- ಸೂರ್ಯ ಸ್ಫೋಟಕ ಅರ್ಧ ಶತಕ
- ಡೇವಿಡ್ ಮಿಲ್ಲರ್ ಸ್ಫೋಟಕ ಶತಕ
ಗುವಾಹಟಿ: ಸಿಕ್ಸರ್, ಬೌಂಡರಿಗಳ ಆಟದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 16 ರನ್ ಗಳಿಂದ ಗೆದ್ದು ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.
ಗೆಲ್ಲಲು 238 ರನ್‌ಗಳ ಕಠಿಣ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು. ಈ ಪಂದ್ಯದಲ್ಲಿ ಒಟ್ಟು 40 ಬೌಂಡರಿ ಸಿಡಿದರೆ 28 ಸಿಕ್ಸ್ ಸಿಡಿಸಲ್ಪಟ್ಟಿತ್ತು. ಭಾರತದ ಪರ 25 ಬೌಂಡರಿ 13 ಸಿಕ್ಸ್ ದಾಖಲಾದರೆ ದಕ್ಷಿಣ ಆಫ್ರಿಕಾದ ಪರ 15 ಬೌಂಡರಿ 12 ಸಿಕ್ಸ್ ದಾಖಲಾಗಿದೆ.
6.2 ಓವರ್‌ಗೆ 47 ರನ್ ಗಳಿಸಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ ಪರ ಡೇವಿಡ್ ಮಿಲ್ಲರ್ ಮತ್ತು ಕ್ವಿಂಟನ್ ಡಿ ಕಾಕ್ ಮುರಿಯದ ನಾಲ್ಕನೇ ವಿಕೆಟ್‌ಗೆ 84 ಎಸೆತಗಳಲ್ಲಿ 174 ರನ್ ಜೊತೆಯಾಟವಾಡಿ ಗೆಲುವಿನ ಹತ್ತಿರ ತಂದರು. ದಕ್ಷಿಣ ಆಫ್ರಿಕಾಕ್ಕೆ ಆರಂಭದಲ್ಲೇ ಬೌಲರ್‌ಗಳು ಆಘಾತ ನೀಡಿದರು. ತಂಡದ ನಾಯಕ ಟೆಂಬಾ ಬವುಮಾ ಹಾಗೂ ರಿಲೀ ರೊಸೊವ್ 2ನೇ ಓವರ್‌ನಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಐಡೆನ್ ಮಾಕ್ರಮ್ 19 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿಯೊಂದಿಗೆ 33 ರನ್ ಪೇರಿಸಿದರು. ಇವರ ಸ್ಫೋಟಕ ಬ್ಯಾಟಿಂಗ್‌ನಿಂದ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಇದಕ್ಕೆ ಅಕ್ಷರ್ ಪಟೇಲ್ ಬ್ರೇಕ್ ಹಾಕಿ, ಮಾಕ್ರಮ್‌ಗೆ ಪೆವಿಲಿಯನ್ ದಾರಿ ತೋರಿದರು.
ನಂತರ ಒಂದಾದ ಕ್ವಿಂಟನ್ ಡಿಕಾಕ್ ಹಾಗೂ ಡೇವಿಡ್ ಮಿಲ್ಲರ್ ಉತ್ತಮ ಜೊತೆಯಾಟವಾಡಿದರು. ಈ ವೇಳೆ ಕ್ವಿಂಟನ್ ಡಿಕಾಕ್ 67 ಎಸೆತಗಳಲ್ಲಿ 63 ರನ್ (3 ಬೌಂಡರಿ, 3 ಸಿಕ್ಸರ್) ಸಿಡಿಸಿದರೆ. ಸ್ಫೋಟಕ ಶತಕ ಸಿಡಿಸಿದ ಡೇವಿಡ್ ಮಿಲ್ಲರ್ ಕೇವಲ 47 ಎಸೆತಗಳಲ್ಲಿ 106 ರನ್ (7 ಸಿಕ್ಸರ್, 8 ಬೌಂಡರಿ) ಚಚ್ಚಿ ಅಜೇಯರಾಗುಳಿದರು.