ಸಂಪುಟ – 06, ಸಂಚಿಕೆ 16, ಏಪ್ರೀಲ್ 15, 2012
ಸಮಾಜದಲ್ಲಿರುವ ಸಾಮಾಜಿಕ ಸಮಸ್ಯೆಗಳ ಹಾಗೂ ಇತಿಹಾಸದ ಸತ್ಯ ಹಾಗೂ ವಾಸ್ತವ ಸಂಗತಿಗಳನ್ನು ಮತ್ತು ಸಂವಿಧಾನದ ಆಶಯಗಳನ್ನೊಳಗೊಂಡ ಅಂಶಗಳು ಪಠ್ಯಕ್ರಮವಾಗಿ ಬರಬೇಕೆಂದು ಜಿ.ಎನ್.ನಾಗರಾಜ್ರವರು ಹೇಳಿದರು. ಅವರು ಡಾ||ಸಬೀಹಾ ಭೂಮಿಗೌಡ ರವರ ಕೋಮುವಾದ ಮತ್ತು ಮಹಿಳೆ ಲೇಖನ ಹಾಗೂ ಶಶಿಕಲಾ ವೀರಯ್ಯಸ್ವಾಮಿ ರವರ ನನ್ನವತಾರ ಕವನ ಕುರಿತು ಪ್ರಗತಿಪರ ವಿದ್ಯಾಥರ್ಿ-ಯುವಜನ ವೇದಿಕೆಯು ಬೆಂಗಳೂರು ನಗರದ ಶಾಸಕರ ಭವನದ ಸಭಾಂಗಣದಲ್ಲಿ ಏಪ್ರಿಲ್ 4ರಂದು ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಬೆಂಗಳೂರು ವಿ.ವಿ ಯ ಬಿ.ಎ. ತೃತೀಯ ಸೆಮಿಸ್ಟರ್ ಕನ್ನಡ ವಿಷಯದಲ್ಲಿರುವ ಈ ಪಾಠ ಕೋಮುವಾದದ ಕರಾಳ ಮುಖಗಳನ್ನು ವಿವರಿಸುತ್ತಾ, ಕೋಮುಗಲಭೆಗಳಲ್ಲಿ ಮಹಿಳೆ ಹೇಗೆ ಕ್ರೂರ ಧಾಳಿಗೆ ಒಳಗಾಗುತ್ತಾಳೆ ಎನ್ನುವುದನ್ನು ವಿವರಿಸುತ್ತದೆ. ದೇಶದ ಜಾತ್ಯಾತೀತ ತತ್ವಕ್ಕೆ ಅನುಗುಣವಾಗಿ ಈ ಲೇಖನ ಬರೆಯಲಾಗಿದ್ದು, ಇದು ಪದವಿ ವಿದ್ಯಾಥರ್ಿಗಳು ಕೋಮುವಾದದ ಅಪಾಯಗಳ ಕುರಿತು ಅಥರ್ೈಸಿಕೊಳ್ಳಲು ಸಹಕಾರಿಯಾಗಿದೆ. ಇಂತಹ ಲೇಖನವನ್ನು ಎ.ಬಿ.ವಿ.ಪಿ ವಿರೋಧಿಸುವ ಮೂಲಕ ತನ್ನ ಕೋಮುವಾದಿ ಮಖವನ್ನು ಬಯಲುಗೊಳಿಸಿಕೊಂಡಿದೆ ಎಂದು ಅವರು ಕುಟುಕಿದರು.
