'ವೃತ್ತಿ ಶಿಕ್ಷಣ' ಬಿಕ್ಕಟ್ಟಿಗೆ ಕೊನೆ ಎಂದು?

ಬಿ.ರಾಜಶೇಖರ್ ಮೂತರ್ಿ

ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಖಾಸಗಿ ವೃತ್ತಿ ಶಿಕ್ಷಣ ಉದ್ಯಮಿಗಳು ಶುಲ್ಕ ಹೆಚ್ಚಳ ಮತ್ತು ಸೀಟು ಹಂಚಿಕೆ ವಿಚಾರದಲ್ಲಿ ಸಕರ್ಾರದ ಜೊತೆ ಜಗ್ಗಾಟಕ್ಕೆ ಇಳಿಯುತ್ತಾರೆ. ಇಂತಿಷ್ಟು ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆಯಲ್ಲಿ ವ್ಯತ್ಯಾಸವಾದರೆ ನಮ್ಮಿಂದ ಕಾಲೇಜುಗಳನ್ನು ನಡೆಸಲು ಸಾಧ್ಯವಾಗುವುದಿಲ್ಲವೆಂದು ವೃತ್ತಿ ಶಿಕ್ಷಣೋದ್ಯಮಿಗಳು `ಅಂಬೋಣಿ’ಸುತ್ತಾರೆ.

ನಮ್ಮ ಖಾಸಗಿ ಸಂಸ್ಥೆಗಳಿಂದಲೇ ‘ವೃತ್ತಿ ಶಿಕ್ಷಣ’ ನಡೆಯುತ್ತಿರುವುದು. ನಮ್ಮ ಖಾಸಗಿ ಸೇವೆ ಇಲ್ಲದೆ ವೃತ್ತಿ ಶಿಕ್ಷಣವಿಲ್ಲ. ಹೀಗಾಗಿ ನಮ್ಮ ಮೇಲೆ ಸರಕಾರವೇ ಅವಲಂಬನೆಯಾಗಬೇಕೆಂಬ ರೀತಿಯಲ್ಲಿ ಈ ಎಲ್ಲಾ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಹಲುಬುತ್ತಾರೆ. ಹೀಗಾಗಿ ಶುಲ್ಕ ನಿಗದಿ ವಿಚಾರದಲ್ಲಿ ನಾವು ಸೂಚಿಸುವಂತೆಯೇ ನಡೆಯಬೇಕೆಂದು ಪ್ರತಿ ವರ್ಷ ಸಕರ್ಾರದ ಜೊತೆ ಪಟ್ಟು ಹಿಡಿಯುವ ವರ್ತನೆಗಳು ಅವರ ಸವರ್ಾಧಿಕಾರದ ಧೋರಣೆಯನ್ನು ಎತ್ತಿತೋರಿಸುತ್ತಿವೆ. ವಾಸ್ತವವಾಗಿ ಸಕರ್ಾರವಾಗಲಿ ಅಥವಾ ಸಾರ್ವಜನಿಕರಾಗಲಿ ಅಜರ್ಿ ಹಾಕಿ ನೀವು ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಎಂದು ಬೇಡಿಕೊಂಡಿಲ್ಲ.

sfi protest against cet crisis

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತಮಗಿಷ್ಟವಾದ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅವಕಾಶವಿದೆ ನಿಜ. ಹಾಗಂತ ತಮಗಿಷ್ಟ ಬಂದ ರೀತಿಯಲ್ಲಿ ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆಯನ್ನು ನಡೆಸುವಂತಿಲ್ಲ. ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣವು ಸೇರಿದಂತೆ ಅಧುನಿಕ ಯುಗಕ್ಕೆ ತಕ್ಕಂತೆ ಎಲ್ಲಾ ಶೈಕಣಿಕ ಸೌಲಭ್ಯಗಳನ್ನು ಹೊಂದಿರಬೇಕು. ಜೊತೆಗೆ ಎಲ್ಲಾ ಹಂತದ ಸಿಬ್ಬಂದಿಗೆ ವೇತನ ಮತ್ತು ಇತರೆ ಸೌಲಭ್ಯಗಳನ್ನು ನೀಡಬೇಕಾದದ್ದು ಶಿಕ್ಷಣ ಸಂಸ್ಥೆಗಳ ಮಾಲಿಕರ ಕರ್ತವ್ಯವಾಗಿದೆ.

