ಕೋಲಾರ : ಸರಕಾರಗಳ ನೀತಿ ನಿಯಮಗಳು ಮತ್ತು ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಸಂವಹನ ಮಾಧ್ಯಮ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಟಿ.ಡಿ ಕೆಂಪರಾಜು ತಿಳಿಸಿದರು.
ನಗರದ ಹೊರವಲಯದ ಮಂಗಸಂದ್ರ ಸ್ನಾತಕೋತ್ತರ ಕೇಂದ್ರದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ನಡೆದ “ಭಾರತದಲ್ಲಿ ರಾಜಕೀಯ ಸಂವಹನದ ಸ್ಥಿತಿ” ವಿಷಯದ ಸಂವಾದವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತ ದೇಶದ ರಾಜಕೀಯ ಕ್ಷೇತ್ರವು ಬಲಿಷ್ಠವಾಗಿದ್ದು ರಾಷ್ಟ್ರದ ಅಭಿವೃದ್ಧಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಕೈಗಾರಿಕಾ ನೀತಿಗಳನ್ನು ರೂಪಿಸುವುದರ ಜೊತೆಗೆ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಸಂವಹನ ಮಾಧ್ಯಮವು ತನ್ನದೇ ಆದ ಪ್ರಾಮುಖ್ಯತೆಯನ್ನು ನೀಡಿದೆ ಎಂದರು.
ಆಧುನಿಕತೆ ಬೆಳೆದಂತೆಲ್ಲಾ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮವು ಪ್ರಭಲವಾಗುತ್ತಾ ಬಂದಿದೆ ಸಾಮಾಜಿಕ, ವೈಜ್ಞಾನಿಕ, ರಾಜಕೀಯ ಶೈಕ್ಷಣಿಕ ಕ್ಷೇತ್ರಗಳನ್ನು ಜಾಗೃತಿಗೊಳಸುವುದು ಮಾಧ್ಯಮದ ಜವಾಬ್ದಾರಿಯಾಗಿದೆ. ಸಮಾಜದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಜೊತೆಗೆ ನಾಲ್ಕನೇ ಅಂಗವಾಗಿ ಪತ್ರಿಕಾ ರಂಗವು ಸಮಾಜದಲ್ಲಿ ನಡೆಯುವ ಸರಿ ತಪ್ಪುಗಳನ್ನು ಸರಿಪಡಿಸಬೇಕು ತಾಂತ್ರಿಕ ಬದಲಾವಣೆಯಿಂದ ಭವಿಷ್ಯದ ಮಾಧ್ಯಮವಾಗಬೇಕು ಎಂದು ತಿಳಿಸಿದರು.
ಪತ್ರಕರ್ತರು ತನಿಖಾ ವರದಿಗಾರಿಕೆಯ ಜೊತೆಯಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಬೇಕು ರಾಜಕೀಯ ಸ್ಥಿರತೆ ಇದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ರಾಜಕೀಯ ಅಸ್ಥಿರತೆ ಇದ್ದಾಗ ದೇಶದಲ್ಲಿ ಅಭಿವೃದ್ಧಿಯಾಗುವುದಿಲ್ಲ ದೇಶದ ಅಭಿವೃದ್ಧಿ ರಾಜಕೀಯ ಕ್ಷೇತ್ರದಿಂದ ಮಾತ್ರವಲ್ಲದೆ ಮಾಧ್ಯಮವು ಜೊತೆಯಾಗಬೇಕು ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ನಿರಂತರ ಸಂಪರ್ಕ ಪ್ರಕ್ರಿಯೆ ನಡೆಯಬೇಕು ಎಂದರು.
ಕಾರ್ಯಕ್ರಮದ ಸಂವಾದದಲ್ಲಿ ಬೆಂಗಳೂರು ವಿವಿ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಕೆ ರವಿ ಮಾತನಾಡಿ ಜಗತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಅತಿ ಹೆಚ್ಚು ಪರಿಣಾಮಕಾರಿಯಗಿ ಬಳಸಿಕೊಂಡವರು ಭಾರತದವರು ಮಾತ್ರ, 2014 ರ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಗಳನ್ನು ತುಂಬಾ ವ್ಯವಸ್ಥಿತವಾಗಿ ಬಳಸಿಕೊಂಡ ಏಕೈಕ ನಾಯಕ ಅಂದರೆ ಅದು ಮೋದಿ ಮಾತ್ರ ಮಾಧ್ಯಮವು ರಾಜಕೀಯ ಮತ್ತು ರಾಜಕೀಯ ಪಕ್ಷಗಳು, ರಾಜಕೀಯ ವ್ಯಕ್ತಿಗಳ ಬಗ್ಗೆ ತಿಳಿಸುವ ಸಂಸ್ಥೆಯಾಗಿ ಕೆಲಸ ಮಾಡುತ್ತದೆ
ಸಂವಹನಕಾರರಿಗೆ ಎಲ್ಲಾ ವಿಷಯಗಳ ಬಗ್ಗೆ ಅರಿವಿರಬೇಕು, ಜೊತೆಗೆ ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳಿರಬೇಕು, ಪಕ್ಷ, ಪಕ್ಷದ ಮುಖಂಡರು, ಪ್ರಮುಖ ನಾಯಕರ ಬಗ್ಗೆ ತಿಳಿದಿರಬೇಕು. ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆ ಮತ್ತು ಹೇಳಿಕೆಗಳು ಚುನಾವಣಾ ವ್ಯವಸ್ಥೆಯಲ್ಲಿ ಮುಖ್ಯವಾಗುತ್ತದೆ. ಅದರಲ್ಲೂ ಚುನಾವಣಾ ಧ್ಯೇಯ ವಾಕ್ಯಗಳು ಮುಖ್ಯವಾಗುತ್ತದೆ ಅವುಗಳನ್ನು ಜನ ಸಾಮಾನ್ಯರಿಗೆ ತಲುಪಿಸಬೇಕು ಮಾಧ್ಯಮದ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ ಕೆ.ಜನಾರ್ಧನಂ, ಮಂಗಸಂದ್ರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಡಾ.ಡಿ.ಕುಮುದಾ, ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಎ.ವಿ ಸಂಪ್ರೀತಿ, ಡಾ. ಮಂಜುನಾಥ.ಆರ್, ಡಾ.ಮೋಹನ್ ಕುಮಾರ್, ಸಿ.ಎನ್ ಶ್ರೀನಿವಾಸ್ ಮುಂತಾದವರು ಇದ್ದರು.