ಸಂಭ್ರಮ ಪಡಲು ಜನತೆಗೆ ಏನಿದೆ?

ಸಂಪುಟ – 06, ಸಂಚಿಕೆ 23, ಜೂನ್ 03, 2012

7

ಯುಪಿಎ-2 ಸರಕಾರದ ಮೂರನೇ ವಾಷರ್ಿಕೋತ್ಸವದ ಸಂದರ್ಭದಲ್ಲಿ ಪ್ರಕಟಿಸಿದ ರಿಪೊಟರ್್ ಕಾಡರ್್ ದಾಖಲೆ ಕಲ್ಲಿದ್ದಲು ಉತ್ಪಾದನೆಯಾಗಿದೆ, ವಿದ್ಯುತ್ ವಲಯದಲ್ಲಿ ಅತ್ಯುನ್ನತ ಸಾಮಥ್ರ್ಯ ಸೇರಿಕೆಯಾಗಿದೆ, ಜವಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಮಿಶನ್ ಅಡಿಯಲ್ಲಿ 559 ಪ್ರಾಜೆಕ್ಟ್ ಗಳನ್ನು ಮಂಜೂರು ಮಾಡಲಾಗಿದೆ ಎಂದೆಲ್ಲ ಹೇಳುತ್ತದೆ. ಆದರೆ ಈ ದಾವೆಗಳು ಮತ್ತು ವಾಸ್ತವಿಕ ಸಾಧನೆಗಳ ನಡುವಿನ ಅಂತರದ ಒಂದು ದೊಡ್ಡ ಪಟ್ಟಿಯನ್ನೇ ಕೊಡಬಹದು. ಈ ಪಟ್ಟಿಯಲ್ಲಿನ ಅತ್ಯಂತ ಕ್ರಿಮಿನಲ್ ಅಂಶವೆಂದರೆ, 25 ಕೋಟಿ ಟನ್ಗಳಷ್ಟು ದಾಖಲೆ ಆಹಾರಧಾನ್ಯ ಉತ್ಪಾದನೆಯಾದರೂ ಜನತೆ ಈಗಲೂ ಹಸಿದೇ ಇದ್ದಾರೆ. ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ನೇತೃತ್ವದ ನವ-ಉದಾರವಾದಿ ದಿಕ್ಪಥಕ್ಕೆ ಬದ್ಧವಾಗಿರುವ ಈ ಯುಪಿಎ-2 ಸರಕಾರ ತನ್ನ ಉಳಿದೆರಡು ವರ್ಷಗಳಲ್ಲಾದರೂ ಇದನ್ನು ಕೈಬಿಟ್ಟು, ಸಾರ್ವಜನಕ ಹೂಡಿಕೆಗಳ ಮೂಲಕ ತಾಳಿಕೆಯ ಬೆಳವಣಿಗೆಯ ಚಕ್ರಕ್ಕೆ ಚಾಲನೆ ನಡುವ ದಾರಿಯನ್ನು ಹಿಡಿಯುವಂತೆ ಸಾರ್ವಜನಕ ಒತ್ತಡವನ್ನು ಹೆಚ್ಚಿಸಬೇಕು.

ಯುಪಿಎ-2 ಸರಕಾರದ ಮೂರನೇ ವಾಷರ್ಿಕೋತ್ಸವದ ಅಧಿಕೃತ ಆಚರಣೆಯೇನೋ ಬಹಳ ಆಡಂಬರದಿಂದ ನಡೆದಿದೆ. ಆದರೆ ಬಹುಪಾಲು ಭಾರತೀಯ ಜನತೆಗೆ ಆಚರಿಸಲು ಇರುವ ಸಂಗತಿ ಅತ್ಯಲ್ಪ.ಇದರ ಒಂದು ಸೂಚನೆಯೆಂದರೆ, ಯುಪಿಎ-2 ಸರಕಾರದ ಪ್ರತಿಯೊಂದು ವಾಷರ್ಿಕೋತ್ಸವದ ಸಂದರ್ಭದಲ್ಲೂ ಒಂದು ಮಾನವ ದುರಂತದ ಕ್ರೂರ ಆಕಸ್ಮಿಕ. 2010ರಲ್ಲಿ ಮೊದಲ ವಾಷರ್ಿಕೋತ್ಸವ ಮಂಗಳೂರಿನ ವಿಮಾನ ಅಪಘಾತದೊಂದಿಗೆ ಬಂತು. ಎರಡನೆಯದ್ದು ಬಿಹಾರದ ಒಂದು ರೈಲ್ವೆ ಅಪಘಾತದೊಂದಿಗೆ ಬಂತು. ಈ ಮೂರನೇ ವಾಷರ್ಿಕೋತ್ಸವ ಆಂಧ್ರಪ್ರದೇಶದಲ್ಲಿ ಕನಿಷ್ಟ 25 ಜನರನ್ನು ಬಲಿ ತೆಗೆದುಕೊಂಡ ಹಂಪಿ ಎಕ್ಸ್ಪ್ರೆಸ್ನ ರೈಲ್ವೆ ಅಪಘಾತದ ದುರಂತದೊಂದಿಗೆ ಬಂದಿದೆ. ಈ ಮೂರು ವರ್ಷಗಳಲ್ಲಿ, 36ತಿಂಗಳಲ್ಲಿ 36 ರೈಲು ಅಪಘಾತಗಳು ನಡೆದಿವೆ. ಇದರಿಂದ ಅಧಿಕೃತವಾಗಿ ಸುಮಾರು 500 ಜನ ಸತ್ತಿದ್ದಾರೆ ಮತ್ತು ಸುಮಾರು 1,200 ಮಂದಿ ಗಾಯಗೊಂಡಿದ್ದಾರೆ.

ಈ ಮೂರನೇ ವಾಷರ್ಿಕೋತ್ಸವ ಮತ್ತು ಸರಕಾರದ ಆಡಂಬರದ ದಾವೆಗಳು ಪ್ರಖ್ಯಾತ ಇಂಗ್ಲಿಷ್ ನಾಟಕಕಾರ ಮತ್ತು ವಿಡಂಬನಕಾರ ಆಸ್ಕರ್ ವೈಲ್ಡ್ನ ಜೀವನಕ್ಕೆ ಸಂಬಂಧಪಟ್ಟ ಒಂದು ಕತೆಯನ್ನು ನೆನಪಿಗೆ ತರುತ್ತವೆ. ಆತ ನೌಕರನಾಗಿದ್ದಾಗ, ಒಂದು ದಿನ ಆತನ ಬಾಸ್ ಪ್ರತಿದಿನ ಕೆಲಸಕ್ಕೆ ವಿಳಂಬವಾಗಿ ಬರುತ್ತಿದ್ದೀಯಾ ಎಂದು ಆಪಾದಿಸಿದ. ಈ ಚ್ಯುತಿಯನ್ನು ಸರಿ ಪಡಿಸಲು ಪ್ರತಿದಿನ ಬೇಗನೇ ಹೋಗುತ್ತಿದ್ದೇನಲ್ಲ ಎಂದು ಶ್ರೀಯುತ ವೈಲ್ಡ್ ಪ್ರತ್ಯುತ್ತರ ನೀಡಿದ! ಕಳೆದ ಮೂರು ವರ್ಷಗಳಲ್ಲಿ ಬಹು ಪಾಲು ಜನತೆಯ ಜೀವನಾಧಾರ ಮಟ್ಟಗಳು ಎರಡೂ ಕಡೆಗಳಿಂದ ಅಕ್ಷರಶಃ ಕ್ಷಯಿಸುತ್ತಿವೆ.

