ಚೆನ್ನೈ: ಕೋರೊನಾ ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ನಕಲಿ ಸಿಬಿಎಸ್ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಹರಿದಾಡುತ್ತಿದ್ದು ವಿದ್ಯಾರ್ಥಿಗಳ ಗೊಂದಲಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದ್ದ, 10 ಮತ್ತು 12ನೇ ತರಗತಿ ಸಿಬಿಎಸ್ ಇ ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯು ನಕಲಿಯಾಗಿದೆ. ಇದು ಕಳೆದ ವರ್ಷ ಪರೀಕ್ಷಾ ವೇಳಾಪಟ್ಟಿಗೆ ಸಂಬಂಧಪಟ್ಟಂತೆ ಹೊರಡಿಸಿದ ಸುತ್ತೋಲೆಯಾಗಿದೆ. ಈ ನಕಲಿ, ಸುಳ್ಳು ವೇಳಾಪಟ್ಟಿಯನ್ನು ವಿದ್ಯಾರ್ಥಿಗಳು ಪರಿಗಣಿಸಬೇಡಿ ಎಂದು ಸಿಬಿಎಸ್ ಇ ಸ್ಪಷ್ಟನೆ ನೀಡಿದೆ.
ಮಂಡಳಿಯಿಂದ ಯಾವುದೇ ಇಂತಹ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿಲ್ಲ ಎಂದು ಸಿಬಿಎಸ್ ಇ ಸ್ಪಷ್ಟನೆ ನೀಡಿದೆ. ನಕಲಿ ವೇಳಾಪಟ್ಟಿಯಲ್ಲಿ 12 ಮತ್ತು 10ನೇ ತರಗತಿಗೆ ವಾರ್ಷಿಕ ಪರೀಕ್ಷೆ ಜುಲೈ 11 ಮತ್ತು 13 ಎಂದು ಇದೆ. ಫಲಿತಾಂಶ ಜುಲೈ 15ರಂದು ಪ್ರಕಟವಾಗುವ ನಿರೀಕ್ಷೆಯಿದೆ.
There are some persons deliberately trying to create confusion about board exams by circulating old news of 1.4.20 regarding Xand XII exams . students should ignore this old circular of last year and not be misled . pic.twitter.com/EuAmgZYwf6
— CBSE HQ (@cbseindia29) April 2, 2021