ವ್ಯಾಪಮ್ ಎಂಬ ಕೊಲೆಗಡುಕ ಹಗರಣ

ಪಿಡಿ ಸಂಪಾದಕೀಯ – ಪ್ರಕಾಶ ಕಾರಟ್

ಸಂಪುಟ  9, ಸಂಚಿಕೆ 29, 19 ಜುಲೈ  2015

ಪರೀಕ್ಷೆಗಳಲ್ಲಿ ಮೋಸಕ್ಕೆ ಸೌಲಭ್ಯಗಳು, ಅದಕ್ಕಾಗಿ ಸಾವಿರಾರು ಕೋಟಿ ರೂ.ಗಳ ವಸೂಲಿ, ಇದಕ್ಕಾಗಿ ರಾಜ್ಯಪಾಲರು, ರಾಜಭವನದಿಂದ ಹಿಡಿದು ಅತ್ಯಂತ ಕೆಳಮಟ್ಟದ ಸರಕಾರೀ ನೌಕರನ ವರೆಗೆ ಬಹು ಹಂತಗಳ ಒಂದು ಅಭೂತಪೂರ್ವ ಜಾಲದ ಸೃಷ್ಟಿ, ಬಹುಶಃ ಇವನ್ನೆಲ್ಲ ಮುಚ್ಚಿ ಹಾಕುವ ಪ್ರಯತ್ನದಲ್ಲಿ ಅಧಿಕೃತವಾಗಿಯೇ 46 ಅಸಹಜ, ರಹಸ್ಯಮಯ ಸಾವುಗಳು-ಇದು ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರದ ಕೃಪಾಪೋಷಣೆಯಲ್ಲಿ ಸಮೃದ್ಧವಾಗಿ ಹರಡಿರುವ ಕೊಲೆಗಡುಕ ಹಗರಣ. ಇನ್ನೂ ಕೇಂದ್ರದಲ್ಲಿರುವ ಮೋದಿ ಸರಕಾರ ಏನೂ ಆಗಿಲ್ಲ ಎಂಬಂತೆ ನಟಿಸುತ್ತಿರಲು ಸಾಧ್ಯವಿಲ್ಲ.

ವ್ಯಾಪಮ್ ಹಗರಣ ಈಗ ಆತಂಕಕಾರಿ ಪ್ರಮಾಣ ತಲುಪಿದೆ. ಪ್ರತಿದಿನವೆಂಬಂತೆ ಈ ಹಗರಣದಲ್ಲಿ ಆಪಾದಿತರಾದವರು ಅಥವ ಇದರಿಂದ ಪ್ರಯೋಜನ ಪಡೆದವರ ಸಾವುಗಳು ಸಂಭವಿಸುತ್ತಿವೆ.

ವ್ಯಾಪಮ್ ಎಂದರೆ ವ್ಯಾವಸಾಯಿಕ್ ಪರೀಕ್ಷಾ ಮಂಡಲ್, ಮಧ್ಯಪ್ರದೇಶದ ವೃತ್ತಿಪರ ಪರೀಕ್ಷೆಗಳ ಮಂಡಳಿ, ಉನ್ನತ ಶಿಕ್ಷಣದ ಸಂಸ್ಥೆಗಳಿಗೆ ಪ್ರವೇಶದ ಮತ್ತು ಸರಕಾರೀ ಸೇವೆಗಳಿಗೆ ನೇಮಕಾತಿಯ ಪರೀಕ್ಷೆಗಳನ್ನು ನಡೆಸುವ ಸಂಸ್ಥೆಯಿದು.

ಈ ಹಗರಣ ಬೆಳಕಿಗೆ ಬಂದದ್ದು ಜುಲೈ 2013 ರಲ್ಲಿ. ಅದೀಗ ಕೊಲೆಗಡುಕ ಹಗರಣದ ಸ್ವರೂಪ ಪಡೆದಿದೆ. ಈ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ಕಾರ್ಯಪಡೆ(ಎಸ್‌ಟಿಎಫ್)ಯ ಪ್ರಕಾರ ಇದುವರೆಗೆ 24 ಆಪಾದಿತರು ’ಅಸಹಜ ಸಾವು’ಗಳೀಗೆ ಈಡಾಗಿದ್ದಾರೆ. ಇನ್ನೂ 22 ಮಂದಿ ಈ ಹಗರಣಕ್ಕೆ ಸಂಬಂಧಪಟ್ಟವರು ರಹಸ್ಯಾತ್ಮಕ ರಿತಿಯಲ್ಲಿ ಸತ್ತಿದ್ದಾರೆ. ಅಂದರೆ ಒಟ್ಟು 46 ಮಂದಿ ಸತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ 146 ಮಂದಿ ಸತ್ತಿದ್ದಾರೆ.

ಪರೀಕ್ಷೆಗೆ ಕೂತವರಿಗೆ ನಕಲು ಮಾಡುವ ಸೌಲಭ್ಯ ಒದಗಿಸುವುದು, ಅವರ ಪರವಾಗಿ ಪರೀಕ್ಷೆ ಬರೆಯಲು ಬೇರೆಯವರನ್ನು ಒದಗಿಸುವುದು, ಖಾಲಿ ಹಾಳೆಗಳಿಗೆ ಉನ್ನತ ಮಾರ್ಕುಗಳನ್ನು ಹಾಕಿಸುವುದು ಈಗ ಹಗರಣದ ಮೂಲ ಕ್ರಿಯೆ. ಇವಕ್ಕೆಲ್ಲ ಸಾವಿರಾರು ಕೋಟಿ ರೂ.ಗಳ ವಸೂಲಿ. ಇದಕ್ಕಾಗಿ ರಾಜ್ಯಪಾಲರ ರಾಜಭವನದಿಂದ ಹಿಡಿದು ಅತ್ಯಂತ ಕೆಳಮಟ್ಟದ ಸರಕಾರೀ ನೌಕರನ ವರೆಗೆ ಬಹು ಹಂತಗಳ ಒಂದು ಅಭೂತಪೂರ್ವ ಜಾಲವೇ ಸೃಷ್ಟಿಯಾಗಿದೆ.

ಎಸ್‌ಟಿಎಫ್ ಮಧ್ಯಪ್ರದೇಶದ ರಾಜ್ಯಪಾಲ ನರೇಶ ಯಾದವ್ ವಿರುದ್ಧ ಎಫ್ ಐ ಆರ್ ಹಾಕಿತ್ತು. ಆದರೆ ರಾಜ್ಯಪಾಲರಿಗೆ ಸಂವಿಧಾನದ ಅಡಿಯಲ್ಲಿ ರಕ್ಷಣೆ ಇದೆ ಎಂದು ಹೇಳಿ ಮಧ್ಯಪ್ರದೇಶ ಹೈಕೋರ್ಟ್ ಇದನ್ನು ರದ್ದು ಮಾಡಿತು. ಅವರ ಒಬ್ಬ ಮಗ, ಈ ಹಗರಣದಲ್ಲಿ ಆಪಾದಿತ, ಲಕ್ನೌನ ತನ್ನ ಮನೆಯಲ್ಲಿ ರಹಸ್ಯಮಯ ರಿತಿಯಲ್ಲಿ ಸಾವಿಗೀಡಾಗಿದ್ದಾನೆ. ಮಾಜಿ ಬಿಜೆಪಿ ಶಿಕ್ಷಣ ಮಂತಿ ಆಪಾದಿತನಾಗಿ ಜೈಲಿನಲ್ಲಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಕೂಡ ಇದರಲ್ಲಿ ಶಾಮೀಲಗಿದ್ದಾರೆ ಎಂಬ ಅಪಾದನೆಗಳಿವೆ. ಇಬ್ಬರು ಉನ್ನತ ಆರೆಸ್ಸೆಸ್ ಮುಖಂಡರೂ ಆಪಾದಿರಲ್ಲಿ ಸೇರಿದ್ದಾರೆ. ಇದುವರೆಗೆ 1800 ಮಂದಿಯನ್ನು ಬಂಧಿಸಲಾಗಿದೆ. ಆದರೂ ಇದೆಲ್ಲ ಈ ಹಗರಣದ ಒಂದು ತುದಿ ಮಾತ್ರ ಎಂಬ ಭಾವನೆ ಮಧ್ಯಪ್ರದೇಶದಲ್ಲಿ ವ್ಯಾಪಕವಾಗಿದೆ.