ಜನಗಳ ಹೆಚ್ಚುತ್ತಿರುವ ಹೊರೆಗಳು ಮತ್ತು ಬವಣೆಗಳ ಬಗ್ಗೆ ಬರುವ ಮೊದಲು, ಈ ಸರಕಾರ ಅಧಿಕಾರ ವಹಿಸಿಕೊಂಡಾಗ ನೀಡಿದ ಭರವಸೆಗಳೆಲ್ಲಾ ಈಡೇರದೆ ಉಳಿದುಕೊಂಡಿವೆ ಎಂಬುದನ್ನು ನೆನಪಿಸಿಕೊಳ್ಳಿ. ಮೊದಲ ನೂರು ದಿನಗಳೊಳಗೆ, ರಾಜ್ಯದ ಶಾಸನ ಸಭೆಗಳಲ್ಲಿ ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಮೂರನೇ ಒಂದು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆಯನ್ನು ಪಾಸು ಮಾಡುವುದಾಗಿ ಭಾರತದ ರಾಷ್ಟ್ರಪತಿಗಳು ಭರವಸೆ ನೀಡಿದ್ದರು. ಇನ್ನೂ ಇದು ಬೆಳಕು ಕಂಡಿಲ್ಲ. ಅದೇ ರೀತಿ ಆಹಾರ ಭದ್ರತಾ ಮಸೂದೆ, ಭೂಸ್ವಾಧೀನ ಮಸೂದೆ, ಕೋಮುವಾದಿ ಹಿಂಸಾಚಾರ ಮಸೂದೆ, ಲೋಕಪಾಲ ಮಸೂದೆ ಇತ್ಯಾದಿಗಳೆಲ್ಲಾ ಜಾರಿಗೆ ಬರದೆ ಉಳಿದು ಕೊಂಡಿವೆ. ವಾಷರ್ಿಕೋತ್ಸವ ಆಚರಣೆಯ ಬಗ್ಗೆ ಇಷ್ಟು ಹೇಳಿದರೆ ಸಾಕಾಗಬಹುದು.

ಗುರಿಗಳೆಲ್ಲೋ, ಸಾಧನೆಗಳೆಲ್ಲೋ
ಅದೇ ರೀತಿ ಆಥರ್ಿಕಕ್ಕೆ ಸಂಬಂಧ ಪಟ್ಟಂತೆಯೂ ಈ ಸರಕಾರದ ಹೆಚ್ಚಿನ ದಾವೆಗಳು ಘೋಷಿತ ಗುರಿಗಳಿಗಿಂತ ಇನ್ನೂ ಎಷ್ಟೋ ದೂರದಲ್ಲಿಯೇ ಉಳಿದಿವೆ. ನಮ್ಮ ದೇಶ 9ಶೇ. ಜಿಡಿಪಿ ಬೆಳವಣಿಗೆ ದಾಖಲಿಸುತ್ತದೆ ಎಂದು ಹೇಳಿಕೊಳ್ಳುತ್ತಲೇ ಈ ಮೂರನೇ ವರ್ಷವನ್ನು ಆರಂಭಿಸಿತು. ಆದರೆ ವರ್ಷ ಕೊನೆಯಾಗುವ ವೇಳೆಗೆ ಬೆಳವಣಿಗೆ ದರ 6.9ಶೇ. ಕೈಗಾರಿಕಾ ಬೆಳವಣಿಗೆ ದರ ಕಳೆದ ವರ್ಷ 8.2ಶೇ. ಇದ್ದದ್ದು ಈ ವರ್ಷ ಕೇವಲ 2.8ಶೇ. ಕ್ಕೆ ಇಳಿದಿದೆ. ಈ ಮೂರನೇ ವಾಷರ್ಿಕೋತ್ಸವದ ಸಂದರ್ಭದಲ್ಲಿ ಪ್ರಕಟಿಸಿದ ರಿಪೊಟರ್್ ಕಾಡರ್್ ದಾಖಲೆ ಕಲ್ಲಿದ್ದಲು ಉತ್ಪಾದನೆಯಾಗಿದೆ ಎಂದು ಹೇಳಿಕೊಂಡಿದೆ. ಕಲ್ಲಿದ್ದಲಿನ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವೂ ದಾಖಲೆ ಮಟ್ಟ ತಲುಪಿದೆ, ಅದು ಕೂಡ ನಮ್ಮ ಅಪಾರ ಕಲ್ಲಿದ್ದಲು ಸಂಚಯದ ನಡುವೆಯೂ, ಎಂದು ಮಾತ್ರ ಅದು ಹೇಳಿಲ್ಲ. ಅದೇ ರೀತಿ ವಿದ್ಯುತ್ ವಲಯದಲ್ಲಿ ಅತ್ಯುನ್ನತ ಸಾಮಥ್ರ್ಯ ಸೇರಿಕೆಯಾಗಿದೆ ಎಂಬ ಹೇಳಿಕೆಯನ್ನೂ ವಾಸ್ತವತೆಯೊಂದಿಗೆ ಹೋಲಿಸಿ ನೋಡಬೇಕು- ಈ ಸಾಮಥ್ರ್ಯದ 60ಶೇ.ಕ್ಕಿಂತಲೂ ಹೆಚ್ಚು ಭಾಗಕ್ಕೆ ತೀವ್ರ ಇಂಧನ ಕೊರತೆಯಿಂದಾಗಿ ಸಾಮಾನ್ಯ ನಿರ್ವಹಣೆಯನ್ನು ನಡೆಸಲೂ ಆಗುತ್ತಿಲ್ಲ. ಜವಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಮಿಶನ್ ಅಡಿಯಲ್ಲಿ 559 ಪ್ರಾಜೆಕ್ಟ್ ಗಳನ್ನು ಇದುವರೆಗೆ ಮಂಜೂರು ಮಾಡಲಾಗಿದೆ ಎಂದು ಈ ರಿಪೋಟರ್್ ಕಾಡರ್್ ಹೇಳುತ್ತದೆ. ಆದರೆ, ಇವುಗಳಲ್ಲಿ ಇದುವರೆಗೆ ಪೂರ್ಣಗೊಂಡಿರುವುದು 128 ಮಾತ್ರ ಎಂದು ಅದು ಹೇಳುವುದಿಲ್ಲ. ದಾವೆಗಳು ಮತ್ತು ಸಾಧನೆಗಳ ನಡುವಿನ ವಿಷಮತೆಯ ಈ ಪಟ್ಟಿ ಹೀಗೆಯೇ ಸಾಗುತ್ತದೆ.