ಇಂತಹ ಘನ ಕಾರ್ಯಕ್ಕಾಗಿ ಈ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳು ಶುಲ್ಕ ಹೆಚ್ಚಳ ಅಥವಾ ಸೀಟು ಹಂಚಿಕೆಯಲ್ಲಿ ಹೆಚ್ಚಿನ ಪಾಲಿಗಾಗಿ ಪಟ್ಟು ಹಿಡಿಯುತ್ತಿಲ್ಲ. ಬದಲಿಗೆ ತಮ್ಮ ಲಾಭಕೋರ ನೀತಿಯ ಭಾಗವಾಗಿ ಇಂತಹ ಕೃತ್ಯಕ್ಕಿಳಿದಿವೆ.

ಸಕರ್ಾರಿ ಕಾಲೇಜುಗಳು  ವಿದ್ಯಾಥರ್ಿ ಪೋಷಕರ ಆದ್ಯತೆ
ಇಂದಿಗೂ ರಾಜ್ಯದಲ್ಲಿ ಬೆಂಗಳೂರಿನ ವಿಕ್ಟೋರಿಯ ಅಸ್ಪತ್ರೆಯನ್ನೊಳಗೊಂಡಿರುವ ಸಕರ್ಾರಿ ವೈದ್ಯಕೀಯ ಕಾಲೇಜು ಬೇಡಿಕೆಯ ದೃಷ್ಟಿಯಿಂದ ಪ್ರಥಮ ಸ್ಥಾನದಲ್ಲೇ ಇದೆ. ಪ್ರತಿಭಾವಂತ ವಿದ್ಯಾಥರ್ಿಗಳು ಈ ಕಾಲೇಜಿನಲ್ಲೇ ವಿದ್ಯಾಭ್ಯಾಸ ಮಾಡಲು ಪ್ರಥಮ ಆದ್ಯತೆಯನ್ನು ನೀಡುತ್ತಾರೆ. ಇಂತಹ ಕಾಲೇಜಿನ ಮುಂದೆ ಖಾಸಗಿಯಾಗಿ ಎಷ್ಟೇ ದೊಡ್ಡ ಕಟ್ಟಡ ಮತ್ತು ಹವಾನಿಯಂತ್ರಣ ವ್ಯವಸ್ಥೆ ಮತ್ತು ಹೂತೋಟವನ್ನು ಬೆಳೆಸಿದ್ದರೂ ಮುಖ್ಯವಾಗಿ ನುರಿತ ವೈದ್ಯ ಶಿಕ್ಷಕರು ಮತ್ತು ಸಿಬ್ಬಂದಿ ಹಾಗೂ ಅಗತ್ಯ ರೋಗಿಗಳ ಲಭ್ಯತೆಯೂ ವೈದ್ಯಕೀಯ ಕಾಲೇಜಿಗೆ ಬಹಳ ಮುಖ್ಯ ಎಂಬುದು ಖಾತ್ರಿಯಾಗಿದೆ. ಖಾಸಗಿ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜುಗಳಲ್ಲಿ ದುಬಾರಿ ವೆಚ್ಚವನ್ನು ರೋಗಿಗಳು ಭರಿಸಬೇಕಿರುವುದರಿಂದ ಅಂತಹ ಆಸ್ಪತ್ರೆಗಳಿಗೆ ಬಡ ರೋಗಿಗಳು ಹೋಗಲು ಸಾಧ್ಯವಿಲ್ಲ. ಇನ್ನೂ ಖಾಸಗಿ ಕಾಲೇಜುಗಳಲ್ಲಿ ಸಿಬ್ಬಂದಿಗಳ ದುಸ್ಥಿತಿಯು ಹೇಳತೀರದ್ದಾಗಿದೆ. ಅಭದ್ರತೆಯ ಉದ್ಯೋಗದಲ್ಲಿರುವ ಈ ಯುವಜನರು ಸಂಬಳ, ಸಾರಿಗೆ ಭತ್ಯೆ ಇತರೆ ಸೌಲಭ್ಯ ಎಂಬ ಹಕ್ಕುಗಳನ್ನು ಚಲಾಯಿಸುವ ಹಾಗಿಲ್ಲ. ಕೊಟ್ಟಷ್ಟು ಈಸ್ಕೊಂಡು ದುಡಿಯಬೇಕು. ಒಟ್ಟಾರೆ ಶಿಕ್ಷಣ ಸಂಸ್ಥೆಗಳ ಏಳಿಗೆಯ ಹೆಸರಿನಲ್ಲಿ ದುಡಿಮೆ ಲೆಕ್ಕವಿಲ್ಲದಂತೆ ಸೂಕ್ತ ಪ್ರತಿಫಲವಿಲ್ಲದೇ ದುಡಿಯಬೇಕು.

`ಸಕರ್ಾರದ ಸಹಾಯ ಬೆಂಬಲ ಬೇಕು-ನಿಯಂತ್ರಣ ಮಾತ್ರ ಬೇಡ’
ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಸಕರ್ಾರದ ಭೂಮಿ, ರಸ್ತೆ, ನೀರು ಮತ್ತು ವಿದ್ಯುತ್ ಮುಂತಾದ ಸೌಲಭ್ಯಗಳನ್ನು ಅಗ್ಗದ ದರದಲ್ಲಿ ಪಡೆಯುತ್ತವೆ. ಈ ರೀತಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಕರ್ಾರದ ಎಲ್ಲಾ ಸವಲತ್ತುಗಳು ಬೇಕು. ಆದರೆ ಸಕರ್ಾರದ ಯಾವ ನಿಯಂತ್ರಣವೂ ಬೇಡ.
ಬಡ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಸಕರ್ಾರಿ ವೈದ್ಯಕೀಯ ಕಾಲೇಜುಗಳಲ್ಲಿ ನಿಗದಿ ಮಾಡುವಷ್ಟು ಶುಲ್ಕವನ್ನು ಖಾಸಗಿ ವೃತ್ತಿಪರ ಕಾಲೇಜುಗಳಲ್ಲೂ ಇಂತಿಷ್ಟು ಸೀಟುಗಳಿಗೆ ಶುಲ್ಕ ನಿಗದಿ ಮಾಡಬೇಕೆಂದು ವಿದ್ಯಾಥರ್ಿ-ಪೋಷಕರ ಹಕ್ಕೊತ್ತಾಯ. ಇಂತಹ ವಿಚಾರದಲ್ಲಿ ಸಕರ್ಾರಗಳು ರಾಜಕೀಯ ಇಚ್ಚಾಶಕ್ತಿಯನ್ನು ಪ್ರದಶರ್ಿಸುವುದಿಲ್ಲ. ಬದಲಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ತಾಳಕ್ಕೆ ಕುಣಿಯುವ ಸ್ಥಿತಿಯನ್ನೇ ಕಾಣುತ್ತಿದ್ದೇವೆ. ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಮೊಂಡುತನವನ್ನು ಪ್ರದಶರ್ಿಸುತ್ತಿವೆ. ನಮ್ಮ ಸಂವಿಧಾನದ ಕೆಲ ಉಲ್ಲೇಖಗಳನ್ನು ಬಳಸಿಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸಕರ್ಾರಗಳು ನಿಯಂತ್ರಣ ಸಾಧಿಸುವಂತಿಲ್ಲವೆಂದು ಹೇಳುತ್ತಿವೆ. ಇದಕ್ಕೆ ಪೂರಕವೆಂಬಂತೆ ನಮ್ಮ ನ್ಯಾಯಾಲಯಗಳು ವೃತ್ತಿಶಿಕ್ಷಣ ಸಂಸ್ಥೆಗಳ ಮಾಲಿಕರ ಪರವಾದ ತೀಪರ್ುಗಳನ್ನೇ ನೀಡಿವೆ.

