ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಘೋಸ್ಟ್’ ಸಿನಿಮಾ ಇಂದು ರಿಲೀಸ್ ಆಗಿದೆ. ಅನೌನ್ಸ್ ಆದಾಗಿನಿಂದ ಭಾರೀ ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾ ಇಂದು ಬೆಳ್ಳಿ ತೆರೆಯಲ್ಲಿ ಮಿಂಚಿದ್ದು, ಶಿವಣ್ಣನ ಅಭಿಮಾನಿಗಳು ಚಿತ್ರ ನೋಡಿ ಕುಣಿದು ಕುಪ್ಪಳಿಸಿದ್ಧಾರೆ. ಮಧ್ಯರಾತ್ರಿಯೇ ಸಿನಿಮಾ ರಿಲೀಸ್ ಆಗಿದ್ದು ಸಿನಿಮಾ ನೋಡಿದವರು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ.
ಸಿನಿಮಾದಲ್ಲಿ ಹಿಂದೆಂದೂ ಕಾಣದ ಮಾಸ್ ಲುಕ್ ನಲ್ಲಿ ಶಿವಣ್ಣ ಮಿಂಚಿದ್ದು, ನಿರ್ದೇಶಕ ಶ್ರೀನಿ ಅಭಿಮಾನಿಗಳಿಗೆ ಶಿವರಾಜ್ಕುಮಾರ್ ಅವರ ಹೊಸ ಲುಕ್ ದರ್ಶನ ಮಾಡಿದ್ದಾರೆ. ಶಿವಣ್ಣ ಹಾಗೂ ಶ್ರೀನಿ ಕಾಂಬಿನೇಶನ್ ಸಖತ್ ವರ್ಕೌಟ್ ಆಗಿದೆ. ಸಖತ್ ತ್ರಿಲ್ ಆಗಿರುವ ಅಭಿಮಾನಿಗಳು ಥಿಯೇಟರ್ ಮುಂದೆ ಶಿವಣ್ಣನ ಕಟೌಟ್ಗೆ ಬೃಹತ್ ಹೂವಿನ ಹಾರ ಹಾಕಿ ಸಂಭ್ರಮಿಸಿದ್ದಾರೆ. ಚಿತ್ರಮಂದಿರದಲ್ಲಿ ಶಿವಣ್ಣ ಎಂಟ್ರಿ ಆಗುತ್ತಿದ್ದಂತೆ ಸೀಟಿ ಹೊಡೆದು ಕುಣಿದು ಕುಪ್ಪಳಿಸಿದ್ದಾರೆ.
ಉತ್ತಮ ಚಿತ್ರಕಥೆ, ಒಳ್ಳೆ ಬಿಜಿಎಂ, ಸಿನಿಮಾಟೋಗ್ರಫಿ, ಆಕ್ಷನ್, ಡೈರೆಕ್ಷನ್, ವಿಎಫ್ಎಕ್ಸ್, ಶಿವಾರಾಜ್ ಕುಮಾರ್ ಅವರ ನಟನೆ ಮತ್ತು ಶ್ರೀನಿಯವರ ನಿರ್ದೇಶನ ಪೇಕ್ಷಕರನ್ನು ಬೆರೆಯೇ ಲೋಕಕ್ಕೆ ಕರೆದೊಯ್ಯುತ್ತವೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ‘ಘೋಸ್ಟ್’ ಸಿನಿಮಾವು ಸೆಂಟ್ರಲ್ ಜೈಲ್ವೊಂದನ್ನು ಹೈಜಾಕ್ ಮಾಡುವ ಕಥೆಯಾಗಿದೆ. ಶಿವರಾಜ್ಕುಮಾರ್ ಅವರೇಕೆ ಜೈಲನ್ನೇ ಹೈಜಾಕ್ ಮಾಡುತ್ತಾರೆ, ಅಲ್ಲಿರುವ ಖೈದಿಗಳನ್ನೇ ಒತ್ತೆಯಾಳನ್ನಾಗಿ ಏಕೆ ಇಟ್ಟುಕೊಳ್ಳುತ್ತಾರೆ, ಅಷ್ಟಕ್ಕೂ ಶಿವರಾಜ್ಕುಮಾರ್ ಪಾತ್ರದ ಹಿನ್ನೆಲೆ ಏನು ಎಂಬ ಎಲ್ಲ ಪ್ರಶ್ನೆಗಳು ಸಿನಿಮಾ ನೋಡಲು ಶುರು ಮಾಡುತ್ತಿದ್ದಂತೆಯೇ ತಲೆಯಲ್ಲಿ ಕೊರೆಯಲು ಆರಂಭವಾಗುತ್ತವೆ. ಸಿನಿಮಾ ಚಕಚಕನೇ ಸಾಗುತ್ತಿದ್ದರೂ, ನಿರ್ದೇಶಕ ಶ್ರೀನಿ ಮಾತ್ರ ಸಾವಧಾನದಿಂದ ಎಲ್ಲಾ ಪ್ರಶ್ನೆಗಳಿಗೂ ಸಿನಿಮಾದಲ್ಲಿ ನಿಧಾನವಾಗಿ ಉತ್ತರಿಸಿದ್ದಾರೆ. ಶ್ರೀನಿ ಬರೆದ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ಗಳಿವೆ. ಕೇವಲ 48 ಗಂಟೆಗಳಲ್ಲಿ ನಡೆಯುವ ಈ ಕಥೆಯನ್ನು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಹಾಡುಗಳಿಗೆ ಜಾಗವಿಲ್ಲದೇ ಇದ್ದರೂ, ಅರ್ಜುನ್ ಜನ್ಯ ಹಿನ್ನೆಲೆ ಸಂಗೀತದ ಮೂಲಕ ತಮ್ಮ ಇರುವಿಕೆಯನ್ನು ಸಾಬೀತುಪಡಿಸುತ್ತಾರೆ. ಸಿನಿಮಾವನ್ನು ಆಗಾಗ ಇನ್ನೂ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಕೊಡುಗೆ ಜಾಸ್ತಿ ಇದೆ. ಮಹೇಂದ್ರ ಸಿಂಹ ಛಾಯಾಗ್ರಹಣ ಹೊಸತನದಿಂದ ಕೂಡಿದೆ. ದ್ವಿತಿಯಾರ್ಧ ಫ್ಯಾನ್ಸ್ಗೆ ಸಖತ್ ಇಷ್ಟವಾಗುತ್ತದೆ. ಹ್ಯಾಂಡ್ಸ್ಕಫ್ ಫೈಟ್ ಹೊಸತನದಿಂದ ಕೂಡಿದೆ. ಶಿವಣ್ಣನ ಡಿ-ಏಜಿಂಗ್ ಲುಕ್ ಮಾತ್ರ ಫ್ಯಾನ್ಸ್ಗೆ ಹಬ್ಬ. ಸಂಭಾಷಣೆ ಕೂಡ ಪಂಚಿಂಗ್ ಆಗಿದೆ. ಪಾರ್ಟ್ 2ಗೆ ಕೊಟ್ಟಿರುವ ಟ್ವಿಸ್ಟ್ ಚೆನ್ನಾಗಿದ್ದು, ‘ಘೋಸ್ಟ್ 2’ ಕುತೂಹಲ ಉಳಿಸಿಕೊಳ್ಳುವಲ್ಲಿ ಶ್ರೀನಿ ಸಕ್ಸಸ್ ಆಗಿದ್ದಾರೆ.
ಇಡೀ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರು ಫುಲ್ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ಮಲಯಾಳಂ ನಟ ಜಯರಾಮ್ ಅವರು ಪೊಲೀಸ್ ಅಧಿಕಾರಿ ಪಾತ್ರವನ್ನು ಕೊಂಚ ಅಗ್ರೆಸ್ಸಿವ್ ಆಗಿಯೇ ಮಾಡಿದ್ದಾರೆ. ‘ಕೆಜಿಎಫ್’ ಸಿನಿಮಾ ಖ್ಯಾತಿಯ ಅರ್ಚನಾ ಜೋಯಿಸ್ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಕಥೆಗೆ ಟ್ವಿಸ್ಟ್ ನೀಡುವ ಪಾತ್ರದಲ್ಲಿ ಅನುಪಮ್ ಖೇರ್ ಕಾಣಿಸಿಕೊಂಡಿದ್ದಾರೆ. ‘ಬೀರ್ಬಲ್’ ಸಿನಿಮಾದ ಲಾಯರ್ ಮಹೇಶ್ ದಾಸ್ ಪಾತ್ರದಲ್ಲಿ ಶ್ರೀನಿ ಇಲ್ಲಿ ಎಂಟ್ರಿ ಕೊಟ್ಟಿದ್ದು, ಅದು ಇಂಟರೆಸ್ಟಿಂಗ್ ಎನಿಸುತ್ತದೆ.
ಈಗಾಗಲೇ ಸಿನಿಮಾ ಬರ್ಜರಿ ಪ್ರದರ್ಶನಗೊಳ್ಳುತ್ತಿದು, ವೀಕ್ ಎಂಡ್ ನಲ್ಲಿ ಹೆಚ್ಚಿನ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಒಟ್ಟಾರೆಯಗಿ ಸಿನಿಮಾ ಅದ್ಬುತವಾಗಿ ಮೂಡಿಬಂದಿದ್ದು, ಎಲ್ಲಾರು ನೋಡಬಹುದಾದಂತ ಸಿನಿಮಾ ಇದಾಗಿದೆ. ಟಿಕೇಟ್ ಗೆ ಕೊಟ್ಟ ಹಣ್ಣಕ್ಕೆ ಯಾವುದೇ ಮೋಸವಿಲ್ಲದೆ, ಸಿನಿಮಾ ಕುಷಿಕೊಡುತ್ತದೆ.