ಅತ್ಯಂತ ಕ್ರಿಮಿನಲ್ ಅಂಶವೆಂದರೆ, 25 ಕೋಟಿ ಟನ್ಗಳಷ್ಟು ದಾಖಲೆ ಆಹಾರಧಾನ್ಯ ಉತ್ಪಾದನೆಯಾದರೂ ಜನತೆ ಈಗಲೂ ಹಸಿದೇ ಇದ್ದಾರೆ. ಈ ಅಂಕಣದಲ್ಲಿ ಹಿಂದೆ ಗಮನಿಸಿದಂತೆ, ಕೇಂದ್ರ ಸರಕಾರದ ಗೋದಾಮುಗಳಲ್ಲಿ ಆಹಾರಧಾನ್ಯಗಳ ದಾಸ್ತಾನು ಅಗತ್ಯವಾದ ಮಟ್ಟಕ್ಕಿಂತ ಎಷ್ಟೋ ಹೆಚ್ಚಿದೆ. ಇನ್ನಷ್ಟು ದಾಸ್ತಾನು ಮಾಡುವ ಸಾಮಥ್ರ್ಯ ಇಲ್ಲವಷ್ಟೇ ಅಲ್ಲ, ಬಹಳಷ್ಟು ಪ್ರಮಾಣದಲ್ಲಿ ಆಹಾರಧಾನ್ಯಗಳು ಗೋದಾಮುಗಳ ಹೊರಗೇ ಬಿದ್ದಿದ್ದು ಕೊಳೆಯುತ್ತಿವೆ ಕೂಡ. ಈ ವರ್ಷ ಎಂದಿನಂತೆ ಆಹಾರಧಾನ್ಯಗಳ ಸಂಗ್ರಹ ನಡೆದರೆ, ಅವನ್ನು ದಾಸ್ತಾನು ಮಾಡಲೆಂದೇ ಸರಕಾರ 20,000 ಕೋಟಿ ರೂ.ಗಳನ್ನು ಖಚರ್ು ಮಾಡಬೇಕಾಗುತ್ತದೆ ಎಂದು ಹಣಕಾಸು ಮಂತ್ರಿಗಳು ಸಂಸತ್ತಿಗೆ ಹೇಳಿದ್ದಾರೆ. ಆದರೆ ನಮ್ಮ ರೈತರ ಹತಾಶ ಆತ್ಮಹತ್ಯೆಗಳು ಮುಂದುವರೆಯುತ್ತಲೇ ಇರುವ ಸಂದರ್ಭದಲ್ಲಿ ಆಹಾರಧಾನ್ಯಗಳನ್ನು ಕನಿಷ್ಟ ಬೆಂಬಲ ಬೆಲೆಗಳಲ್ಲಿ ಖರೀದಿಸದಿರಲೂ ಸಾಧ್ಯವಿಲ್ಲ. ಆದರೂ ಈ ಹೆಚ್ಚುವರಿ ಆಹಾರಧಾನ್ಯಗಳ ದಾಸ್ತಾನುಗಳನ್ನು ರಾಜ್ಯಗಳಿಗೆ ಬಿಪಿಎಲ್ ಬೆಲೆಗಳಲ್ಲಿ ಹಂಚಿ, ರಾಜ್ಯಗಳು ಅವನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಹಸಿದ ಜನಗಳಿಗೆ ತಲುಪಿಸಲು ಅನುವು ಮಾಡಿಕೊಡುವ ಬದಲು, ಸರಕಾರ ಈ ದಾಸ್ತಾನುಗಳನ್ನು ಗೋದಾಮುಗಳಲ್ಲಿ ಕೊಳೆಯಲು ಬಿಡುವುದೇ ವಾಸಿಯೆಂದು ಬಗೆದಿದೆ. ಶೀಘ್ರದಲ್ಲೇ ಅವುಗಳ ರಫ್ತನ್ನೂ ಆರಂಭಿಸುತ್ತಾರೆ, ಇಲ್ಲಿ ತಮ್ಮದೇ ಜನಗಳು ಹಸಿದುಕೊಂಡಿದ್ದರೂ ಕೂಡ.