ವ್ಯಾಪಾರಕ್ಕೆ ಅನುವು
ಇಂತಹ ಸಂಸ್ಥೆಗಳ ಮೇಲೆ ಯಾವುದೇ ಹಿಡಿತ ಇಲ್ಲದಂತೆ ಮಾಡಲು ಸ್ವಾಯತ್ತ, ಖಾಸಗಿ ವಿಶ್ವ ವಿದ್ಯಾಲಯಗಳು ಎಂತೆಲ್ಲಾ ಮಾಡಿ, ಸಕರ್ಾರಗಳು ಯಾವುದೇ ನಿರ್ಬಂಧವನ್ನು ಹೇರದಂತೆ ನೋಡಿಕೊಳ್ಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸಕರ್ಾರ ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆಗೆ ಸಂಬಂಧಪಟ್ಟಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮೂಲಭೂತ ಸೌಕರ್ಯಗಳನ್ನು ಆಧರಿಸಿ ತೀಮರ್ಾನಿಸುವಂತೆ ಸಮಿತಿಯೊಂದನ್ನು ರಚಿಸಿ ಹಿಂಬಾಗಿಲಿನಿಂದ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಇಂತಹ ಮಸೂದೆಯನ್ನು ತ್ವರಿತಗತಿಯಲ್ಲಿ ಜಾರಿಗೆ ತನ್ನಿ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಸಕರ್ಾರವನ್ನು ಒತ್ತಾಯಿಸುತ್ತಿವೆ.

ಹೀಗಾಗಿ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳು ಮನಬಂದಂತೆ ಶುಲ್ಕ ಏರಿಸುವುದು. ಅಸಮರ್ಪಕವಾಗಿ ಶೈಕ್ಷಣಿಕ ನೀತಿ ನಿರೂಪಕ ಕ್ರಮ-ಮಾನದಂಡಗಳನ್ನು ತಾವೇ ನಿರ್ಧರಿಸಿಕೊಳ್ಳುವುದು. ವಿದ್ಯಾಥರ್ಿಗಳಿಂದ ವಿವಿಧ ಹೆಸರಿನಲ್ಲಿ ಹಣವನ್ನು ಲೂಟಿ ಮಾಡುವುದು. ಇಂತಹ ಯಾವುದೇ ಅಕ್ರಮಗಳ ಬಗ್ಗೆ ಸೊಲ್ಲೆತ್ತಿದ ವಿದ್ಯಾಥರ್ಿ-ಪೋಷಕರ ವಿರುದ್ದ ಗೂಂಡಾಗಿರಿ ಮಾಡುವುದು. ಸ್ಥಳೀಯ ಪೋಲಿಸರಿಂದ ಬೆದರಿಸುವುದು ಮಾಮೂಲಾಗಿ ಹೋಗಿದೆ. ಇಂತಹ ಅಮಾನವೀಯ ವರ್ತನೆಗಳ ಬಗ್ಗೆ ಸಕರ್ಾರ ಕ್ರಮ ವಹಿಸುತ್ತಿಲ್ಲ. ಪಕ್ಕದ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿರುವ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳಿಗಿಂತ ನಮ್ಮ ರಾಜ್ಯದ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಶುಲ್ಕ ನಿಗದಿ ಮಾಡಿಸಿಕೊಳ್ಳುವಲ್ಲಿ ಮತ್ತು ಸೀಟುಗಳನ್ನು ಪಡೆಯುವಲ್ಲಿ ಮುಂಚೂಣಿಯಲ್ಲಿದ್ದು ಶಿಕ್ಷಣ `ವಾಣಿಜ್ಯೋದ್ಯಮ’ದಲ್ಲಿ `ಹೆಸರು’ ಪಡೆಯುತ್ತಿವೆ.