ಪ್ರೊ|| ಇಂದಿರಾ ಕೃಷ್ಣಪ್ಪ ರವರು ಮಾತನಾಡಿ ಪಠ್ಯಕ್ರಮದಲ್ಲಿ ಅಳವಡಿಸಿರುವ ಲೇಖನ ಉತ್ತಮವಾಗಿದ್ದು ಇಂತಹ ಇನ್ನು ಅನೇಕ ವಿಚಾರಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು. ನನ್ನವತಾರ ಕವನ ಸಮಾಜದ ಪ್ರಸ್ತುತ ಸಮಸ್ಯೆಗಳಾದ ಅಪೌಷ್ಠಿಕತೆ, ಬಡತನ ಕುರಿತು ಶ್ರೀಕೃಷ್ಣನನ್ನು ವಿಡಂಬನೆ ಮಾಡಿ ಬರೆಯಲಾಗಿದ್ದು, ದೇವರನ್ನು ವಿಡಂಬನೆ ಮಾಡುವ ಪರಂಪರೆ ನಮ್ಮಲ್ಲಿದೆ. ಇದನ್ನು ಅನಗತ್ಯವಾಗಿ ವಿವಾದ ಎಬ್ಬಿಸಲು ಎ.ಬಿ.ವಿ.ಪಿ ಹೊರಟಿದೆ ಎಂದರು.
ದಲಿತ ಸಂಘರ್ಷ ಸಮಿತಿ(ಅಂಬೇಡ್ಕವಾದ)ದ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್ರವರು ಮಾತನಾಡಿ ಸಂಘಪರಿವಾರದ ಕೋಮುವಾದಿ ಕುತಂತ್ರಗಳನ್ನು ಸೋಲಿಸಬೇಕಿದೆ ಎಂದರು. ಅಲ್ಲದೇ ಸಕರ್ಾರಿ ಶಾಲೆಗಳು ಹಿಂಸೆಯನ್ನು ಕಲಿಸುತ್ತವೆ. ನಕ್ಸಲ್ವಾದಿಗಳನ್ನು ತಯಾರು ಮಾಡುತ್ತವೆ ಎಂದು ಹೇಳಿಕೆ ನೀಡಿರುವ ರವಿಶಂಕರ್ ಗುರೂಜಿ ವಿರುದ್ಧವೂ ಹೋರಾಟ ನಡೆಸಬೇಕಿದೆ ಎಂದರು.
ಡಿ.ವೈ.ಎಫ್.ಐ ರಾಜ್ಯ ಕಾರ್ಯದಶರ್ಿ ರಾಜಶೇಖರ್ ಮೂತರ್ಿ, ವಿದ್ಯಾಥರ್ಿ ಜನತಾದಳ ರಾಜ್ಯಾಧ್ಯಕ್ಷರಾದ ದಾ.ಕೃ.ದೇವರಾಜ್, ಎಸ್.ಎಸ್.ಡಿ.ಎಸ್.ಎಫ್ ರಾಜ್ಯಾಧ್ಯಕ್ಷರಾದ ಗೋವಿಂದಯ್ಯ, ಡಿ.ಎಸ್.ಎಫ್ ರಾಜ್ಯಾಧ್ಯಕ್ಷರಾದ ರಾಜಗೋಪಾಲ್, ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದಶರ್ಿ ಲಿಂಗರಾಜು, ಪ್ರಗತಿಪರ ಚಿಂತಕರಾದ ಚೇಳೂರು ವೆಂಕಟೇಶ್, ಕನರ್ಾಟಕ ಜನಶಕ್ತಿಯ ವಾಸು.ಎಚ್.ಎಂ, ಗೌರಿ, ಎಸ್.ಎಫ್.ಐ ರಾಜ್ಯ ಕಾರ್ಯದಶರ್ಿ ಹುಳ್ಳಿ ಉಮೇಶ್, ಎನ್.ಎಸ್.ಯು.ಐ ಮುಖಂಡರಾದ ರವಿ ಕಿರಣ್ ಭಾಗವಹಿಸಿ ಮಾತನಾಡಿದರು. ಎಸ್.ಎಫ್.ಐ ಮುಖಂಡರಾದ ಮುನಿರಾಜು.ಎಂ ಸ್ವಾಗತಿಸಿದರು. ಯುವರಾಜ್.ಎಂ.ಪಿ, ವಿ.ಜೆ.ಡಿ.ಎಸ್ ನ ಮಂಜುನಾಥ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಎಸ್.ಎಫ್.ಐ ರಾಜ್ಯಾಧ್ಯಕ್ಷರಾದ ಅನಂತನಾಯ್ಕ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
0