ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. 20 ದಿನಗಳಲ್ಲಿಯೇ ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ ಕೊರೊನಾ ಹೆಚ್ಚಾಗುತ್ತಲೆ ಇದೆ. ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ ಸುಧಾಕರ್ ಅವರ ತಂದೆ ಪಿ. ಎನ್ ಕೇಶವ ರೆಡ್ಡಿ ಅವರಿಗೆ ಮೊನ್ನೆ ಕೊರೊನಾ ಪಾಸಿಟೀವ್ ಆಗಿದ್ದು, “ನನ್ನ ತಂದೆಯವರಿಗೆ ಜ್ವರ ಕೆಮ್ಮು ಸಮಸ್ಯೆ ಕಂಡು ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್ -19 ಪರೀಕ್ಷೆ ಮಾಡಿದಾಗ ಸೋಂಕು ಇರುವುದು ದೃಢಪಟ್ಟಿದೆ. ಕುಟುಂಬದ ಇತರ ಸದಸ್ಯರ ವರದಿಗಾಗಿ ಕಾಯುತ್ತಿದ್ದೇನೆ ಎಂದು ಹಾಗೂ ಶೀಘ್ರವಾಗಿ 82 ವರ್ಷದ ನನ್ನ ತಂದೆ ಗುಣಮುಖರಾಗಲಿ ಎಂದು ನೀವೂ ಪ್ರಾರ್ಥಿಸಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಸುಧಾಕರ್ ಟ್ವೀಟ್ ಮಾಡಿದ್ದರು.
ಆದರೆ ನಿನ್ನೆ ಸುಧಾಕರ್ ಅವರ ಹೆಂಡತಿ ಹಾಗೂ ಪುತ್ರಿಗೂ ಕೊರೊನಾ ಸೋಂಕು ದೃಢಪಟ್ಟಿರುವ ವರದಿ ಬಂದಿದೆ. ಸದಾಶಿವನಗರದ ಸುಧಾಕರ್ ಅವರ ಮನೆಯಲ್ಲಿ ನೇಪಾಳ ಮೂಲದ ವ್ಯಕ್ತಿ ಅಡುಗೆ ಸಿಬ್ಬಂದಿಯಾಗಿದ್ದು ಭಾನುವಾರ ಅವರುಗೂ ಕೂಡ ಕೊರೊನಾ ಪಾಸಿಟೀವ್ ಇದೆ ಎಂದು ತಿಳಿದು ಬಂದಿದೆ. ಈ ಸಿಬ್ಬಂದಿ ಸಂಪರ್ಕದಿಂದಲೇ ಸುಧಾಕರ್ ತಂದೆಗೆ ಸೋಂಕು ತಗುಲಿದೆ ಎಂಬ ಶಂಕೆಯೂ ಕೂಡ ವ್ಯಕ್ತಪಡಿಸಲಾಗಿದೆ. ಮಾರುಕಟ್ಟೆಯಿಂದ ಮನೆಗೆ ಬೇಕಾದ ಸಾಮಾಗ್ರಿಗಳನ್ನು ಈ ಸಿಬ್ಬಂದಿಯೇ ತರುತ್ತಿದ್ದನು ಎಂಬು ಹೇಳಲಾಗುತ್ತಿದೆ.
ರಾಮನಗರದ ಮಾಗಡಿಯ ಕಾಂಗ್ರೆಸ್ ಮುಖಂಡ ಎಚ್.ಸಿ. ಬಾಲಕೃಷ್ಣ ಅವರ ಪುತ್ರಿಗೆ ಕೋವಿಡ್ 19 ದೃಢಪಟ್ಟಿದೆ. “ ನನ್ನ ಪುತ್ರಿ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನಲೆ ಕೊವೀಡ್ ಪರೀಕ್ಷೆ ಒಳಗಾಗಿದ್ದು, ಸೋಂಕು ಖಚಿತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ನಂಜನಗೂಡು ಗ್ರಾಮಾಂತರ ಪೋಲಿಸ್ ಸಿಬ್ಬಂದಿಯೊರ್ವರಿಗೆ ಕೊರಾನಾ ದೃಡಪಟ್ಟಿದೆ ಇವರ ಸಂಪರ್ಕ ಹೊಂದಿದ್ದ 58 ಜನ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ 32 ವರ್ಷದ ವೈದ್ಯರಿಗೂ ಕೊರೊನಾ ತಗುಲಿರುವುದು ಸೋಮವಾರ ಖಚಿತವಾಗಿದೆ. ಹಾಗೆಯೆ ಕುಮಾರಸ್ವಾಮಿ ಲೇಔಟ್, ಕಬ್ಬನ್ ಪಾರ್ಕ್, ಹಲಸೂರು ಗೇಟ್ ಠಾಣೆ, ಸಿಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರು ಜನ ಪೋಲಿಸರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲಿದ್ದು ರಾಜ್ಯದ ಜನರು ಮುನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು.