ವಿಸ್ಟ್ರಾನ್ ಘಟನೆ : ನಿಷ್ಪಕ್ಷಪಾತ ತನಿಖೆ ನಡೆಸಲು ಪ್ರಗತಿಪರ ಸಂಘಟನೆಗಳ ಆಗ್ರಹ

ಕೋಲಾರ : ವಿಸ್ಟ್ರಾನ್ ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ಹಾಗೂ ಕಾರ್ಮಿಕ ಕಾಯಿದೆಗಳನ್ನು ಜಾರಿ ಮಾಡದ ಆಡಳಿತ ಮಂಡಳಿ ಮತ್ತು ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಛೇರಿ ಮುಂದೆ ಶನಿವಾರ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ವಿಸ್ಟ್ರಾನ್  ಕಾರ್ಖಾನೆಯ ಮಾಲೀಕರು ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯದಿಂದ ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮಾಡಿ ಈ ಘಟನೆ ಸಂಬಂಧಿಸಿದ್ದು ಇದರ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಿ ನೈಜ ಸತ್ಯಾಂಶ ಹೊರಬರಬೇಕಾಗಿದೆ  ಕಾರ್ಮಿಕರನ್ನು 12 ಗಂಟೆಗಳ ಕಾಲ  ದುಡಿಸಿಕೊಂಡರು ಯಾಕೆ ನಾಲ್ಕು ತಿಂಗಳಿಂದ ಸಂಬಳ ನೀಡಿಲ್ಲ ಇದರ ಬಗ್ಗೆ  ಜಿಲ್ಲಾಡಳಿತ ವೈಫಲ್ಯ ಎದ್ದು ಕಾಣುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ ದೇಶದಲ್ಲಿ ಸಾಮಾನ್ಯ ನಾಗರೀಕ ಸಮಾಜ ಉಳಿವಿಗಾಗಿ ಕೆಂಪು ಹಸಿರು ಮತ್ತು ನೀಲಿ ಬಣ್ಣದ ಬಾವುಟಗಳ ಮೂಲಕ ನ್ಯಾಯ ಕೇಳುತ್ತಾ ಇದ್ದೇವೆ ಈ ನ್ಯಾಯ ಕೇಳುವುದು ಕೂಡ ಬಂಡವಾಳಶಾಹಿ ವ್ಯವಸ್ಥೆಯ ಪರವಾಗಿರುವ ಮೋದಿ ಸರಕಾರ ನಮ್ಮನ್ನು ಭಯೋತ್ಪಾದಕರ ರೀತಿಯಲ್ಲಿ ನೋಡುತ್ತಾರೆ ವಿಧಾನ ಪರಿಷತ್ ನಲ್ಲಿ ಕುರ್ಜಿಗಾಗಿ ಕಿತ್ತಾಡಬಹುದು ನಮ್ಮ ದುಡಿಮೆಯ ಸಂಬಳ ಕೇಳುವುದು ತಪ್ಪಾಗಿದೆ ನಮ್ಮ ಬಾವುಟಗಳು ನ್ಯಾಯದ ಪರವಾದರೇ ಸರಕಾರ ಅನ್ಯಾಯದ ಪರವಾಗಿದೆ ಎಂದರು.

ಬಂಡವಾಳ ಹೂಡಿಕೆಗೆ ಭೂಮಿ ಕಳೆದುಕೊಂಡವರನ್ನು ಕೆಲಸದಲ್ಲಿ  ಖಾಯಂ ಮಾಡಿಲ್ಲ  ಸರಕಾರದ ಮೇಲೆ ಸಂಸದರು ಒತ್ತಡ ತಂದು ತನಿಖೆಯನ್ನು ದಿಕ್ಕು ತಪ್ಪಸುತ್ತಾ ಇದ್ದಾರೆ ಕಾರ್ಮಿಕರು ತಪ್ಪು ಮಾಡುದ್ರು ಎಂದು ಕ್ರಿಮಿನಲ್ ರೀತಿಯಲ್ಲಿ ಅವರನ್ನು ಸಮಾಜದಲ್ಲಿ ನೋಡುತ್ತಾ ಇದ್ದಾರೆ ನಿಷ್ಪಕ್ಷಪಾತವಾಗಿ ತನಿಖೆಯಾಗಿ ಜನತೆಯ ಮುಂದೆ ಬಹಿರಂಗ ಪಡಿಸಬೇಕು ಈ ಘಟನೆಯನ್ನು ಕೈಗಾರಿಕಾ ವಲಯದ ರೀತಿಯಲ್ಲಿ ನೋಡಬೇಕಾಗಿದೆ  ದೇಶದ ಆಸ್ತಿ ಕಾರ್ಮಿಕರು ಅವರ ಬೆಂಬಲಕ್ಕೆ ನಿಂತು ಧೈರ್ಯ ತುಂಬಬೇಕಾಗಿದೆ ಎಂದರು.

