ಸರ್ಕಾರ ಉಳಿಸಿಕೊಂಡ ಜಾದೂಗಾರ ಅಶೋಕ್‌ ಗೆಹ್ಲೋಟ್‌

ಜೈಪುರ:  ಕಳೆದ ಒಂದೂವರೆ ತಿಂಗಳಿನಿಂದ ಪ್ರತಿಷ್ಠೆಗೆ ಕಾರಣದಿಂದ ರಾಷ್ಟ್ರೀಯ ಮಟ್ಟದಲ್ಲಿ ಕಾರಣವಾಗಿದ್ದ ರಾಜಾಸ್ಥಾನದಲ್ಲಿನ ಕಾಂಗ್ರೆಸ್‌ ಸರ್ಕಾರವನ್ನು ಸತತ ಹೋರಾಟಗಳ ಮೂಲಕ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಕೊನೆಗೂ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇದರಿಂದ ಆ.೧೪ರಂದು ನಡೆಯುವ ಅಧಿವೇಶನ ನೆಪಮಾತ್ರಕ್ಕೆ ಎನ್ನುವಂತಾಗಿದೆ.

ಜಿದ್ದಾಜಿದ್ದಿ ಅಖಾಡವಾಗಿದ್ದ ರಾಜಸ್ಥಾನ ಕಾಂಗ್ರೆಸ್ ಕೊನೆಗೂ ರಾಹುಲ್ ಗಾಂಧಿ ಮಧ್ಯಪ್ರವೇಶದೊಂದಿಗೆ ಸುಖಾಂತ್ಯವಾಗಿದೆ. ರಾಜಸ್ಥಾನದ ಪ್ರಕ್ಷುಬ್ದತೆ “ಮುಗಿದ ಅಧ್ಯಾಯ” ಎಂದು ಘೋಷಿಸಿದ ಬೆನ್ನಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟ ಮುಂದುವರಿಯಲಿದೆ” ಎಂದು ಭರವಸೆ ನೀಡಿದ್ದಾರೆ.

ಬಂಡಾಯ ನಾಯಕ ಸಚಿನ್ ಪೈಲಟ್ ರಾಹುಲ್ ಗಾಂಧಿ ಜೊತೆಗೆ ಸೋಮವಾರ ಸಭೆ ನಡೆಸಿದ ನಂತರ ರಾಜಸ್ಥಾನದ ಕಾಂಗ್ರೆಸ್ ಬಿಕ್ಕಟ್ಟು ಶಮನಗೊಂಡಿದೆ. ಈ ವೇಳೆ ಕಾಂಗ್ರೆಸ್ ಬಂಡಾಯ ಶಾಸಕರು ತಮ್ಮ ಉನ್ನತ ನಾಯಕರನ್ನು ಭೇಟಿಯಾದ ಸಂದರ್ಭದಲ್ಲಿ ಅವರ ಕುಂದು-ಕೊರತೆಗಳನ್ನು ಸಮಯಕ್ಕೆ ತಕ್ಕಂತೆ ಪರಿಹರಿಸಲಾಗುವುದು ಎಂದು ಭರವಸೆ ನೀಡಲಾಗಿದೆ.

ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಮೂರು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದರು. ಈ ಸಮಿತಿ ಬಂಡಾಯ ನಾಯಕರ ಕುಂದುಕೊರತೆಗಳನ್ನು ಆಲಿಸಲಿದೆ ಎಂದು ಭರವಸೆ ನೀಡಿದ ನಂತರ ಬಂಡಾಯ ಸಂಪೂರ್ಣವಾಗಿ ಶಮನವಾಗಿದೆ ಎನ್ನಲಾಗುತ್ತಿದೆ.

