ಸಂಪುಟ – 06, ಸಂಚಿಕೆ 25, ಜೂನ್ 17, 2012
ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಸ್ವತಂತ್ರ ತಂತ್ರಾಂಶ ಆಂದೋಲನ ಕನರ್ಾಟಕ ಇವರು ಮಲ್ಲೇಶ್ವರಂ 18ನೇ ಕ್ರಾಸ್ನ ಆಟದ ಮೈದಾನದಲ್ಲಿ ಆಯೋಜಿಸಿದ್ದ ಈ ಶತಮಾನದ ಕೊನೆಯ ಶುಕ್ರಸಂಕ್ರಮವನ್ನು ನಾಗರೀಕರು ಮತ್ತು ಕಾಲೇಜು ವಿದ್ಯಾಥರ್ಿಗಳು ವೀಕ್ಷಿಸಿ ಸಂಭ್ರಮಿಸಿದರು.
ಬೆಳಿಗ್ಗೆ 6.30 ಗಂಟೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯಕರ್ತರು ಮೈದಾನದಲ್ಲಿ ಅಗತ್ಯ ಸಲಕರಣೆಗಳೊಂದಿಗೆ ಶುಕ್ರಸಂಕ್ರಮದ ವೀಕ್ಷಣೆಗೆ ಸಜ್ಜಾಗಿದ್ದರು. ಮೋಡ ಕವಿದ ವಾತಾವರಣದಿಂದ 7.30ರವರೆಗೆ ಸರಿಯಾಗಿ ವೀಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ನಂತರದಲ್ಲಿ ಮೋಡ ಚದುರಿ ಕೆಲಕಾಲ ವೀಕ್ಷಣೆಗೆ ಅನುಕೂಲವಾಯಿತು. ವೀಕ್ಷಣೆಯುದ್ದಕ್ಕೂ ವೀಕ್ಷಕರೂ ಮತ್ತು ಮೋಡದ ಹಿಂಡು ಜಿದ್ದಿಗೆ ಬಿದ್ದಂತೆ ಕಂಡುಬರುತ್ತಿದ್ದರು ಸ್ಥಳದಲ್ಲೇ ಹಾಜರಿದ್ದ ಭಾರತ ಜ್ಞಾನ ವಿಜ್ಞಾನ ಸಮಿತಿಯ ವಿಷಯ ತಜ್ಞರು ನೆರೆದಿದ್ದವರಿಗೆ ಶುಕ್ರ ಸಂಕ್ರಮದ ಬಗ್ಗೆ ವಿವರಣೆಗೆ ನೀಡಿದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದಶರ್ಿ ಎಸ್.ವಜ್ರಮುನಿ, ಸಹ ಕಾರ್ಯದಶರ್ಿ ಜಿ.ವಿನುತ, ಸದಸ್ಯರಾದ ಎನ್.ಪ್ರಭಾ, ಸ್ಥಳೀಯ ಘಟಕದ ಮಹಮದ್, ಜಗದೀಶ್, ಗುರುಶಾಂತಪ್ಪ, ಶ್ರೀಕಂಠಸ್ವಾಮಿ ಮುಂತಾದವರು ನೆರದಿದ್ದವರಿಗೆ ವೀಕ್ಷಣೆಗೆ ಸಹಾಯ ಮಾಡಿದರು.
ನಗರದ ಲಾಲ್ಬಾಗ್ನಲ್ಲಿ ಸಹ ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಸ್ವತಂತ್ರ ತಂತ್ರಾಂಶ ಆಂದೋಲನ ಕನರ್ಾಟಕ ವೀಕ್ಷಣೆಗೆ ಸಿದ್ಧತೆ ಮಾಡಿದ್ದರು. ಬೆಂಗಳೂರು ನಗರದಲ್ಲಿ ಮಾತ್ರವಲ್ಲದೆ ವಿವಿಧ ಜಿಲ್ಲೆಗಳ ಭಾರತ ಜ್ಞಾನ ವಿಜ್ಞಾನ ಸಮಿತಿಯ ಘಟಕಗಳು ಶುಕ್ರಸಂಕ್ರಮದ ವೀಕ್ಷಣೆಗೆ ಸಾರ್ವಜನಿಕರಿಗೆ ಅಗತ್ಯವಿರುವ ಮಾಹಿತಿ ಮತ್ತು ಸಲಕರಣೆಗಳನ್ನು ನೀಡಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.
– ಕಾರ್ಯದಶರ್ಿ, ಭಾರತ ಜ್ಞಾನ ವಿಜ್ಞಾನ ಸಮಿತಿ, ಬೆಂಗಳೂರು ಜಿಲ್ಲಾ ಘಟಕ
0