ಹಾಸನ: ಫೋಟೋ ಶೂಟ್ ಮಾಡುವಾಗ ಯುವಕನೋರ್ವ ಕಾಲು ಜಾರಿ ಕಟ್ಟೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹಾಸನ ತಾಲ್ಲೂಕಿನ, ಹಾಲುವಾಗಿಲು ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ:ವಿದ್ಯುತ್ ಗ್ರಾಹಕರ ಸುಲಿಗೆ! ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು!! – ಸಿಪಿಐ(ಎಂ)
ನಾಗೇಂದ್ರ (19) ಸಾವನ್ನಪ್ಪಿದ ಯುವಕ. ಭೀಮ ಜ್ಯೂವೆರಲ್ಸ್‌ನಲ್ಲಿ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಹಾಗೂ ಮಂಜುನಾಥ್ ನಿನ್ನೆ ಕೆಲಸ ಮುಗಿಸಿ ಹಾಲುವಾಗಿಲು ಬಳಿ ಹರಿಯುವ ನೀರು ನೋಡಲು ತೆರಳಿದ್ದರು.
ನಾಗೇಂದ್ರ ಹರಿಯುವ ನೀರಿನಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವಾಗ ಕಾಲು ಜಾರಿ ಕಟ್ಟೆಗೆ ಬಿದ್ದಿದ್ದಾನೆ. ಕೂಡಲೇ ಸ್ನೇಹಿತನ ರಕ್ಷಣೆಗೆ ಮಂಜುನಾಥ್ ಮುಂದಾದರು ಸಾಧ್ಯವಾಗಿಲ್ಲ. ಅದೃಷ್ಟವಶಾತ್ ಮಂಜುನಾಥ್ ಕೂಡ ಅಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ರಾತ್ರಿ ಆಗಿರುವುದರಿಂದ ವಾಪಾಸ್ ಆಗಿದ್ದರು.
ಇದನ್ನೂ ಓದಿ:3000 ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ: ಲಕ್ಷ್ಮೀ ಹೆಬ್ಬಾಳಕರ್
ಇಂದು ಬೆಳಿಗ್ಗೆಯಿಂದ ನಾಗೇಂದ್ರ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.