ರಾಜ್ಯದ ಬಿಜೆಪಿ ಸರಕಾರ ಇದುವರೆಗೆ ಇದನ್ನು ಸಿಬಿಐಗೆ ಒಪ್ಪಿಸಲು ನಿರಾಕರಿಸುತ್ತ ಬಂದಿತ್ತು. ಇಷ್ಟರ ವರೆಗೆ ಮಧ್ಯಪ್ರದೇಶ ಹೈಕೋರ್ಟಿನ ಉಸ್ತುವಾರಿಯಲ್ಲಿ ಎಸ್‌ಐಟಿ(ವಿಶೇಷ ತನಿಖಾ ದಳ) ನಡೆಯುತ್ತಿತ್ತು.

ಆದರೆ ಈ ಹಗರಣದ ತನಿಖೆ ನಡೆಸುತ್ತಿದ್ದ ದಿಲ್ಲಿಯ ಒಬ್ಬ ಪತ್ರಕರ್ತನ ಮತ್ತು ತನ್ನ ಕಾಲೇಜಿನಲ್ಲಿ ಪ್ರವೇಶಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಜಬಲ್‌ಪುರದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರ ಸಾವುಗಳ ನಂತರ ಮುಖ್ಯಮಂತ್ರಿ ಚೌಹಾಣ್ ಈ ವಿಷಯವನ್ನು ಸಿಬಿಐ ಗೆ ವಹಿಸುವಂತೆ ಹೈಕೋರ್ಟನ್ನು ಕೇಳುವೆನೆಂದು ಹೇಳಲೇಬೇಕಾಗಿ ಬಂತು.

ಆದರೆ ಇದಷ್ಟೇ ಸಾಲದು, ಸಿಬಿಐ ತನಿಖೆಯನ್ನು ಸುಪ್ರಿಂ ಕೋರ್ಟ್ ಉಸ್ತುವಾರಿಯಲ್ಲಿ ನಡೆಸಬೇಕು ಇಲ್ಲವಾದರೆ ಕೇಂದ್ರದ ಬಿಜೆಪಿ ಸರಕಾರ ಸಿಬಿಐ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ. ಮತ್ತು ಒಂದು ನ್ಯಾಯಯುತ, ನಿಷ್ಪಕ್ಷಷಪಾತ ತನಿಖೆ ನಡೆಯಲು ಅನುವಾಗುವಂತೆ ಶಿವರಾಜ್ ಚೌಹಾಣ್ ತನ್ನ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಬೇಕಾದ್ದು ಅಗತ್ಯ. ಏಕೆಂದರೆ ಇದುವರೆಗಿನ ಅವರ ವರ್ತನೆ ಅವರು ಅಧಿಕಾರದಲ್ಲಿ ಇದ್ದರೆ ಇಂತಹ ತನಿಖೆ ಸಾಧ್ಯವಾಗಬಹುದು ಎಂಬ ವಿಶ್ವಾಸನ್ನೇನೂ ಮೂಡಿಸಿಲ್ಲ. ಅವರು ತನ್ನ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿ ಜುಲೈ 16 ರಂದು ರಾಜ್ಯವ್ಯಾಪಿ ಹರತಾಳಕ್ಕೆ ಎಡಪಕ್ಷಗಳು ಮತ್ತು ಇತರ ಪ್ರತಿಪಕ್ಷಗಳು ಕರೆ ನೀಡಿವೆ.

ವ್ಯಾಪಮ್ ಹಗರಣ ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರದ ಕೃಪಾಪೋಷಣೆಯಲ್ಲಿ ಸಮೃದ್ಧವಾಗಿ ಹರಡಿರುವಂತದ್ದು. ಈ ಕೊಲೆಗಡುಕ ಹಗರಣ ಬಿಜೆಪಿ ಮತ್ತು ಅದರ ರಾಜ್ಯಸರಕಾರದ ಪ್ರತಿಷ್ಠೆಗೆ ಕುಂದುಂಟು ಮಾಡಿದೆ.

