ಸುಲಲಿತ ಜೀವನ ನಿರ್ವಣೆ ಸೂಚ್ಯಾಕ : ವಾಸಕ್ಕೆ ದೇಶದಲ್ಲೇ ಬೆಂಗಳೂರು ನಂ. 1

ಬೆಂಗಳೂರು :  ವಾಸಕ್ಕೆ ದೇಶದಲ್ಲೇ ಬೆಂಗಳೂರು ಅತ್ಯುತ್ತಮ ನಗರ ಎಂದು ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಬಿಡುಗಡೆ ಮಾಡಿರುವ ʼಸುಲಲಿತ ಜೀವನ ನಿರ್ವಣೆ ಸೂಚ್ಯಾಕʼ ಪಟ್ಟಿಯಲ್ಲಿ ಬೆಂಗಳೂರು ದೇಶದಲ್ಲೇ  ಅದು ನಂ.1 ಸ್ಥಾನ ಪಡೆದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ವಿಡಿಯೂ ಕಾನ್ಪರೆನ್ಸ್‌ ಮೂಲಕ ನಡೆಸ ಕಾರ್ಯಕ್ರಮದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಗುರುವಾರ ಈ ಸೂಚ್ಯಂಕ ಪಟ್ಟಿಯನ್ನು ಪ್ರಕಟಿಸಿದರು. ಸಚಿವಾಲಯವು ದೇಶದ 111 ನಗರಗಳಲ್ಲಿ ಜೀವನ ಗುಣಮಟ್ಟದ ಬಗ್ಗೆ ಸಮೀಕ್ಷೆ ನಡೆಸಿತ್ತು.

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 51 ನಗರಗಳು ಒಳಗೊಂಡಿವೆ. ಜೀವನ ನಿರ್ವಹಣೆ ಸೂಚ್ಯಂಕ ಪ್ರಕಾರ ಬೆಂಗಳೂರು  66.70 ಅಂಕಗಳನ್ನು ಪಡೆದುಕೊಂಡಿದೆ. 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ದಾವಣಗೆರೆ ಒಂಬತ್ತನೇ ಸ್ಥಾನ  ಪಡೆದುಕೊಂಡಿದೆ. ದಾವಣಗೆರೆ 5525 ಅಂಕ ಪಡೆದುಕೊಂಡಿದೆ.

2019 ರ ಸಮೀಕ್ಷೆಯಲ್ಲಿ ಬೆಂಗಳೂರು 58 ಸ್ಥಾನ ಪಡೆದುಕೊಂಡಿದ್ದ ಬೆಂಗಳೂರು ಈ ಬಾರಿ ಅಗ್ರಸ್ಥಾನ ಪಡೆದುಕೊಂಡಿದ್ದಕ್ಕೆ ಬಿಬಿಎಂಪಿ ಎನ್.‌ ಮಂಜುನಾಥ ಪ್ರಸಾದ್‌ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಮೊದಲ ಸ್ಥಾನಕ್ಕೆ ಬಿಬಿಎಂಪಿ ಮಾತ್ರ ಕಾರಣವಲ್ಲ. ಜಲಮಂಡಳಿ, ಬೆಸ್ಕಾಂ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮೆಟ್ರೋ ರೈಲು ನಿಗಮ, ಬಿಎಂಟಿಸಿ ಪಾತ್ರವೂ ಇದೆ. ನಗರಾಡಳಿತ ನಿರ್ವಹಣೆ ಸೂಚ್ಯಂಕಗಳಲ್ಲಿ ಬೆಂಗಳೂರಿಗೆ 31ನೇ ಸ್ಥಾನ ಲಭಿಸಿದೆ. ‘ನಗರಾಡಳಿತ ನಿರ್ವಹಣೆ ಸೂಚ್ಯಂಕದಲ್ಲೂ ಅಗ್ರಸ್ಥಾನಕ್ಕೆ ಏರಲು ಪ್ರಯತ್ನಿಸುತ್ತೇವೆ. ಎಲ್ಲಿ ಲೋಪಗಳಿವೆ ಎಂಬುದನ್ನು ಕಂಡುಕೊಂಡು ಸರಿಪಡಿಸಲು ಕ್ರಮ ವಹಿಸುತ್ತೇವೆ’ ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.

ವಿಡಿಯೊ ಕಾನ್ಸರೆನ್ಸ್‌ನಲ್ಲಿ ಭಾಗವಹಿಸಿದ ಸಂಸದ ಪಿ.ಸಿ.ಮೋಹನ್, ‘ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ಬಿಬಿಎಂಪಿ ಸೋಂಕು ನಿಯಂತ್ರಣ ಮಾಡುವ ಮೂಲಕ ಇತರರಿಗೆ ಮಾದರಿಯಾಗಿತ್ತು. ಕೆರೆಗಳ ಪುನರುಜೀವನ, ಉದ್ಯಾನಗಳ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳು ಕೈ ಹಿಡಿದಿವೆ. ಸಾಧನೆಗಾಗಿ ಆಯುಕ್ತರನ್ನು ಹಾಗೂ ಬಿಬಿಎಂಪಿಯ ಆಡಳಿತ ವರ್ಗವನ್ನು ಅಭಿನಂದಿಸುತ್ತೇನೆ’ ಎಂದರು.

Donate Janashakthi Media

Leave a Reply

Your email address will not be published. Required fields are marked *