ಕ್ರೌರ್ಯ ಮರೆಸಲಾಗದ ಟೊಳ್ಳು ಮಾತುಗಳು
ಈ ಎಲ್ಲವುಗಳ ಕ್ರೌರ್ಯವನ್ನು ರಾಷ್ಟ್ರೀಯ ಮಾದರಿ ಸವರ್ೆಯ ಇತ್ತೀಚಿನ ಮಾಹಿತಿಗಳ ಹಿನ್ನೆಲೆಯಲ್ಲಿ ನೋಡಬೇಕು. ಭಾರತದಲ್ಲಿ ಕುಟುಂಬಗಳ ಖಚರ್ಿನ ಪ್ರಮುಖ ಸೂಚಕಗಳು ಎಂಬ ವರದಿ ನೀಡುವ ಮಾಹಿತಿಗಳ ಒಂದು ಅಧ್ಯಯನದಲ್ಲಿ ಕಂಡು ಬಂದಿರುವ ಸಂಗತಿಯೆಂದರೆ, ಯೋಜನಾ ಆಯೋಗ ನಿರೂಪಿಸಿರುವ ಅತ್ಯಂತ ಕೆಳಮಟ್ಟದ ಬಡತನದ ರೇಖೆಯನ್ನು ಪರಿಗಣಿಸಿದರೂ, ದೇಶದ ಎಲ್ಲಾ ರಾಜ್ಯಗಳಲ್ಲಿ 60ಶೇ.ದಷ್ಟು ಜನಸಂಖ್ಯೆ ಈ ರೇಖೆಯ ಕೆಳಗೆಯೇ ಇದೆ (ಟೈಮ್ಸ್ ಆಫ್ ಇಂಡಿಯ, ಎಪ್ರಿಲ್ 29, 2012). ವಾಸ್ತವವಾಗಿ ಇದು, ನಮ್ಮ 80 ಕೋಟಿಗೂ ಹೆಚ್ಚು ಜನತೆ ದಿನಕ್ಕೆ 20ರೂ.ಗಿಂತಲೂ ಕಡಿಮೆ ಖಚರ್ಿನಲ್ಲಿ ಹೇಗೋ ಬದುಕು ಸಾಗಿಸುತ್ತಿದ್ದಾರೆ ಎಂಬ ಅಜರ್ುನ್ ಸೆನ್ಗುಪ್ತ ಸಮಿತಿಯ ಲೆಕ್ಕಾಚಾರವನ್ನು ದೃಢಪಡಿಸುತ್ತದೆ.