ಆಳುವ ಪಕ್ಷ ಕೇಂದ್ರದಲ್ಲಿನ ಅದರ ಮಂತ್ರಿಗಳು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳು ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಲ್ಲಿ ಮುಳುಗಿರುವಾಗ ಕೇಂದ್ರದಲ್ಲಿರುವ ಮೋದಿ ಸರಕಾರ ಏನೂ ಆಗಿಲ್ಲ ಎಂಬಂತೆ ಇನ್ನೂ ನಟಿಸುತ್ತಿರಲು ಸಾಧ್ಯವಿಲ್ಲ.

ವ್ಯಂಗ್ಯಚಿತ್ರ: ನೈನನ್, ಟೈಂಸ್ ಆಫ್ ಇಂಡಿಯಾ
ವ್ಯಂಗ್ಯಚಿತ್ರ: ನೈನನ್, ಟೈಂಸ್ ಆಫ್ ಇಂಡಿಯಾ

ಕೊನೆಗೂ ಸಿಬಿಐ ತನಿಖೆ, ಸುಪ್ರಿಂ ಕೋರ್ಟ್ ಟಿಪ್ಪಣಿ, ಬಯಲಾದ ಆಳುವ ಮಂದಿಯ ಭಂಡತನ

ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ಈ ಕೊಲೆಗಡುಕ ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದೆ. ಸುಪ್ರಿಂ ಕೋರ್ಟಿನ ಮೇಲ್ವಿಚಾರಣೆಯಲ್ಲಿ ಇದು ನಡೆಂiಬೇಕು ಎಂಬ ಅರ್ಜಿಯ ಬಗ್ಗೆ ತನಿಖಾ ಸಂಸ್ಥೆಯ ಅಭಿಪ್ರಾಯ ಕೇಳಿ ಜುಲೈ 24 ರಂದು ವಿಚಾರಣೆ ನಡೆಸುವುದಾಗಿ ಅದು ಹೇಳಿದೆ.

ಇದನ್ನು ಸ್ವಾಗತಿಸುವುದಾಗಿ ಹೇಳಿರುವ ಬಿಜೆಪಿ ಮತ್ತು ಸುಪ್ರಿಂ ಕೋರ್ಟ್ ತನ್ನ ಕೇಳಿಕೆಯನ್ನು ಮನ್ನಿಸಿದೆ ಎಂದು ಹೇಳಿಕೊಂಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಕಳೆದ ಒಂದು ತಿಂಗಳಿಂದ ಈ ಆಳುವ ಪಕ್ಷ ಪ್ರದರ್ಶಿಸುತ್ತಿರುವ ಭಂಡತನವನ್ನು ತಾರಕಕ್ಕೆ ಏರಿಸಿದ್ದಾರೆ. ಏನೇನೋ ಸಬೂಬು ಕೊಟ್ಟು ಸಿಬಿಐ ತನಿಖೆಯ ವಿಚಾರದಿಂದ ತಪ್ಪಿಸಿಕೊಂಡೇ ಬರಲಾಗುತ್ತಿದ್ದು, ಜುಲೈ 9 ರಂದು ತನ್ನ ಮುಂದಿರುವ ಅರ್ಜಿಯ ಬಗ್ಗೆ ಸುಪ್ರಿಂ ಕೋರ್ಟ್ ಏನು ಆದೇಶ ನೀಡಬಹುದು ಎಂದು ಅಂದಾಜು ಮಾಡಿದ ಮೇಲೆಯೇ ಅವರಿಂದ ಸಿಬಿಐ ತನಿಖೆಯ ಮಾತು ಹೊರಟದ್ದು ಎಂಬುದು ಎಲ್ಲ ವೀಕ್ಷಕರಿಗೂ ಮನದಟ್ಟಾಗಿರುವ ಸಂಗತಿ.