ಹಲ್ಲು ಕಿತ್ತ ಹಾವು
ದೆಹಲಿಯಲ್ಲಿರುವ ಮಾನವ ಸಂಪನ್ಮೂಲ ಇಲಾಖೆಯಡಿಯಲ್ಲಿರುವ ಭಾರತಿಯ ವೈದ್ಯಕೀಯ ಪರಿಷತ್(ಎಂಸಿಐ) ಮತ್ತು ಭಾರತಿಯ ತಾಂತ್ರಿಕ ಪರಿಷತ್ (ಟಿಸಿಐ) ಸ್ವಾಯತ್ತ ಸಂಸ್ಥೆಗಳು ಹಲ್ಲುಕಿತ್ತ ಹಾವಿನಂತಿವೆ. ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳು ಸಕರ್ಾರದ ಕಾನೂನಿನಂತೆ ನೀತಿ ನಿಯಮಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಪರಿಶೀಲನೆ ಮಾಡುವುದನ್ನು ಬಿಟ್ಟಂತಾಗಿದೆ. ಕಾಲೇಜುಗಳಲ್ಲಿ ವಿದ್ಯಾಥರ್ಿಗಳ ಮಧ್ಯೆ ನಡೆಯುವ ರ್ಯಾಗಿಂಗ್ ವಿಚಾರಗಳಿಗೆ ಮಾತ್ರ ಗಮನ ಹರಿಸುವುದಕ್ಕೆ ಮಾತ್ರ ಸೀಮಿತವಾಗಿರುವುದನ್ನು ಕಾಣುತ್ತಿದ್ದೇವೆ.

ಪುಟ್ಟ ಸಮಾಜವಾದಿ ದೇಶವಾದ ಕ್ಯೂಬಾ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಸಾಕಷ್ಟು ಹೆಸರು ಮಾಡಿದೆ. ವೆನೆಜುವೆಲಾದಂತಹ ದೇಶದಲ್ಲಿ ಅಮೆರಿಕನ್ ಬಾಲಬಡುಕ ಆಳುವವರ ಕಾಲದಲ್ಲಿ ಅನಾದಾರಕ್ಕೀಡಾಗಿದ್ದ `ಜನಾರೋಗ್ಯ’ವನ್ನು ಸುಧಾರಿಸುವ ನಿಟ್ಟಿನಲ್ಲಿ ವೆನೆಜುವೆಲಾದಲ್ಲಿ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ್ನನು ಬೆಳೆಸುವ ನಿಟ್ಟಿನಲ್ಲಿ ವೈದ್ಯರನ್ನು ಒದಗಿಸುತ್ತಿದೆ. ಇದಲ್ಲದೇ ಮಾನವೀಯ ಸೇವೆಯ ಭಾಗವಾಗಿ ತನ್ನ ದೇಶದ ವೈದ್ಯರನ್ನು ಭೂಕಂಪ, ಪ್ರವಾಹ, ಸುನಾಮಿಯಂತಹ ಪ್ರಕೃತಿ ವಿಕೋಪ ಎದುರಿಸುತ್ತಿರುವ ಜಗತ್ತಿನ ನಾನಾ ದೇಶಗಳಿಗೆ ಕಳುಹಿಸಿ ಕೊಟ್ಟಿದೆ. ವ್ಯಾಪಾರೀಕರಣವಿಲ್ಲದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಅಂತಹ ಸಮರ್ಪಣ ಮನೋಭಾವದ ವೈದ್ಯರ ಪಡೆಯನ್ನು ಕ್ಯೂಬಾ ರೂಪಿಸಲು ಸಾಧ್ಯವಾಗಿದೆ. ಭಾರತವೂ ಈ ವಿಷಯದಲ್ಲಿ ಕ್ಯೂಬಾ ದೇಶದಿಂದ ಪಾಠ ಕಲಿಯಬೇಕಾಗಿದೆ.
ನಮ್ಮ ದೇಶದಲ್ಲಿ ವೃತ್ತಿ ಶಿಕ್ಷಣವನ್ನು ಖಾಸಗಿ ಒಡೆತನಕ್ಕೆ ಕೊಟ್ಟು, ಖಾಸಗಿಯವರಿಂದ ವೃತ್ತಿ ಶಿಕ್ಷಣ ಮತ್ತು ಅಗತ್ಯ ಸೇವೆಯನ್ನು ಪಡೆಯಲು ಜನ ಸಾಮಾನ್ಯರೇ ಎಲ್ಲಾ ವೆಚ್ಚವನ್ನು ಭರಿಸುವಂತೆ ಮಾಡಲಾಗುತ್ತಿದೆ. ಹೀಗಾಗಿ ಹಣವುಳ್ಳವರಿಗೆ ‘ವೃತ್ತಿಪರ ಶಿಕ್ಷಣ’ ಮತ್ತು ಸೇವೆ ಎಂಬ ಅಲಿಖಿತ ಕಾನೂನು ಜಾರಿಯಲ್ಲಿದೆ. ಹೀಗಾಗಿ ವಿಶ್ವದಲ್ಲೇ ಹೆಚ್ಚಿನ ಯುವಜನತೆಯನ್ನು ಹೊಂದಿರುವ ನಮ್ಮ ದೇಶ ಎಂಬ ಪ್ರಖ್ಯಾತಿ ಇದ್ದರೂ, ಯುವ ಸಂಪತ್ತಿಗೆ ಪೂರಕ ಕೌಶಲ್ಯ ಮತ್ತು ವೃತ್ತಿಪರ ಶಿಕ್ಷಣವನ್ನು ಒದಗಿಸದ ಕಾರಣ ಲಕ್ಷಾಂತರ ಯುವಜನತೆಯ ಉತ್ತಮ ಭವಿಷ್ಯವೇ ಇಲ್ಲವಾಗಿದೆ.