ವಿಸ್ಟ್ರಾನ್ ಕಂಪನಿಯನ್ನು ಶೀಘ್ರವಾಗಿ ಪ್ರಾರಂಭಿಸಿ ಈಗಾಗಲೇ ದುಡಿಯುತ್ತಾ ಇರುವರನ್ನು ಪುನಃ ನೇಮಕ ಮಾಡಿಕೊಂಡು ಖಾಯಂ ಮಾಡಬೇಕು ಸ್ಥಳೀಯ ಸಂಸದ ರಾಜಕೀಯವಾಗಿ ಪ್ರೇರಿತಗೊಳಿಸುತ್ತಿದ್ದು ಇದರ ಬಗ್ಗೆ ತನಿಖೆಯಾಗಬೇಕು ಕಾರ್ಮಿಕರಿಗೆ ಬಾಕಿ‌ ಇರುವ ವೇತನವನ್ನು ಪಾವತಿಸಬೇಕು ಕೈಗಾರಿಕಾ ಕಾನೂನನ್ನು ಜಾರಿಗೊಳಿಸಲು ವಿಫಲವಾಗಲು ಕಾರಣವಾದವರ ಮೇಲೆ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜಾರಿ ಮಾಡಬೇಕು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಾರ್ಮಿಕರಿಗೆ ವೇತನ ರಹಿತ ರಜೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ  ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್ ವರಲಕ್ಷ್ಮೀ, ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಭೀಮಸೇನೆ ರಾಜ್ಯ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ   ಜೆಎಂಎಸ್ ರಾಜ್ಯ ಉಪಾಧ್ಯಕ್ಷೆ ವಿ.ಗೀತಾ,ಮಾತನಾಡಿದರು ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡರಾದ ವಕ್ಕಲೇರಿ ರಾಜಪ್ಪ,ರೈತ ಸಂಘ ನಳಿನಿಗೌಡ,  ವಿವಿಧ ಸಂಘಟನೆಗಳ ಮುಖಂಡರಾದ ವಿಜಯಕೃಷ್ಣ, ಪಿ.ಶ್ರೀನಿವಾಸ್, ತಂಗರಾಜ್, ಸುಶೀಲಾ, ಆಶಾ,ಮುನಿವೆಂಕಟಪ್ಪ, ವಿ.ಅಂಬರೀಶ್, ನಾಗೇಶ್, ವಾಸುದೇವಾರೆಡ್ಡಿ, ಶಿವಪ್ಪ, ಬೀರಾಜು, ವಿಜಯಕುಮಾರಿ, ಅಂಕಿತಾ, ಭೀಮರಾಜ್, ಮುಂತಾದವರು ಇದ್ದರು.

ರಾಯಚೂರು : SFI ಸಂಘಟನೆ ವಿರುದ್ಧ ಕೋಲಾರ ಸಂಸದ ಮುನಿಸ್ವಾಮಿ ರವರ ರಾಜಕೀಯ ಪ್ರೇರಿತ ಆರೋಪವನ್ನು ಖಂಡಿಸಿ SFI ಮತ್ತು DYFI ದಿಡೀರ್  ಪ್ರತಿಭಟನೆ ನಡೆಸಿದ್ದಾರೆ.

ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಐಫೋನ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ವೇತನ ಸಮಸ್ಯೆ ಬಗೆಹರಿಸಲು ಶನಿವಾರ ಬೆಳಗ್ಗೆ ಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.