***

ಕಳೆದ ಒಂದು ತಿಂಗಳಲ್ಲಿ ಪುಂಖಾನು ಪುಂಖವಾಗಿ ಬಯಲಾಗುತ್ತಿರುವ ಬಿಜೆಪಿಯ ಕೇಂದ್ರ ಮತ್ತು ರಾಜ್ಯಸರಕಾರಗಳ ಹಗರಣಗಳಿಗೆ, ಈ ಬಗ್ಗೆ ತಮ್ಮ ಸರ್ವೋಚ್ಚ ಮುಖಂಡನ ದಿವ್ಯಮೌನದ ಬಗ್ಗೆ ಉತ್ತರ ಕೊಡಲಾಗದ ಬಿಜೆಪಿ ವಕ್ತಾರರುಗಳು ಕಾಂಗ್ರೆಸ್ ಸರಕಾರಗಳ ಮಹಾಹಗರಣಗಳ ನೆರಳಲ್ಲೇ ಉಸಿರಾಡಲು ಹೆಣಗಬೇಕಾದ ಶೊಚನೀಯ ಪರಿಸ್ಥಿತಿಗೆ ಇಳಿದಿರುವುದು ಕಂಡು ಬಂದಿದೆ.

ವ್ಯಾಪಮ್ ಹಗರಣದಲ್ಲಂತೂ ಮಧ್ಯಪ್ರದೇಶದ ಹೈಕೋರ್ಟ್‌ನತ್ತ ತೋರಿಸಿ ಅವರದ್ದೇನೂ ಆಕ್ಷೇಪವಿಲ್ಲ, ನಿಮ್ಮದೇನು ಎಂಬ ಬಿಜೆಪಿ ವಕ್ತಾರರುಗಳು ಭಂಡತನವನ್ನು ಕೂಡ ದೇಶದ ಸರ್ವೋಚ್ಚ ನ್ಯಾಯಾಲಯವೇ ಮಧ್ಯಪ್ರದೇಶ ಹೈಕೋರ್ಟ್ ತನ್ನ ’ಜವಾಬ್ದಾರಿಯಿಂದ ಕೈತೊಳೆದುಕೊಳ್ಳಲು ಪ್ರಯತ್ನಿಸಿದೆ’ ಬಗ್ಗೆ ಮಾಡಿರುವ ಟಿಪ್ಪಣಿ ಬಯಲಿಗೆಳೆದಿದೆ.

ಇನ್ನು ಮುಂದೆ 37..38..39 ಎಂದೆಲ್ಲ ಸಾವುಗಳ ಲೆಕ್ಕ ಇರುವುದಿಲ್ಲ, ಹೈಕೋರ್ಟ್ ಈ ವಿಷಯವನ್ನು ಮುಟ್ಟುಂತಿಲ್ಲ ಎಂದು ಸುಪ್ರಿಂ ಕೋರ್ಟ್ ತಾಕೀತು ಮಾಡಿರುವುದು, ಮತ್ತು ಮಧ್ಯಪ್ರದೇಶದ ರಾಜ್ಯಪಾಲರ ಮೆಲಿನ ಎಫ್‌ಐಆರ್ ರದ್ದು ಮಾಡಿದ ಹೈಕೋರ್ಟ್ ಆದೇಶದ ಬಗ್ಗೆ ಮೋದಿ ಸರಕಾರ, ಚೌಹಾಣ್ ಸರಕಾರ ಮತ್ತು ರಾಜ್ಯಪಾಲರಿಂದ ನಾಲ್ಕು ವಾರಗಳ ಒಳಗೆ ವಿವರಣೆಯನ್ನು ಕೇಳಿರುವುದು ಬಿಜೆಪಿ ಮುಖಂಡರ ಅಳಿದುಳಿದ ಸಮರ್ಥನೆಗಳ ಟೊಳ್ಳುತನವನ್ನೂ ಬಯಲಿಗೆಳೆದಿವೆ.

ವ್ಯಾಪಮ್ ಹಗರಣದ ಫಲಾನುಭವಿಗಳ ಪಟ್ಟಿಯಲ್ಲಿ ರಜ್ಯದ ನ್ಯಾಯಾಧಿಶರುಗಳ ಮಕ್ಕಳ ಹೆಸರುಗಳು ಇವೆ ಎಂಬ ಮಾತುಗಳು ಕೇಳಬಂದಿರುವುದನ್ನು ಇಲ್ಲಿ ಗಮನಿಸಬಹುದು.