ಇಷ್ಟೇ ಸಾಲದೆಂಬಂತೆ, ಎಲ್ಲ ಆವಶ್ಯಕ ಸರಕುಗಳ ನಿರಂತರ ಬೆಲೆಯೇರಿಕೆ. ಒಟ್ಟಾರೆ ಹಣದುಬ್ಬರ ಎಪ್ರಿಲ್ 2012ರಲ್ಲಿ ಮತ್ತೆ ವೇಗ ಪಡೆದಿದೆ, ಎರಡಂಕಿಯ ಹಣದುಬ್ಬರದ ಪ್ರವೃತ್ತಿಯನ್ನು ದೃಢಪಡಿಸಿದೆ. ಯುಪಿಎ-2 ಸರಕಾರ ತಾನು ಆಮ್ ಆದ್ಮಿಗಾಗಿ ಎಷ್ಟೊಂದು ಪ್ರಮುಖ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇನೆ ಎಂದು ಡಂಗುರ ಸಾರುತ್ತಿದ್ದರೂ, ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯ ಅದರ ಮಾತೆಲ್ಲಾ ಟೊಳ್ಳಾಗಿಯೇ ಉಳಿದಿದೆ.
ಇನ್ನೂ ಕೆಟ್ಟ ಸಂಗತಿಯೆಂದರೆ, ಜನತೆಯ ಮೇಲೆ ಇನ್ನಷ್ಟು ಹೊರೆಗಳು ಭವಿಷ್ಯದ ಗರ್ಭದಲ್ಲಿ ಇವೆ. ನಮ್ಮ ಆಥರ್ಿಕದ ಇಳಿಗತಿಯ ಬಗ್ಗೆ ಯುಪಿಎ-2 ರ ದೋಷಪೂರ್ಣ ಕಾರಣ-ವಿಶ್ಲೇಷಣೆ ಹಾಗೆಯೇ ಮುಂದುವರೆದಿದೆ. ಹೆಚ್ಚಿನ ಮಟ್ಟದ ಹೂಡಿಕೆಗಳನ್ನು ಆಕಷರ್ಿಸಿದರೆ ಬೆಳವಣಿಗೆ ದರಗಳನ್ನು ಮೇಲಕ್ಕೇರಿಸಬಹುದು ಎಂಬ ನವ-ಉದಾರವಾದಿ ನಂಬಿಕೆಗೆ ಅದು ಈಗಲೂ ಅಂಟಿಕೊಂಡಿದೆ. ಫಲಿತಾಂಶವೆಂದರೆ, ಅದು ವಿದೇಶಿ ಮತ್ತು ದೇಶೀ ಬಂಡವಾಳಕ್ಕೆ ಉತ್ತೇಜಕಗಳ( ಸಬ್ಸಿಡಿಗಳೆಂದೇ ಓದಿಕೊಳ್ಳಿ) ಸಂಖ್ಯೆಯನ್ನು ಹೆಚ್ಚಿಸುವುದರಲ್ಲೇ ಮಗ್ನವಾಗಿದೆ. ಹಣಕಾಸು ಮಂತ್ರಿಗಳು ಬಜೆಟ್ ಮಂಡಿಸಿದಾಗ ಮುಂದಿಟ್ಟ ಎಲ್ಲ ಪ್ರಮುಖ ತೆರಿಗೆ ಪ್ರಸ್ತಾವಗಳನ್ನು ಹಿಂತೆಗೆದುಕೊಂಡಿದ್ದಾರೆ ಅಥವ ದುರ್ಬಲಗೊಳಿಸಿದ್ದಾರೆ. ಇದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆಗಳು ದೇಶ ಬಿಟ್ಟು ಹೋಗುವ ಪ್ರವೃತ್ತಿಯನ್ನು ಬದಲಿಸಬಹುದು ಎಂಬುದು ಸರಕಾರದ ನಿರೀಕ್ಷೆ. ರೂಪಾಯಿ ಮೌಲ್ಯ ತೀವ್ರವಾಗಿ ಇಳಿಯಲು, ಈ ಪ್ರವೃತ್ತಿಯೂ ಒಂದು ಕಾರಣ ಎನ್ನಲಾಗಿದೆ.