ಈ ಬಂಡಾಯ ಶಮನದ ಕುರಿತು ಮಾತನಾಡಿರುವ ಅವರು, “ನಮ್ಮ ಎಲ್ಲ ಶಾಸಕರು ಇಷ್ಟು ದಿನ ಒಟ್ಟಿಗೆ ಇದ್ದರು. ಇದು ರಾಜಸ್ಥಾನದ ಜನರ ಗೆಲುವು. ರಾಜ್ಯದ ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ. ಶಾಸಕರು ಅಸಮಾಧಾನಗೊಳ್ಳುವುದು ಸಾಮಾನ್ಯ. ಆದರೆ, ಇದು ಈಗ ಮುಗಿದ ಅಧ್ಯಾಯ. ರಾಷ್ಟ್ರ, ರಾಜ್ಯ, ಜನರಿಗೆ ಸೇವೆ ಸಲ್ಲಿಸಲು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಕೆಲವೊಮ್ಮೆ ಸಹಿಷ್ಣುತೆ ವಹಿಸಬೇಕಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ, “ಮುಂದಿನ ದಿನಗಳಲ್ಲಿ ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ. ದೂರ ಹೋದ ನಮ್ಮ ಸ್ನೇಹಿತರು ಈಗ ಮತ್ತೆ ಹಿಂತಿರುಗಿದ್ದಾರೆ. ನಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ನಿವಾರಿಸುತ್ತೇವೆ ಮತ್ತು ರಾಜ್ಯಕ್ಕೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪವನ್ನು ಈಡೇರಿಸುತ್ತೇವೆ ಎಂದು ನಾನು ಭಾವಿಸುತ್ತೇನೆ” ಎಂದು ಗೆಹ್ಲೋಟ್ ಆಶ್ವಾಸನೆ ನೀಡಿದ್ದಾರೆ.

ಇದೀಗ ಮತ್ತೆ ಪಕ್ಷದ ಜೊತೆಗೆ ಒಂದಾಗಿರುವ ಮಾಜಿ ಡಿಸಿಎಂ ಅಶೋಕ್‌ ಪೈಲಟ್‌ ಯಾವುದೇ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿಲ್ಲ ಎಂದು ಹೇಳಲಾಗುತ್ತಿದೆಯಾದರೂ ಬಂಡಾಯದ ವೇಳೆ ಅವರಿಂದ ಕಿತ್ತುಕೊಳ್ಳಲಾಗಿದ್ದ ಉಪಮುಖ್ಯಮಂತ್ರಿ ಸ್ಥಾನವನ್ನು ಮರಳಿಸುವ ಸಾಧ್ಯತೆ ಇದೆ. ಆದರೆ ಪ್ರದೇಶ ಕಾಂಗ್ರೆಸ್‌ ಸ್ಥಾನವನ್ನು ಮರಳಿಸುವ ಸಾಧ್ಯತೆಗಳಿಲ್ಲ.

ತಮ್ಮ ಓದಿನ ದಿನಗಳಲ್ಲಿ ತಮ್ಮ ತಂದೆ ಪ್ರಖ್ಯಾತ ಜಾದೂಗಾರ ಬಾಬು ಲಕ್ಷ್ಮಣ  ಸಿಂಗ್‌ ಗೆಹ್ಲೋಟ್‌ ಅವರೊಂದಿಗೆ ಜಾದೂ ಕಾರ್ಯಕ್ರಮ ನಡೆಸಿಕೊಡಲು ಹೋಗುತ್ತಿದ್ದರು. ಈಗಲೂ ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ಆತ್ಮೀಯರ ಜೊತೆಯಿದ್ದಾಗ ಕೆಲ ಜಾದೂಗಳನ್ನು ಪ್ರದರ್ಶಿಸುವುದುಂಟು. ಸಚಿನ್‌ ಪೈಲಟ್‌ ಅವರ ಬಂಡಾಯಕ್ಕೂ ಮೊದಲು ಕೆಲ ಬಂಡಾಯಗಳು ಹಾಗೂ ಅಧಿಕಾರಕ್ಕಾಗಿ ನಡೆಯುವ ಹಣಾಹಣಿಗಳನ್ನು ಎದುರಿಸಿಯೇ ಎರಡು ಬಾರಿ ಮುಖ್ಯಮಂತ್ರಿಯಾಗದ ಅಶೋಕ್‌ ಗೆಹ್ಲೋಟ್‌ ಅವರನ್ನು ರಾಜಾಸ್ಥಾನದಲ್ಲಿ ರಾಜಕಾರಣದ  ಜಾದೂಗಾರ ಎಂದೇ ಕರೆಯುತ್ತಾರೆ.

Donate Janashakthi Media

Leave a Reply

Your email address will not be published. Required fields are marked *