ವೈದ್ಯರ ಜತೆ ವಿಜಯೇಂದ್ರ ಸಭೆ: ಕಾಂಗ್ರೆಸ್‌ ಆಕ್ಷೇಪ

 

ಬೆಂಗಳೂರು: ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸರ್ಕಾರಿ ವೈದ್ಯಾಧಿಕಾರಿಗಳ ಜತೆ ಸಭೆ ನಡೆಸಿರುವುದನ್ನು ಕೆಪಿಸಿಸಿ ಟೀಕಿಸಿದೆ.

ಈ ಕುರಿತು ಕಾಂಗ್ರೆಸ್‌ ಪಕ್ಷ ಟ್ವೀಟ್‌ ಮಾಡಿದ್ದು, ಇದಕ್ಕೆ ಬಿ.ವೈ.ವಿಜಯೇಂದ್ರ ಅವರೂ ತಿರುಗೇಟು ನೀಡಿದ್ದಾರೆ. ‘ಯಾವುದೇ ಸಾಂವಿಧಾನಿಕ ಹುದ್ದೆಯನ್ನು ಹೊಂದಿಲ್ಲದ ಬಿ.ವೈ.ವಿಜಯೇಂದ್ರ ಅವರು ಹೇಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಭೆ ನಡೆಸಿದ್ದಾರೆ’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ನೀವು ಮುಖ್ಯಮಂತ್ರಿ ಅಲ್ಲ, ಸಚಿವರು ಅಲ್ಲ, ಸಂಸದರಲ್ಲ, ಶಾಸಕರಲ್ಲ, ಗ್ರಾಮ ಪಂಚಾಯಿತಿ ಸದಸ್ಯ ಕೂಡ ಅಲ್ಲ. ಹೀಗಿದ್ದರೂ ಸರ್ಕಾರಿ ವೈದ್ಯಾಧಿಕಾರಿಗಳ ಸಭೆ ನಡೆಸಿದ್ದೇಕೆ. ಅದಕ್ಕೆ ಅಧಿಕಾರ ಕೊಟ್ಟವರು ಯಾರು? ಆಡಳಿತ ಯಂತ್ರದಲ್ಲಿ ಮೂಗು ತೂರಿಸಿದ ಈ ‘ದಲ್ಲಾಳಿತನ’ ಪ್ರಜಾಪ್ರಭುತ್ವದ ಪವಿತ್ರತೆಗೆ ಧಕ್ಕೆ ತಂದಿದೆ ಎಂದು ಟ್ವೀಟ್‌ನಲ್ಲಿ ತರಾಟೆಗೆ ತೆಗೆದುಕೊಂಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿ.ವೈ.ವಿಜಯೇಂದ್ರ, ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ ಈ ಪ್ರಜಾಪ್ರಭುತ್ವ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿದ ಪ್ರಧಾನ ಮಂತ್ರಿಯವರನ್ನು ತಮ್ಮ ಮನೆಗೆ ಕರೆಸಿಕೊಳ್ಳುತ್ತಿದ್ದ ಗುಲಾಮಿ ಪದ್ಧತಿಯ ಸಂಸ್ಕೃತಿ ನಮ್ಮದಲ್ಲ. ಯಡಿಯೂರಪ್ಪ ಕುಟುಂಬದ ಸದಸ್ಯ ಎನ್ನುವುದಕ್ಕಿಂತ ರಾಜ್ಯ ಬಿಜೆಪಿಯ ಜವಾಬ್ದಾರಿಯು ಉಪಾಧ್ಯಕ್ಷನಾಗಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಬಳಿ ಗೌರವ, ವಿಶ್ವಾಸ ಇರಿಸಿದ ಯಾರೇ ಬಂದರೂ ಅದಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯ. ವಿಪಕ್ಷಗಳು ಸದಾ ಹಳದಿ ಕನ್ನಡಕ ಧರಿಸಿ ನನ್ನ ಚಲನವಲನದ ಮೇಲೆ ನಿಗಾ ಇರಿಸುವುದು ಬಿಟ್ಟು ರಾಜ್ಯದ ಅಭಿವೃದ್ಧಿ ಕುರಿತು ರಚನಾತ್ಮಕ ಸಲಹೆಗಳಿದ್ದಲ್ಲಿ, ಸರ್ಕಾರಕ್ಕೆ ನೀಡಲಿ. ಅದುವೇ ರಾಜಕೀಯ ಪಕ್ಷದ ನಿಜವಾದ ಪ್ರಜಾಸತ್ತಾತ್ಮಕ ನಡೆ ಎಂದು ವಿಜಯೇಂದ್ರ ಹೇಳಿದ್ದಾರೆ.

ನನ್ನ ಬಳಿ ಗೌರವ, ವಿಶ್ವಾಸವಿರಿಸಿ ಯಾರೇ ಬಂದರೂ ಅದಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯ. “ವಿಪಕ್ಷಗಳು ಸದಾ ಹಳದಿ ಕನ್ನಡಕ ಧರಿಸಿ, ನನ್ನ ಚಲನವಲನದ ಮೇಲೆ ನಿಗಾ ಇರಿಸುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯ ಕುರಿತು ರಚನಾತ್ಮಕ ಸಲಹೆಗಳಿದ್ದಲ್ಲಿ ಸರ್ಕಾರಕ್ಕೆ ನೀಡಲಿ, ಅದುವೇ ರಾಜಕೀಯ ಪಕ್ಷದ ನಿಜವಾದ ಪ್ರಜಾತಾಂತ್ರಿಕ ನಡೆಯಾಗಿದೆ.

Donate Janashakthi Media

Leave a Reply

Your email address will not be published. Required fields are marked *