ಹೊಸ ವರ್ಷಾಚಾರಣೆ : ಬೈಕ್ ಏರಿ ನಗರದ ಪ್ರಮುಖ ಸ್ಥಳಗಳಿಗೆ ತಪಾಸಣೆ ನಡೆಸಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್

ಬೆಂಗಳೂರು: ​ನೂತನ ವರ್ಷವನ್ನು ಸ್ವಾಗತಿಸುವ ಸಂದರ್ಭದಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ರಾಜ್ಯ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿದೆ.  ಸಾರ್ವಜನಿಕರ ಸುರಕ್ಷತೆ ಮತ್ತು ನಗರದ ಶಿಸ್ತು ಕಾಪಾಡಲು ಬೆಂಗಳೂರು ಪೊಲೀಸ್ ಪಡೆ ಈ ಬಾರಿ ವಿಭಿನ್ನವಾಗಿ ಅಖಾಡಕ್ಕಿಳಿದಿದೆ.

ಬೈಕ್ ಏರಿ ನಗರದ ಪ್ರಮುಖ ಸ್ಥಳಗಳಿಗೆ ತೆರಳಿದ ಹಿರಿಯ ಅಧಿಕಾರಿಗಳು ತಪಾಸಣೆ ನಡೆಸಿದರು. ಬುಧವಾರ ​ಟ್ರಿನಿಟಿ ಸರ್ಕಲ್‌ನಿಂದ ಖುದ್ದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಜಾಗೃತಿ ಯಾತ್ರೆ ನಡೆಸಲಾಯಿತು. ಟ್ರಿನಿಟಿ ಸರ್ಕಲ್‌ನಿಂದ ಹೊರಟ ಅಧಿಕಾರಿಗಳ ತಂಡ ಬ್ರಿಗೇಡ್ ರಸ್ತೆ ಸೇರಿದಂತೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅತಿ ಹೆಚ್ಚು ಜನಸಂದಣಿ ಸೇರುವ ಈ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆ ಹೇಗಿದೆ? ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು? ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರು.

ಇದನ್ನೂ ಓದಿ : ರಾಜ್ಯದಲ್ಲಿ ಘೋರ ದುರಂತ : ಭೀಕರ ಅಪಘಾತದಲ್ಲಿ 17 ಕ್ಕೂ ಹೆಚ್ಚು ಜನ ಸಾವು

ಬಳಿಕ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ”ಹೊಸ ವರ್ಷದ ಸಂಭ್ರಮಾಚರಣೆಗೆ ಲಕ್ಷಾಂತರ ಜನ ಸೇರುವುದರಿಂದ ಜನಸಮೂಹ ಹಾಗೂ ಸಂಚಾರ ದಟ್ಟಣೆ ನಿರ್ವಹಣೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಸಂಭ್ರಮದ ವೇಳೆ ಅನುಚಿತ ವರ್ತನೆ, ಗಲಾಟೆ, ಕುಡಿದು ವಾಹನ ಚಲಾಯಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಪ್ರತೀ ಮಾಹಿತಿಯನ್ನೂ ಕ್ಯೂ ಆರ್ ಕೋಡ್ ಮೂಲಕ ಸಾರ್ವಜನಿಕರು ಪಡೆಯಬಹುದಾಗಿದೆ. ಜನಸಮೂಹ ಸೇರುವ ಕಡೆಗಳಲ್ಲಿ ಪೊಲೀಸರ ಸಹಾಯ ಪಡೆಯಲು ಅನುಕೂಲವಾಗುವಂತೆ ಕ್ಯೂ ಆರ್ ಕೋಡ್ ಅಂಟಿಸಲಾಗುತ್ತಿದೆ.

ಸಂಭ್ರಮದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಸೂಕ್ತ ತಯಾರಿ ಮಾಡಿಕೊಳ್ಳುತ್ತಿದ್ಧಾರೆ.  ಹೊಸ ವರ್ಷದ ಆಚರಣೆಗೆ ಬೆಂಗಳೂರು ನಗರದ ಜನ ತಯಾರಾಗುವುದರ ಜೊತೆಗೆ ಪೊಲೀಸರು ಕೂಡ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಆನ್‌ಲೈನ್ ಮೂಲಕ ಜವಾಬ್ದಾರಿಯುತವಾಗಿ ಹೊಸ ವರ್ಷ ಆಚರಿಸಿ ಎಂಬ ಅಭಿಯಾನವನ್ನು ಕೂಡ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಇತ್ತೀಚೆಗೆ ಆರಂಭಿಸಿದ್ದಾರೆ. ಈ ಮೂಲಕ ಡ್ರಗ್ ಪಾರ್ಟಿ, ರೇವ್ ಪಾರ್ಟಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರೇಟ್ ರೆಸ್ಪಾನ್ಸಿಬಿಲಿ ಅಭಿಯಾನ ಶುರು ಮಾಡಿರುವ ಪೊಲೀಸ್ ಇಲಾಖೆ, ಜನರಿಗೆ ಕೆಲ ಸೂಚನೆಗಳನ್ನು ನೀಡಿದೆ. ಪ್ರಯಾಣಿಕರ ಸುರಕ್ಷತೆ ಬಗ್ಗೆಯೂ ಅಭಿಯಾನ ಮಾಡಿದ್ದು ಉಬರ್, ಓಲಾ ಟ್ಯಾಕ್ಸಿಗಳಲ್ಲಿನ ತುರ್ತು ತಂತ್ರಜ್ಞಾನದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಕಮಿಷನರ್ ಕಚೇರಿಯಲ್ಲಿ ಓಲಾ, ಉಬರ್ ಮುಖ್ಯಸ್ಥರ ಜೊತೆ ಸಭೆ ನಡೆಸಿದ ಸೀಮಂತ್ ಕುಮಾರ್ ಸಿಂಗ್, ಭದ್ರತೆ ಮತ್ತು ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.

ಇದನ್ನೂ ನೋಡಿ : ₹ 36 ಸಾವಿರ ವೇತನಕ್ಕೆ ಆಗ್ರಹ: ಗ್ರಾ.ಪಂ. ನೌಕರರ ಪ್ರತಿಭಟನೆ Janashakthi Media

 

Donate Janashakthi Media

Leave a Reply

Your email address will not be published. Required fields are marked *