***

ಇದರ ಹಿಂದಿನ ದಿನವೇ ಈ ಹಗರಣವನ್ನು ಮುಚ್ಚಿ ಹಾಕುವ ಹುನ್ನಾರ ಈ ಸಾವುಗಳ ಹಿಂದೆ ಇರಬಹುದು ಎಂಬ ಸಂದೇಹವನ್ನು ಗಟ್ಟಿಗೊಳಿಸುವ ಪುರಾವೆಯೂ ದೊರೆತಿತು.

ಜನವರಿ 2012ರಲ್ಲಿ 19 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ನಮ್ರತಾ ದಮೋರ್ ಎಂಬಾಕೆಯ ಮೃತದೇಹ ಉಜ್ಜೈನ್ ಸಮೀಪ ರೈಲ್ಚೇ ಹಳಿಯ ಬಳಿ ಸಿಕ್ಕಿತು. ಆಕೆಯ ಸಾವು ಹೀಂಸಾತ್ಮಕ ಹಲ್ಲೆ ನಡೆಸಿ, ಉಸಿರುಗಟ್ಟಿಸಿ, ರೈಲಿನಿಂದ ಕೆಳಗೆಸೆದುದರಿಂದ ಸಂಭವಿಸಿತು ಎಂದು ಮೂವರು ವೈದ್ಯರು ಸಹಿ ಮಾಡಿದ ಮರಣೋತ್ತರ ಪರೀಕ್ಷೆ ಹೇಳಿತ್ತು. ಆದ್ದರಿಂದ ಇದು ಕೊಲೆ ಪ್ರಕರಣ ಎಂದು ಪೊಲೀಸರು ದಾಖಲು ಮಾಡಿಕೊಂಡಿದ್ದರು. ಆದರೆ ಈ ಕೇಸನ್ನು 2014ರಲ್ಲಿ ’ಆತ್ಮಹತ್ಯೆ ಎಂದು ಮುಚ್ಚಲಾಯಿತು. ಇದಕ್ಕೆ ಆಧಾರವಾದದ್ದು ರಾಜಸಯ ಸರಕಾರ ನಡೆಸುವ ಮೆಡಿಕೋ-ಲೀಗಲ್ ಇನ್ಸ್‌ಟಿಟ್ಯುಟ್‌ನ ಮುಖ್ಯಸ್ಥರು ಮೃತದೇಹವನ್ನು ನೋಡದೇ ಅದರ ಫೊಟೋಗಳನ್ನೇ ನೋಡಿ ಕೊಟ್ಟಿರುವ ಫೊರೆನ್ಸಿಕ್ ವರದಿ!

ಆದರೂ ಮುಖ್ಯಮಂತ್ರಿಗಳು ತಾನು ರಾಜೀನಾಮೆ ಕೊಡಬೇಕಾಗಿಲ್ಲ, ಏಕೆಂದರೆ ಈ ಹಗರಣವನ್ನು ಬೆಳಿಕಿಗೆ ತಂದ್ದು ನಾನೇ, ನನ್ನ ಬಗ್ಗೆ ಬಿಜೆಪಿ ಮುಖಂಡತ್ವಕ್ಕೆ, ಆರೆಸ್ಸೆಸ್‌ಗೆ ವಿಶ್ವಾಸವಿದೆ ಎಮದು ಇಗಲೂ ಹೇಳುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿಇದುವರೆಗೆ ರಕ್ಷಿಸಿಕೊಂಡಿರುವ ರಾಜ್ಯಪಾಲರನ್ನು ಮಾತ್ರ ಕೆಳಗಿಲಿಯುವಂತೆ ಮಾಡಬಹುದು ಎಂಬ ಊಹಾಪೋಹ ನಡೆದಿದೆ.

ಶವಾಸನ!!- ನಾನು ಸತ್ತಿದ್ದೇನೆ! ವ್ಯಂಗ್ಯಚಿತ್ರ: ಸತೀಶ ಆಚಾರ್ಯ
ಶವಾಸನ!!- ನಾನು ಸತ್ತಿದ್ದೇನೆ!
ವ್ಯಂಗ್ಯಚಿತ್ರ: ಸತೀಶ ಆಚಾರ್ಯ

Donate Janashakthi Media

Leave a Reply

Your email address will not be published. Required fields are marked *