ಹಾವೇರಿ: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ನಡೆದ ಭಾರಿ ಭ್ರಷ್ಟಾಚಾರದ ತನಿಖೆಗೆಗಾಗಿ ಹಾಗೂ ತಾಲ್ಲೂಕು ಅಧಿಕಾರಿ ಕರ್ತವ್ಯ ನಿರ್ಲಕ್ಷಿಸಿದಕ್ಕೆ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್ ಅವರಿಗೆ ದೂರು ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ನಂ-2, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಂದ ವಂಚನೆ ವಿರೋಧಿಸಿ, ಕೂಡಲೇ ಸೌಲಭ್ಯ ವಿತರಣೆ ಮಾಡಲು ಒತ್ತಾಯಿಸಿ ಎಸ್ಎಫ್ಐ ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಸತಿ ನಿಲಯದ ಎದುರು ವಿದ್ಯಾರ್ಥಿಗಳು ದಿನವಿಡಿ ಪ್ರತಿಭಟನಾ ಧರಣಿ ನಡೆಸಿ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ನಡೆಸಿದ್ದಾರೆ. ಆದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ದೂರಿದರು.
ಸಮಾಜ ಕಲ್ಯಾಣ ಇಲಾಖೆಯ ಕಾರ್ಯವೈಖರಿ ಏನು? ವಿಶೇಷವಾಗಿ ದಲಿತ ಸಮುದಾಯದ ಪರವಾಗಿ ಕಾರ್ಯನಿರ್ವಹಿಸುವುದು ಆದರ ಬದಲಾಗಿ ಬಡ, ದಲಿತ ವಿದ್ಯಾರ್ಥಿಗಳನ್ನು ಸರ್ಕಾರದ ಸೌಲಭ್ಯ ವಂಚನೆ ಮಾಡಲು ತಾಲ್ಲೂಕಾಧಿಕಾರಿ ಆಂಜನೇಯ ಹುಲ್ಲಾಳ ಬೇಜವಾಬ್ದಾರಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಎಸ್ಎಫ್ಐ ಸಂಘಟನೆಯ ನಿರಂತರ ಹೋರಾಟದಿಂದ ಉಳಿಸಿಕೊಂಡು ಬಂದ ಕಂಪ್ಯೂಟರ್ ಲ್ಯಾಬ್ ಹಾಗೂ ಗ್ರಂಥಾಲಯದಲ್ಲಿ ಕುರ್ಚಿ, ಮೇಜು ಕಾಣುತ್ತಿಲ್ಲ ಇದಕ್ಕೆಲ್ಲ ಯಾರು ಹೊಣೆ? ಸಿ.ಸಿ.ಕ್ಯಾಮರಾ ಗಳು ಎಲ್ಲಿ ಹೋದವು? ಕೋತಿ ತಾನು ತಿಂದು ಮೇಕೆ ಮೂತ್ತಿಗೆ ಒರೆಸಿದ ಹಾಗೆ ಅಧಿಕಾರಿಗಳೇ ರಜಾ ಸಮಯದಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಮಾರಿಕೊಂಡು ಹಗಲು ಲೂಟಿ ಹೊಡಿದು ವಿದ್ಯಾರ್ಥಿಗಳ ತಲೆಗೆ ಕಟ್ಟುತ್ತಿರುವುದು ಖಂಡನೀಯ. ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು, ಶಾಸಕರು, ಉಸ್ತುವಾರಿ ಸಚಿವರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಲೋಕಯುಕ್ತಾ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಶಿಕ್ಷೆ ನೀಡಬೇಕು ಇಲ್ಲವಾದರೆ ಮುಂದಿನ ದಿನ ತೀವ್ರತೆರನಾದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಮುಖಂಡರು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಇಲಾಖೆ ಕಟ್ಟುನಿಟ್ಟಾದ ಕ್ರಮತೆಗೆದುಕೊಳ್ಳಬೇಕು. ಲಕ್ಷಾಂತರ ರೂಪಾಯಿ ಹಗರಣವಾಗಿದೆ ಎಂಬ ಅನುಮಾನ ಮೂಡುತ್ತಿದೆ ಸಂಬಂಧಿಸಿದ ಅಧಿಕಾರಿಗಳು ದೂರ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಬೇಕು ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಒಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಧರಣೆ ಹೋರಾಟ ನಡೆಸಲಾಗುವುದು. ಆಗ್ರಹಿಸಿದರು.