ಪಯರ್ಾಯ ದಾರಿ
ಇಂತಹ ವಿಚಾರಧಾರೆಯ ಒಂದು ಪ್ರಧಾನ ದೋಷವೆಂದರೆ, ಹೂಡಿಕೆಗಳು ಹೆಚ್ಚಿದರೂ, ಇಂತಹ ಹೂಡಿಕೆಗಳಿಂದ ಉತ್ಪಾದಿಸಿದ ಸರಕುಗಳು ಮಾರುಕಟ್ಟೆಯಲ್ಲಿ ಮಾರಾಟವಾಗದೇ ಆಥರ್ಿಕ ಬೆಳವಣಿಗೆ ಸುಧಾರಿಸುವುದಿಲ್ಲ (ನಿಜ, ಜೂಜುಕೋರ ಹೂಡಿಕೆಗಳು ಹೆಚ್ಚಾಗಿ, ಬೆಳವಣಿಗೆಯ ಅಂಕಿ-ಅಂಶಗಳನ್ನು ಕೃತಕವಾಗಿ ಹಿಗ್ಗಿಸಬಹುದು). ಅದು ಸುಧಾರಿಸಬೇಕಾದರೆ, ಜನತೆಯ ಕೈಗಳಲ್ಲಿ ಸಾಕಷ್ಟು ಕೊಳ್ಳುವ ಸಾಮಥ್ರ್ಯ ಬರಬೇಕು. ಈ ಸಾಮಥ್ರ್ಯವೇ ಹೆಚ್ಚುತ್ತಿರುವ ಬಡತನದ ಮಟ್ಟ ಮತ್ತು ನಿರಂತರ ಬೆಲೆಯೇರಿಕೆಯಿಂದಾಗಿ ಕುಸಿಯುತ್ತಿದೆ. ಎಲ್ಲ ಆವಶ್ಯಕ ಸರಕುಗಳ ಬೆಲೆಗಳು ಏರುತ್ತಲೇ ಇರುವುದರಿಂದ, ಜನಗಳ ಬಳಿ ಇತರ ಸರಕುಗಳನ್ನು ಖರೀದಿಸಲು ಉಳಿಯುವ ಸಂಪನ್ಮೂಲ ಅತ್ಯಲ್ಪ ಅಥವ ಇಲ್ಲವೇ ಇಲ್ಲ ಎನ್ನಬಹುದು. ಕೈಗಾರಿಕಾ ಉತ್ಪಾದನೆಯ ವಲಯದಲ್ಲಿನ ಬೆಳವಣಿಗೆ ದರ ಕುಸಿತಕ್ಕೆ ವಿವರಣೆ ಮುಖ್ಯವಾಗಿ ಇಲ್ಲೇ ಇದೆ. ಆದ್ದರಿಂದ ಈಗ ಬೇಕಾಗಿರುವುದು ಈ ನವ-ಉದಾರವಾದಿ ದಿಕ್ಪಥವನ್ನೇ ಕೈಬಿಡುವುದು.

