ಬೆಂಗಳೂರು,ಜ.22: ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿದ್ದ ಸಚಿವರಿಗೆ ಸಿಎಂ ಯಡಿಯೂರಪ್ಪನವರು ಮತ್ತೆ ಖಾತೆ ಅದಲು ಬದಲು ಮಾಡಿದ್ದಾರೆ. ತಾವು ನೀರಿಕ್ಷಿಸಿದ ಖಾತೆ ಸಿಗದ ಕಾರಣ ಮುನಿಸಿಕೊಂಡಿದ್ದ ಸಚಿವರಿಂದ ಮನಸ್ಥಾಪಗಳು ಉಂಟಾಗಿದ್ದು, ಕೆಲ ಸಚಿವರು ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಅಸಮಾಧಾನಗೊಂಡ ಸಚಿವರು ಸಚಿವ ಸಂಪುಟಕ್ಕೆ ಗೈರಾಗಿದ್ದರು. ಖಾತೆ ಬದಲಾವಣೆ ಹಿನ್ನಲ್ಲೆ ತಲೆ ದೂರಿದ್ದ ಅಸಮಾಧಾನಕ್ಕೆ ತೆರೆ ಎಳೆಯಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಖಾತೆ ಹಂಚಿಕೆ ಮಾಡಿ ಎರಡೆ ದಿನದೊಳೆಗೆ ಮತ್ತೆ ಖಾತೆ ಬದಲವಾಣೆ ಮಾಡಿದ್ದು, ಸಿಎಂ ಕೆಲವು ಸಚಿವರ ಒತ್ತಡಕ್ಕೆ ಮಣಿದು ಖಾತೆ ಬದಲಾವಣೆ ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ಕೇಳಿ ಬರುತ್ತಿದೆ.
ಹಾಗಾದರೆ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಎಸ್ ವೈ ಮತ್ತೆ ಯಾರ ಖಾತೆಗಳನ್ನು ಬದಲಾಯಿಸಿದ್ದಾರೆ. ಪರಿಷ್ಕೃತಗೊಳಿಸಿದ ಕೆಲವು ಸಚಿವ ಖಾತೆಗಳ ವಿವರ ಹೀಗಿದೆ.
ಬದಲಾವಣೆಗೊಂಡ ಖಾತೆಗಳು:
ಜೆ.ಸಿ.ಮಾಧುಸ್ವಾಮಿ- | ವೈದ್ಯಕೀಯ ಶಿಕ್ಷಣ, ಹಜ್ ಮತ್ತು ವಕ್ |
ಅರವಿಂದ ಲಿಂಬಾವಳಿ | ಅರಣ್ಯ, ಕನ್ನಡ ಮತ್ತು ಸಂಸ್ಕೃತ ಇಲಾಖೆ |
ಕೆ.ಗೋಪಾಲಯ್ಯ | ಅಬಕಾರಿ |
ಆರ್.ಶಂಕರ್ | ತೋಟಗಾರಿಕೆ ಮತ್ತು ರೇಷ್ಮೆ |
ಕೆ.ಸಿ.ನಾರಾಯಣಗೌಡ | ಯುವ ಸಬಲೀಕರಣ, ಕ್ರೀಡೆ ಹೆಚ್ಚುವರಿಯಾಗಿ ಯೋಜನೆ ಕಾರ್ಯಕ್ರಮ ಅನುಷ್ಠಾನ ಮತ್ತು ಅಂಕಿಸಂಖ್ಯೆ |
ಎಂಟಿಬಿ ನಾಗರಾಜ್ | ಪೌರಾಡಳಿತ, ಸಕ್ಕರೆ |
ಸಿಎಂ ಯಡಿಯೂರಪ್ಪನವರು ಕೆಲವು ಪ್ರಮುಖ ಖಾತೆಗಳಾದ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ, ಸಂಸದೀಯ ವ್ಯವಹಾರ, ಹಣಕಾಸು, ಬೆಂಗಳೂರು ಅಭಿವೃದ್ಧಿ, ಇಂಧನ, ಗುಪ್ತಚರ, ಮೂಲಭೂತ ಅಭಿವೃದ್ಧಿ ಇಲಾಖೆ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಬಳಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ, ಸಂಸದೀಯ ವ್ಯವಹಾರ, ಹಣಕಾಸು, ಬೆಂಗಳೂರು ಅಭಿವೃದ್ಧಿ, ಇಂಧನ, ಗುಪ್ತಚರ, ಮೂಲಭೂತ ಅಭಿವೃದ್ಧಿ ಇಲಾಖೆಗಳನ್ನು ಉಳಿಸಿಕೊಂಡಿದ್ದಾರೆ.