ಖಾಸಗಿಗೆ ರತ್ನಗಂಬಳಿ
ನಮ್ಮ ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾರುಪತ್ಯ ಎಷ್ಟಿದೆ ಎಂಬುದಕ್ಕೆ ಖಾಸಗಿ ಮತ್ತು ಸಕರ್ಾರಿ ವೃತ್ತಿ ಶಿಕ್ಷಣ ಸಂಸ್ಥೆಗಳ ವ್ಯತ್ಯಾಸವನ್ನು ಗಮನಿಸಿದರೆ ನಮ್ಮ ಸಕರ್ಾರಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯಾವ ರೀತಿ ರತ್ನಗಂಬಳಿ ಹಾಸಿವೆ ಎಂಬುದು ಗೊತ್ತಾಗುತ್ತದೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಕರ್ಾರಿ ವೈದ್ಯಕೀಯ ಕಾಲೇಜುಗಳು 18, ಖಾಸಗಿ ವೈದ್ಯಕೀಯ ಕಾಲೇಜುಗಳು 35 ಹಾಗೂ ಸಕರ್ಾರಿ ದಂತ ವೈದ್ಯಕೀಯ 2, ಖಾಸಗಿ ದಂತ ವೈದ್ಯಕೀಯ 36 ರಷ್ಟಿವೆ. ಇನ್ನೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಕರ್ಾರಿ 14 ಖಾಸಗಿ ಇಂಜಿನಿಯರಿಂಗ್ 196 ರಷ್ಟಿವೆ. ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸಕರ್ಾರಿ 81, ಖಾಸಗಿ ಪಾಲಿಟೆಕ್ನಿಕ್ 216 ರಷ್ಟಿವೆ. ಔಷಧಾಲಯ ಕಾಲೇಜುಗಳು(ಬಿ.ಫಾಮರ್್)ಗಳಲ್ಲಿ ಸಕರ್ಾರಿ 1, ಖಾಸಗಿಯಾಗಿ 60 ರಷ್ಟಿವೆ. ಹೀಗೆ ಐಟಿಐ ಮುಂತಾದ ಎಲ್ಲಾ ಎಲ್ಲಾ ರೀತಿಯ ವೃತ್ತಿ ಶಿಕ್ಷಣವೂ ಕೂಡ ಖಾಸಗಿಯವರ ಕಪಿ ಮುಷ್ಠಿಯಲ್ಲಿದೆ.

