ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಶಾಲಾರಂಭ ತಡವಾದ ಹಿನ್ನೆಲೆಯಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಥಗಿತಗೊಂಡಿದ್ದ ವಿದ್ಯಾಗಮ ಯೋಜನೆ ರಾಜ್ಯಾದ್ಯಂತ ಜ.1 ರಿಂದ ಆರಂಭಿಸಲು ಶಿಕ್ಷಣ ಇಲಾಖೆಯು ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೊರೊನಾ ವೈರಸ್ ಭೀತಿಯ ಕಾರಣ ಶೈಕ್ಷಣಿ ವರ್ಷವು ಮುಂದೂಡುತ್ತಲೇ ಇದ್ದು, ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಶಿಕ್ಷಣ ಇಲಾಖೆಯು ಸಿದ್ಧತೆ ಕೈಗೊಂಡಿರುವ ಇಲಾಖೆಯು ದ್ವಿತೀಯ ಪಿಯುಸಿ ಹಾಗೂ ಎಸೆಸೆಲ್ಸಿ ತರಗತಿಗಳನ್ನು ಮತ್ತು 6ರಿಂದ 9ನೇ ತರಗತಿ ವಿದ್ಯಾರ್ಥಿಗಳ ವಿದ್ಯಾಗಮದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಕನ್ನಡ), ದ್ವಿತೀಯ ಭಾಷೆ( ಇಂಗ್ಲಿಷ್), ತೃತೀಯ ಭಾಷೆ( ಹಿಂದಿ),ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ದೈಹಿಕ ಶಿಕ್ಷಣ ಹಾಗೂಇತರ ಚಿತ್ರಕಲೆ/ವೃತ್ತಿ) ಸೇರಿ 8 ತಂಡ ಮಾಡಿ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ.
ಬೆಳಗ್ಗೆ 10ರಿಂದ 10:45ರ ತನಕ ಒಂದು ಅವಧಿ, 10:45ರಿಂದ 11.30ರ ವರೆಗೆ ಎರಡನೇ ಅವಧಿ ಹಾಗೂ 11:45ರಿಂದ 12:30ರ ವರೆಗೆ ಮೂರನೇ ಅವಧಿ ಇರಲಿದೆವಿದ್ಯಾಗಮ ವೇಳಾಪಟ್ಟಿ: ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ, ವಾಚನಾಲಯ, ಪ್ರಯೋಗಾಲಯ ಹಾಗೂ ವರಾಂಡ ಸ್ಥಳಗಳನ್ನು ಬಳಸಿಕೊಳ್ಳುವಂತೆ ಇಲಾಖೆಯು ತಿಳಿಸಿದೆ.