ಹೆಚ್ಚಿನ ಮಟ್ಟಗಳ ಸಾರ್ವಜನಿಕ ಹೂಡಿಕೆಗಳು ಒಂದೆಡೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ನಿಮರ್ಿಸಿದರೆ, ಇನ್ನೊಂದೆಡೆ, ನಮಗೆ ಬಹಳಷ್ಟು ಅಗತ್ಯವಾಗಿರುವ ಮೂಲರಚನೆಗಳನ್ನು ಕೂಡ ನಿಮರ್ಿಸುತ್ತವೆ. ಇದಕ್ಕೆ, ಶ್ರೀಮಂತರಿಗೆ ಕೊಡುವ ಅಗಾಧ ತೆರಿಗೆ ರಿಯಾಯ್ತಿಗಳನ್ನು ಕೈಬಿಟ್ಟರಷ್ಟೇ ಸಾಕು, ಸಂಪನ್ಮೂಲಗಳ ಕೊರತೆ ಏನೇನೂ ಇರುವುದಿಲ್ಲ ಎಂದು ಈ ಅಂಕಣದಲ್ಲಿ ಈ ಹಿಂದೆ ಕಂಡಿದ್ದೇವೆ. ಇಂತಹ ಸಾರ್ವಜನಿಕ ಹೂಡಿಕೆಗಳಿಂದ ಜನತೆಯ ಕೊಳ್ಳುವ ಸಾಮಥ್ರ್ಯ ಹೆಚ್ಚುತ್ತದೆ, ಆಂತರಿಕ ಬೇಡಿಕೆಯ ಮಟ್ಟಗಳೂ ಏರುತ್ತವೆ. ಇದು ಕೈಗಾರಿಕಾ ಉತ್ಪಾದನಾ ವಲಯಕ್ಕೆ ಅಗತ್ಯವಾದ ಉತ್ತೇಜನೆಯನ್ನು ಒದಗಿಸಿ, ಪರಿಣಾಮವಾಗಿ, ಕೈಗಾರಿಕಾ ಉತ್ಪಾದನೆಯ ಮಟ್ಟಗಳು ಬೆಳೆಯುತ್ತವೆ. ಇಂತಹ ಒಂದು ದಿಕ್ಪಥ ಆಥರ್ಿಕ ಬೆಳವಣಿಗೆಯ ಒಂದು ತಾಳಿಕೆಯ ಚಕ್ರಕ್ಕೆ ಚಾಲನೆ ಕೊಡುತ್ತದೆ.

ಯುಪಿಎ-2 ಸರಕಾರದ ಉಳಿದೆರಡು ವರ್ಷಗಳಲ್ಲಿ, ಈಗಿನ ನವ-ಉದಾರವಾದಿ ದಿಕ್ಪಥವನ್ನು ಕೈಬಿಟ್ಟು, ಮೇಲೆ ಸೂಚಿಸಿದ ದಾರಿಯನ್ನು ಹಿಡಿಯುವಂತೆ ಬಲವಂತವನ್ನು ಉಂಟು ಮಾಡಲು, ಜನತೆಯನ್ನು ದೊಡ್ಡ ಪ್ರಮಾಣದಲ್ಲಿ ಅಣಿನೆರೆಸುವ ಮೂಲಕ ಸಾರ್ವಜನಿಕ ಒತ್ತಡವನ್ನು ಹೆಚ್ಚಿಸಬೇಕು. ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ನೇತೃತ್ವದ ನವ-ಉದಾರವಾದಿ ದಿಕ್ಪಥಕ್ಕೆ ಬದ್ಧವಾಗಿರುವ ಈ ಯುಪಿಎ-2 ಸರಕಾರ, ಜನತೆಯ ಬಲಿಷ್ಟ ಹೋರಾಟಗಳು ಬಲವಂತ ಮಾಡದೆ ತನ್ನ ಈ ದಿಕ್ಪಥವನ್ನು ತ್ಯಜಿಸುವುದಿಲ್ಲ.

ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಯುಪಿಎ-2 ಸರಕಾರ ಪೆಟ್ರೋಲ್ ದರಗಳನ್ನು ಅತ್ಯಂತ ತೀವ್ರವಾಗಿ ಹೆಚ್ಚಿಸಿರುವ ಸುದ್ದಿ ಬಂದಿದೆ. ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳನ್ನೂ ಬೇಗನೇ ಹೆಚ್ಚಿಸುವ ಅಪಾಯದ ಸೂಚನೆಯೂ ಇದೆ. ಜನತೆಯ ಮೇಲೆ ಇಂತಹ ಕ್ರಿಮಿನಲ್ ಹೊರೆಗಳ ವಿರುದ್ಧ ಜನತೆ ಬಲಿಷ್ಟ ಪ್ರತಿಭಟನೆಗಳನ್ನು ನಡೆಸಬೇಕಾಗಿದೆ.

0

Donate Janashakthi Media

Leave a Reply

Your email address will not be published. Required fields are marked *