- ಎನ್‌ಕೌಂಟರ್ ಮಾಡಿದ ಪೊಲೀಸರು ಕಥೆಯನ್ನು ಸೃಷ್ಟಿಸಿದ್ದಾರೆ
- 10 ಮಂದಿ ಪೋಲೀಸರನ್ನು ಬಂಧಿಸಿ
ಹೈದರಾಬಾದ್ :ದಿಶಾ ರೆಡ್ಡಿ ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಚಾರ. ಪ್ರಕರಣಕ್ಕೆ ಬಂಧಿತರಾದ ನಾಲ್ವರು ಅಪರಾಧಿಗಳನ್ನು ತೆಲಾಂಗಣ ಹೈದರಾಬಾದ್ ನ ಪೊಲೀಸರು ಎನ್ ಕೌಂಟರ್ ಮಾಡಿರುವುದು ಉದ್ದೇಶಪೂರ್ವಕವೆಂದು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಆಯೋಗವು ಆರೋಪಿಸಿದೆ.
ಜೋಲು ಶಿವ,ಜೋಲು ನವೀನ್ ,ಚಿಂತಕುಂಟ ಚೆನ್ನಕೇಶವುಲು ಅಪ್ರಾಪ್ತರಾಗಿದ್ದರೆಂದು ಆಯೋಗವು ಊಹಿಸಿದೆ .ಎನ್ ಕೌಂಟರ್ ಮಾಡಿದ 10 ಮಂದಿ ಪೋಲೀಸರನ್ನು ಬಂಧಿಸಿ ವಿಚಾರಣೆ ನಡೆಸಲು ಶಿಫಾರಸು ಮಾಡಿದೆ. ಈ ಪ್ರಕರಣದಲ್ಲಿ ಸ್ಪಷ್ಟ ಆರೋಪವನ್ನು ಆಯೋಗವು ಎತ್ತಿ ತೋರಿಸಿದೆ.
ಈ ಎನ್‌ಕೌಂಟರ್ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಆಯೋಜಿಸಿದ್ದ ಸಿರ್ಪುರ್ಕಾರ್ ಆಯೋಗ ಶಿಫಾರಸು ಮಾಡಿದೆ. ಎನ್‌ಕೌಂಟರ್ ವಿಷಯದಲ್ಲಿ ಪೊಲೀಸರು ಕಥೆಯನ್ನು ಸೃಷ್ಟಿಸಿದ್ದಾರೆ ಎಂದು ತಿಳಿಸಲಾಗಿದೆ. ಪೊಲೀಸರ ಬಳಿ ಇದ್ದ ಬಂದೂಕುಗಳನ್ನು ಕಸಿದುಕೊಳ್ಳಲು ಆರೋಪಿಗಳು ಪ್ರಯತ್ನಿಸಿದ್ದರು. ಆಗ ಅವರ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಮಾಡಿರುವ ಆರೋಪ ಸುಳ್ಳು ಎಂದು ಆಯೋಗವು ಹೇಳಿದೆ.
“ನಮ್ಮ ಒಟ್ಟಾರೆ ಅಭಿಪ್ರಾಯದ ಪ್ರಕಾರ, ಆರೋಪಿಗಳನ್ನು ಸಾಯಿಸುವ ಸಲುವಾಗಿ ಗುಂಡು ಹಾರಿಸಲಾಗಿದೆ ಮತ್ತು ಗುಂಡಿನ ದಾಳಿಯು ಮೃತ ಶಂಕಿತರ ಸಾವಿನ ಫಲಿತಾಂಶ ನೀಡುವುದು ಖಚಿತ ಎಂಬ ತಿಳಿವಳಿಕೆಯೊಂದಿಗೇ ಮಾಡಲಾಗಿದೆ” ಎಂದು ಸಿರ್ಪುರ್ಕಾರ್ ಆಯೋಗದ ವರದಿ ತಿಳಿಸಿದೆ.
26 ವರ್ಷದ ಪಶುವೈದ್ಯೆ ದಿಶಾರೆಡ್ಡಿ ಕ್ಲಿನಿಕ್‌ಗೆ ಭೇಟಿ ನೀಡಿ ಮನೆಗೆ ತೆರಳುತ್ತಿದ್ದಾಗ ಶಾದ್‌ನಗರದಲ್ಲಿ ಅತ್ಯಾಚಾರ ನಡೆಸಿ ಸಜೀವ ದಹನ ಮಾಡಲಾಗಿದೆ. ಕೆಲವು ಗಂಟೆಗಳ ನಂತರ, ಆಕೆಯ ದೇಹವು ಹೆದ್ದಾರಿಯ ಅಂಡರ್‌ಪಾಸ್‌ನಲ್ಲಿ ಪತ್ತೆಯಾಗಿದೆ. ನಾಲ್ವರು ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚೆನ್ನಕೇಶವುಲು ಅವರು 2019 ರಲ್ಲಿ ಆಪಾದಿತ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರು. ಆಪಾದಿತ ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮೂರು ಸದಸ್ಯರ ಆಯೋಗವನ್ನು ನೇಮಿಸಿದೆ.
ನಾಲ್ವರು ಆರೋಪಿಗಳನ್ನು ಹೈದರಾಬಾದ್ ಬಳಿ ಎನ್ ಹೆಚ್ -44 ನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಹೈದರಾಬಾದ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಎನ್‌ಕೌಂಟರ್ ಹತ್ಯೆಗೆ ಸಂಬಂಧಿಸಿದಂತೆ ಮೂವರು ಸದಸ್ಯರ ತನಿಖಾ ಆಯೋಗದ ಮುಚ್ಚಿದ ಕವರ್ ವರದಿಯನ್ನು ಹಂಚಿಕೊಳ್ಳಲು ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದ್ದು, ಪ್ರಕರಣವನ್ನು ಮುಂದಿನ ಕ್ರಮಕ್ಕೆ ತೆಲಂಗಾಣ ಹೈಕೋರ್ಟ್‌ಗೆ ವರ್ಗಾಯಿಸಿದೆ.