ಹದ್ದು ಹಾರುತ್ತಿದೆ

ಹುಲಿಕಟ್ಟಿ ಚನ್ನಬಸಪ್ಪ
ಸಂಪುಟ – 06, ಸಂಚಿಕೆ 14, ಏಪ್ರೀಲ್ 01, 2012
13
 
 
 
 
 
 
 
 
 
 
 
 
 
 
ಹದ್ದು ಹಾರುತ್ತಿದೆ ಗೆಳೆಯಾ
ಯುದ್ಧ ಭೂಮಿಯ ಮೇಲೆ
ಬಿದ್ದ ಹೆಣಗಳ ಕಡೆಗೆ
ರೆಕ್ಕೆ ಬಡಿದು ||1||
ಹಸಿಮಾಂಸ, ಬಿಸಿರಕ್ತ
ಆಹಾರ ಅರಸುತ್ತ
ಹಾರುತ್ತಿದೆ ಗೆಳೆಯಾ
ಕ್ರೂರ ಕೊಕ್ಕಿನ ಹದ್ದು ||2||
ಸತ್ತವರ ಮೇಲೆರಗಿ
ಕಣ್ಣುಗುಡ್ಡೆಯ ಕುಕ್ಕಿ
ಎದೆಯ ಗುಂಡಿಗೆ, ಕರುಳು
ಬಗೆ ಬಗೆದು ತಿಂದು ||3||
ಶ್ವೇತ ಭವನದ ದೊರೆಯು
ಸಾಕಿದಾ ಹದ್ದು!
ಯುದ್ಧದಾಹದ ಕ್ರೂರ
ಕಣ್ಣಿನಾ ಹದ್ದು
ಹಾರುತ್ತಿದೆ ಗೆಳೆಯಾ ಹದ್ದುಮೀರಿ ||4||
ಇರಾಕ್, ಲೆಬನಾನ್, ಸಿರಿಯಾ
ನೆತ್ತಿಯಾ ಮೇಲೆ
ಆಪ್ಘಾನ್, ಇಸ್ರೇಲ್, ಕುವೈತ್
ಸರಹದ್ದಿನೊಳಗೆ
ಹಾರುತ್ತಿದೆ ಹದ್ದು ರೆಕ್ಕೆಬಿಚ್ಚಿ ||5||
ಯುದ್ಧ ನಡೆಯಲೇ ಬೇಕು
ಹದ್ದು ಬದುಕಲು ಗೆಳೆಯಾ
ಬಾಂಬು ಸಿಡಿಯಲೇ ಬೇಕು
ಜಗದ ತುಂಬ ||6||
ಏಸು, ಪೈಗಂಬರರ
ಶಾಂತಿಯ ಹೃದಯದ
ಮೇಲೆರಗಿದೆ ಹದ್ದು
ಬುದ್ಧನ ಕನಸುಗಳ
ಕುಕ್ಕಿ ತಿನ್ನುತ್ತಿದೆ ಹದ್ದು
ರೆಕ್ಕೆ ಮುರಿಯಲೇ ಬೇಕು
ಏಳು ಗೆಳೆಯಾ ||7||
0

Donate Janashakthi Media

Leave a Reply

Your email address will not be published. Required fields are marked *