ ಕಮ್ಯುನಿಕೇಷನ್ಸ್‌ ಮಾಜಿ ಅಧ್ಯಕ್ಷ ಬಂಧನ

ನವದೆಹಲಿ: ರಿಲಯನ್ಸ್ ಕಮ್ಯುನಿಕೇಷನ್ಸ್‌ (RCOM) ಮಾಜಿ ಅಧ್ಯಕ್ಷ ಪುನೀತ್‌ ಗರ್ಗ್‌ ರನ್ನು ಉದ್ಯಮಿ ಅನಿಲ್‌ ಅಂಬಾನಿ ಒಡೆತನದ ಸಮೂಹ ಕಂಪನಿಗಳ ವಿರುದ್ಧದ ₹ 40,000 ಕೋಟಿ ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 29ರಂದು ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಜನವರಿ 20ರಂದು ತಿಳಿಸಿದೆ.

ದೆಹಲಿಯಲ್ಲಿರುವ ಹಣದ ಅಕ್ರಮ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯವು ಗರ್ಗ್‌ ಅವರನ್ನು 9 ದಿನಗಳವರೆಗೆ ತನ್ನ ಕಸ್ಟಡಿಗೆ ನೀಡಿರುವುದಾಗಿ ತನಿಖಾ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಗಾಂಧೀಜಿ ಮೌಲ್ಯಗಳನ್ನು ಕುಗ್ಗಿಸುವ ರಾಜಕೀಯ ಅಪಾಯಕಾರಿಯಾದುದು – ಬರಗೂರು ಕಳವಳ

ಈ ಬೆಳವಣಿಗೆ ಸಂಬಂಧ ರಿಲಯನ್ಸ್‌ ಗ್ರೂಪ್‌ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗರ್ಗ್‌ ಅವರ ಪತ್ನಿಯ ಹೆಸರಿನಲ್ಲಿರುವ ಷೇರುಗಳು ಹಾಗೂ ಮ್ಯೂಚುವಲ್‌ ಫಂಡ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಇ.ಡಿ. ಬುಧವಾರ ಹೇಳಿತ್ತು.

‘RCOMನಲ್ಲಿ 2001ರಿಂದ 2005ರ ವರೆಗೆ ಹಿರಿಯ ವ್ಯವಸ್ಥಾಪಕ ಹಾಗೂ ನಿರ್ದೇಶಕ ಸ್ಥಾನದಲ್ಲಿದ್ದ ಗರ್ಗ್‌, ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದರು’ ಎಂದು ಆರೋಪಿಸಿರುವ ಇ.ಡಿ., ಈ ಹಣವನ್ನು ವಿದೇಶಿ ಸಂಸ್ಥೆಗಳು ಮತ್ತು ಘಟಕಗಳ ಮೂಲಕ ಬೇರೆಡೆಗೆ ವರ್ಗಾಯಿಸಲಾಗಿದೆ ಎಂದೂ ದೂರಿದೆ.

ಇದನ್ನೂ ನೋಡಿ: ‘ಶಸ್ತ್ರಮೇವ ಜಯತೆ’: ಧರ್ಮದ ಹೆಸರಿನಲ್ಲಿ ಹಿಂಸೆಗೆ ಕರೆ – ಸರ್ಕಾರಗಳ ಮೌನ!?Janashakthi Media

Donate Janashakthi Media

Leave a Reply

Your email address will not be published. Required fields are marked *