ಹಾವೇರಿ ನಗರದ ವಸತಿ ನಿಲಯಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ವಿದ್ಯಾರ್ಥಿಗಳು ಸಂಘಟಿತರಾಗಲು ಎಸ್ಎಫ್ಐ ಸಂಘಟನೆ ಕಟ್ಟುವುದು ವಿದ್ಯಾರ್ಥಿಗಳ ಹಕ್ಕು ಎಂದು ಅಧಿಕಾರಿಗಳಿಗೆ ಪಾಠ ಮಾಡಬೇಕು. ಶಾಲಾ-ಕಾಲೇಜ್, ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಸಂಘಟಿತರಾಗುವುದನ್ನು ತಡೆಗಟ್ಟುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ನಂಬರ್-2 ಹಾಸ್ಟೆಲ್ ಗಳಲ್ಲಿ ಕಳವು ಆಗಿರುವ ಚೇರ್ ಟೇಬಲ್, ಸಿ.ಸಿ ಕ್ಯಾಮರಾ, ಪುಸ್ತಕ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಇಡೀ ಹಾಸ್ಟೆಲ್ ನಲ್ಲಿ ಸಾಮಗ್ರಿಗಳನ್ನು ಅಧಿಕಾರಿಗಳ ಲೂಟಿ ಆಗಿದೆ ಅದರ ಸಮಗ್ರ ತನಿಖೆ ಆಗಬೇಕು. ಹಾಸ್ಟೆಲ್ ಗಳಲ್ಲಿ ನಡೆದಿರುವ ಭಾರಿ ಭ್ರಷ್ಟಾಚಾರದ ತನಿಖೆಗಾಗಿ ಉನ್ನತ ಅಧಿಕಾರಿಗಳ ತಂಡ ರಚಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಆಕ್ರೋಶ ವ್ಯಕ್ತಪಡಿಸಿದರು.
ಹಾವೇರಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ಸಿ.ಸಿ ಕ್ಯಾಮರಾ ಖರೀದಿ ಪರಿಶೀಲನೆ ನಡೆಸಬೇಕು. ಸಿ.ಸಿ.ಕ್ಯಾಮರಾ ಅವ್ಯವಸ್ಥೆ ಆಗಿವೆ ಅದರಲ್ಲಿ ನಡೆದಿರುವ ಭಾರಿ ಭ್ರಷ್ಟಾಚಾರ ನಡೆದಿದೆ ಅದನ್ನು ಸಮಗ್ರ ತನಿಖೆ ನಡೆಸಬೇಕು. ಎಲ್ಲಾ ವಸತಿ ನಿಲಯಗಳ ಸಿ.ಸಿ ಕ್ಯಾಮರಾ ಪೋಟೋ ವರದಿಗಳನ್ನು ತಲುಪಿಸಬೇಕು, ನಂಬರ್ -2 ಹಾಸ್ಟೆಲ್ ನಲ್ಲಿ ಮೂಲ ವಾರ್ಡನ್ ಹುದ್ದೆ ಇಲ್ಲದ ವ್ಯಕ್ತಿ ನಿರ್ವಹಣೆ ಮಾಡುತ್ತಿದ್ದು ಅದರು ಬಗ್ಗೆ ಸೂಕ್ತ ತನಿಖೆ ನಡೆಸಿ ಅವ್ಯವಹಾರದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕ ಅಧಿಕಾರಿಗಳ ನಿರ್ಲಕ್ಷಿಸತನ ದಿಂದ ವಾರ್ಡನ್ ಹುದ್ದೆಗಳು ಬದಲಾವಣೆ ಜವಾಬ್ದಾರಿ ಕೆಲಸಗಳಲ್ಲಿ ಲಂಚದ ವ್ಯವಹಾರ ನಡೆದಿದೆ ಅದರ ಬಗ್ಗೆ ತನಿಖೆ ನಡೆಸಬೇಕು. ತಾಲ್ಲೂಕ ಅಧಿಕಾರಿಗಳ ಅನೇಕ ಲೋಪದೋಷಗಳನ್ನು ಪರಿಶೀಲನೆ ಅವರನ್ನು ಕೂಡಲೇ ಅಮಾನತು ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ದಲಿತ ವಿದ್ಯಾರ್ಥಿಗಳೇ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಅದರ ಕರ್ತವ್ಯ ಲೋಪವನ್ನು ತಾಲ್ಲೂಕು ಅಧಿಕಾರಿಗಳು ಹೊರಬೇಕು. ಈ ಎಲ್ಲಾ ಪ್ರಶ್ನೆಗಳಿಗೆ ಕೂಡಲೇ ಅಧಿಕಾರಿಗಳು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸುತ್ತೇನೆ. ತನಿಖೆಗೆ ಆದೇಶಿಸುತ್ತೇನೆ ಕೂಡಲೇ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷರು ಬಸವರಾಜ ಎಸ್, ಹಾಸ್ಟೆಲ್ ಉಪಸಮಿತಿ ರಾಜ್ಯ ಸಂಚಾಲಕ ಅರುಣ್ ನಾಗವತ್, ನವೀನ ಹೆಚ್ ಟಿ, ದಯಾನಂದ ಎಸ್, ರೇವಣ್ಣಸಿದ್ದೇಶ, ಪ್ರಥಮೇಶ ಡಿ ಉಪಸ್ಥಿತರಿದ್ದರು.