ಈ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರಾಗಿರುವವರು ಶ್ರೀಮಂತ ಬಂಡವಾಳಗಾರರು, ಕಾಂಗ್ರೆಸ್-ಬಿಜೆಪಿಯಲ್ಲಿರುವ ರಾಜಕೀಯ ಮುಖಂಡರುಗಳು ಮತ್ತು ಮಠಾಧಿಪತಿಗಳೇ ಆಗಿದ್ದಾರೆ. ಹೀಗಾಗಿ ಇವರು ತಮ್ಮ ಸಂಸ್ಥೆಗಳು ಲಾಭ ಗಳಿಸುವ ಲೆಕ್ಕಚಾರದಲ್ಲಿರುತ್ತಾರೆ. ಆದ್ದರಿಂದ ಸಕರ್ಾರದ ವೃತ್ತಿ ಶಿಕ್ಷಣ ಸಂಸ್ಥೆಗಳು ಬೆಳೆಯದಂತೆ ನೀತಿಗಳನ್ನು ಇವರೇ ಜಾರಿಗೆ ತರುತ್ತಾರೆ. ಆ ಮೂಲಕ ತಮ್ಮ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ. ರಾಜ್ಯದಲ್ಲಿ ಸಾಮಾಜಿಕ-ಆಥರ್ಿಕವಾಗಿ ಹಿಂದುಳಿದಿರುವ ವಿದ್ಯಾಥರ್ಿಗಳಿಗೆ ವೃತ್ತಿ ಶಿಕ್ಷಣ ಸಿಕ್ಕರೆಷ್ಟು-ಬಿಟ್ಟರೆಷ್ಟು? ಇದರಿಂದ ಇವರಿಗೆ ಆಗುವ ಲಾಭವೇನು? ಬದಲಿಗೆ ಸಕರ್ಾರಗಳು ನಮ್ಮ ತಂಟೆಗೆ ಬರದೆ ಇದ್ದರೆ ಸಾಕು. ನಮ್ಮ ರಾಜ್ಯದ ವಿದ್ಯಾಥರ್ಿಗಳಾಗಲೀ ಅಥವಾ ಬೇರೆ ರಾಜ್ಯಗಳ ಅಥವಾ ದೇಶಗಳ ವಿದ್ಯಾಥರ್ಿಗಳಾದರೇನಂತೆ, ನಾವು ಬೇಕಾದವರಿಗೆ ಬೇಕಾದಷ್ಟು ಬೆಲೆಗೆ ಸೀಟುಗಳನ್ನು ಮಾರಿಕೊಳ್ಳಬಹುದು ಎಂಬ ತೀಮರ್ಾನಕ್ಕೆ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳು ಬಂದಿವೆ.

ಆದರೆ ಇತ್ತೀಚೆಗೆ ತಾಂತ್ರಿಕ ಕ್ಷೇತ್ರದಲ್ಲಿನ ಉತ್ಪನ್ನ ವಿಭಾಗದ ಕೈಗಾರಿಕೆಗಳು ಕಡಿಮೆಯಾಗುತ್ತಿರುವುದರಿಂದ ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತಿವೆ. ಹೀಗಾಗಿ ಇಂಜಿನಿಯರಿಂಗ್ ಕೋಸರ್ುಗಳು ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಖಾಲಿ ಉಳಿಯುತ್ತಿವೆ ಎಂದಾದರೂ ದುಬಾರಿ ಶಿಕ್ಷಣ ಶುಲ್ಕ ವೆಚ್ಚವನ್ನು ಭರಿಸಲಾಗದೆ ಬಡ ವಿದ್ಯಾಥರ್ಿಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಅಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಸಕರ್ಾರಿ ಸಿಇಟಿ ಮೂಲಕ ಬರುವ ವಿದ್ಯಾಥರ್ಿಗಳಿಗೆ ಇಂಜಿನಿಯರಿಂಗ್ ಸೀಟುಗಳನ್ನು ಕೊಡಲು ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗುತ್ತಿವೆ. ಪರಿಸ್ಥಿತಿ ಹೀಗಿದ್ದರೂ ಶುಲ್ಕ ನಿಗದಿ ವಿಚಾರದಲ್ಲಿ ತಮ್ಮ ಪಟ್ಟನ್ನು ಸಡಿಲಿಸುತ್ತಿಲ್ಲ.
ಹೀಗಾಗಿಯೇ ಯಾವ ಸಕರ್ಾರಗಳು ಅಧಿಕಾರಕ್ಕೆ ಬಂದರೂ ಶಾಶ್ವತವಾಗಿ ವೃತ್ತಿ ಶಿಕ್ಷಣ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳುವ ಇಚ್ಚಾಶಕ್ತಿಯನ್ನು ಪ್ರದಶರ್ಿಸುತ್ತಿಲ್ಲ. ಇತ್ತ ವಿದ್ಯಾಥರ್ಿ-ಪೋಷಕ ಸಂಘಟನೆಗಳು ಕೂಡ ಬಲಿಷ್ಠವಾಗಿ ಹೋರಾಟ ರೂಪಿಸುವಂತಹ ಪರಿಸ್ಥಿತಿಯೂ ಇಲ್ಲವಾಗಿದೆ. ಹೀಗಾಗಿ ಪ್ರಜಾಪ್ರಭುತ್ವ ಎಂಬ ಹೆಸರಿನ ನಾಡಿನಲ್ಲಿ ಪ್ರಜಾಪ್ರಭುತ್ವ ವಿರೋಧಿ ನೀತಿಗಳು ಎಗ್ಗಿಲ್ಲದೇ ಜರುಗುತ್ತಿವೆ. ‘ದುಡ್ಡು ಕೊಟ್ಟವರಿಗೆ ಮಾತ್ರ ವೃತ್ತಿ ಶಿಕ್ಷಣ ಮೀಸಲು’ ಎಂಬ ಅಲಿಖಿತ ಕಾನೂನು ಜಾರಿಯಲ್ಲಿರುವಂತಾಗಿದೆ. ಇಂತಹ ಎಲ್ಲಾ ಧನದಾಹಿ ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ಸಂವಿಧಾನಕ್ಕೆ ತಿದ್ದುಪಡಿ ತಂದು ‘ಕೇಂದ್ರೀಯ ಶಾಸನ’ ರೂಪಿಸುವ ತುತರ್ು ಅಗತ್ಯವಿದೆ. ಜೊತೆಗೆ ಕೇಂದ್ರ-ರಾಜ್ಯ ಸಕರ್ಾರಗಳು ಅಗತ್ಯಕ್ಕೆ ತಕ್ಕಷ್ಟು ಸಕರ್ಾರಿ ವೃತ್ತಿಪರ ಕೋಸರ್ುಗಳ ಕಾಲೇಜುಗಳನ್ನು ಹಂತ ಹಂತವಾಗಿ ತೆರೆಯಬೇಕಿದೆ. ಹೀಗಿರುವ ಎಲ್ಲಾ ಹಂತದ ವೃತ್ತಿ ಶಿಕ್ಷಣ ಸಂಸ್ಥೆಗಳಿಗೆ ಅಧುನಿಕ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಖಾಲಿ ಇರುವ ಎಲ್ಲಾ ಹಂತದ ಹುದ್ದೆಗಳಿಗೆ ಹೊರಗುತ್ತಿಗೆ ನೀಡದೆ ಖಾಯಂ ನೇಮಕವಾಗಬೇಕು. ಈ ಎಲ್ಲಾ ಕಾರ್ಯಗಳನ್ನು ನೆರವೇರಿಸಲು ಸೂಕ್ತ ಹಣಕಾಸಿನ ಅಗತ್ಯವಿದೆ. ಇಂತಹ ಜನಪರ ನೀತಿಗಳನ್ನು ಜಾರಿಗೆ ತರಲು ನಮ್ಮ ರಾಜ್ಯದಲ್ಲಷ್ಟೇ ಅಲ್ಲದೆ ದೇಶಾದ್ಯಂತ ವ್ಯಾಪಕವಾಗಿ ವಿದ್ಯಾಥರ್ಿ-ಯುವಜನ ಸಂಘಟನೆಗಳ ಮುಖಾಂತರ ವಿದ್ಯಾಥರ್ಿ-ಪೋಷಕರ ನಡುವೆ ಜಾಗೃತಿ ಮೂಡಬೇಕಿದೆ. ಇಂತಹ ಸಮಾಜಮುಖಿ ಕಾರ್ಯಕ್ಕೆ ಎಲ್ಲಾ ಸ್ತರದ ಜನವಿಭಾಗಗಳು ಧ್ವನಿ ಎತ್ತಬೇಕಿದೆ. ಆಗ ಮಾತ್ರ ವೃತ್ತಿ ಶಿಕ್ಷಣ ಬಿಕ್ಕಟ್ಟಿನ ಪರಿಹಾರದ ಹಾದಿಯನ್ನು ಕಾಣಬಹುದಾಗಿದೆ.
0

Donate Janashakthi Media

Leave a Reply

Your email address will not be published. Required fields are marked *