ಆದರೆ ಈ ಘಟನೆಗೆ ಎಸ್ಎಫ್ಐಗೆ ಸಂಬಂಧವಿಲ್ಲದಿದ್ದರೂ ಎಸ್ಎಫ್ಐ ಸಂಘಟನೆ ಹೊರ ರಾಜ್ಯದ ಜನರನ್ನು ಕರೆಸಿಕೊಂಡು ದಾಂಧಲೆಯನ್ನು ಸಂಘಟಿಸಿದೆ ” ಎಂದು ಕೋಲಾರದ ಸಂಸದ ಎಸ್. ಮುನಿಸ್ವಾಮಿ ರಾಜಕೀಯ ಪ್ರೇರಿತ ಆರೋಪ ಮಾಡಿ ನಿಷ್ಪಕ್ಷಪಾತ ತನಿಖೆ ಯನ್ನು ದಿಕ್ಕುತಪ್ಪಿಸುವ ಪ್ರಯತ್ನ ನಡೆಸಿ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ನಾಯಕ ಶ್ರೀಕಾಂತ್ ರವರನ್ನು ಬಂಧಿಸಿದ್ದನ್ನು  ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘಟನೆಯ ಪದಾಧಿಕಾರಿಗಳು ಹೇಳಿದರು.

ಹೋರಾಟವನ್ನು ಉದ್ದೇಶಿಸಿ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಎಸ್ಎಫ್ಐ ಯಾವುದೇ ಪ್ರತಿಭಟನೆಯನ್ನು ಸಂಘಟಿಸಿಲ್ಲರಲಿಲ್ಲ. ಎಸ್ಎಫ್ಐ ಒಂದು ವಿದ್ಯಾರ್ಥಿ ಸಂಘಟನೆಯಾಗಿದ್ದು ಅದು ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಹೋರಾಡುತ್ತಿದೆ ಆದರೆ ಇಲ್ಲಿರುವುದು ಕಾರ್ಮಿಕರು ಮತ್ತು ಕೈಗಾರಿಕೆ ಪ್ರಶ್ನೆಯಾಗಿದ್ದರು ಅನಾವಶ್ಯಕವಾಗಿ ವಿದ್ಯಾರ್ಥಿ ಸಂಘಟನೆಯ ಹೆಸರನ್ನು ಎಳೆದು ತರುವ ಪ್ರಯತ್ನವನ್ನು ಸಂಸದರು ನಡೆಸಿರುವುದು ಅವರ ಬೇಜವಾಬ್ದಾರಿತನ ತೋರುತ್ತದೆ. ಎಸ್ಎಫ್ಐ ನಾಯಕ ಶ್ರೀಕಾಂತ್ ವಿರುದ್ಧ ಇದುವರೆಗೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಇದು ಬಿಜೆಪಿ ಆರೆಸ್ಸೆಸ್ ಅಣತಿಯಂತೆ ಕೋಲಾರದ ಸಂಸದ ಮುನಿಸ್ವಾಮಿ ರವರ ದುರುದ್ದೇಶಪೂರಿತ ಆರೋಪದ ಹಿನ್ನಲೆಯಲ್ಲಿ ಪೋಲಿಸರು ಎಸ್ಎಫ್ಐ ಶ್ರೀಕಾಂತ್ ರವರನ್ನು ವಿಚಾರಣೆಯ ಉದ್ದೇಶದಿಂದ ಬಂಧಿಸಿ ವಿಚಾರಣೆ ನಡೆಸಿ ಯಾವುದೇ ಗುರುತರವಾದ ಪಾತ್ರವಿಲ್ಲ ಎಂದು ನೆನ್ನೆ ರಾತ್ರಿ ಬಿಡುಗಡೆ ಮಾಡಿದ್ದಾರೆ. ಆದರೂ ಸಹ ಬಿಜೆಪಿ ಆರೆಸ್ಸೆಸ್ ಶಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಎಸ್ಎಫ್ಐ ವಿರುದ್ಧ ಅಪಪ್ರಚಾರ ನಡೆಸಿ ಎಸ್ಎಫ್ಐ ಸಂಘಟನೆಗೆ ಕೆಟ್ಟ ಹೆಸರು ತರಲು ಹೊರಟಿರುವುದು ಸರಿಯಲ್ಲ ಎಂದು    ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರ ಕಾನೂನುಗಳನ್ನು ಉಲ್ಲಂಘಿಸಿ ಯುವಜನರನ್ನು ಕಡಿಮೆ ಸಂಬಳ ನೀಡಿ 12 ಗಂಟೆಗಳ ಕಾಲ ದುಡಿಸಿಕೊಂಡು ನಾಲ್ಕೈದು ತಿಂಗಳಿಂದ ಸಂಬಳ ನೀಡದೆ ಸತಾಯಿಸಿ ಶೋಷಿಸುವುದರ ವಿರುದ್ಧ ಧ್ವನಿ ಎತ್ತಬೇಕಾಗಿದ್ದ ಕೋಲಾರದ ಸಂಸದ ಮುನಿಸ್ವಾಮಿ ಬಂಡವಾಳಶಾಹಿ ಕಂಪನಿಗಳ ಕಮೀಷನ್ ಪ್ರಭಾವಕ್ಕೆ ಒಳಗಾಗಿ ಕಾರ್ಮಿಕರ ಹಿತವನ್ನು ಮರೆತಿದ್ದಾರೆ. ಕಾರ್ಮಿಕರ ಶೋಷಣೆಯ ಮೂಲಕ ಕಾರ್ಪೋರೇಟ್ ಹಣಕಾಸು ಬಂಡವಾಳಶಾಹಿಗಳ ಆಸ್ತಿ ಹೆಚ್ಚಳಕ್ಕೆ  ಕೈಜೋಡಿಸಿದ್ದಾರೆ. ಹಾಗೂ ಈ ಘಟನೆ ನಡೆಯಲು ಕಾರಣ ಕಾರ್ಮಿಕರ ಗುತ್ತಿಗೆ ಏಜೆನ್ಸಿ ಮತ್ತು ಕಾರ್ಮಿಕರ ನಡುವಿನ ವೇತನ ಶೋಷಣೆ ಮತ್ತು ಈ ಸಮಸ್ಯೆಯನ್ನು ನಿರ್ವಹಿಸುವಲ್ಲಿನ ಕಾರ್ಮಿಕ ಅಧಿಕಾರಿಗಳ ನಿರ್ಲಕ್ಷ್ಯತೆಯ ಕಾರ್ಮಿಕರ ರೀತಿಯಾಗಿ ದಿಢೀರ್ ಪ್ರತಿಭಟನೆ ನಡೆಸಲು ಕಾರಣ ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಸರ್ಕಾರ ಮತ್ತು ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಯಾಗಿ ಸಂಸದ ಮುನಿಸ್ವಾಮಿ ವಿಫಲರಾಗಿದ್ದಾರೆ. ಆದ್ದರಿಂದ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ವಿದ್ಯಾರ್ಥಿ ಸಂಘಟನೆಗಳ ವಿರುದ್ಧ ರಾಜಕೀಯ ಪ್ರೇರಿತ ಪಕ್ಷಪಾತದ ಆರೋಪಗಳನ್ನು ಹೊರಿಸುತ್ತಿರುವುದು ಅವರ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಈ ಮೂಲಕ ಕಾರ್ಮಿಕರ ನಿಜವಾದ ಸಮಸ್ಯೆಗಳನ್ನು ಮರೆಮಾಚಲು ನಿಷ್ಪಕ್ಷಪಾತ ತನಿಖೆಯ ನಡೆಯುವ ಮುನ್ನವೇ ಸಂಸದ ಮುನಿಸ್ವಾಮಿ ರವರು ತನಿಖೆಯನ್ನು ದಿಕ್ಕು ತಪ್ಪಿಸಲು ಶತಪ್ರಯತ್ನ ಮಾಡಿ ಬೆತ್ತಲಾಗಿದ್ದಾರೆ ಎಂದ ದೂರಿದರು‌

ನಂತರ SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಮಾತನಾಡಿ ಈ ರೀತಿಯ ಕಾನೂನನ್ನು ಕೈಗೆತ್ತಿಕೊಳ್ಳುವ ಅಶಿಸ್ತಿನ ಪ್ರತಿಭಟನೆಗಳನ್ನು ಎಸ್ಎಫ್ಐ ತೀವ್ರವಾಗಿ ವಿರೋಧಿಸುತ್ತದೆ. ಈ ಘಟನೆ ನಡೆಸಿದವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಕಂಪನಿ ಪುನರ್ ಆರಂಭವಾಗಿ ನಡೆಯಬೇಕು. ಹಾಗೂ ಕಾರ್ಮಿಕ ವೇತನ ಸಮಸ್ಯೆ ಬಗೆಹರಿಸಲು ನಿರ್ಲಕ್ಷ್ಯ ತೋರಿರುವ ಕಾರ್ಮಿಕ ಅಧಿಕಾರಿಗಳು, ಕಂಪನಿ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸುತ್ತದೆ.

ಆದರೆ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯ ಹೆಸರನ್ನು ದುರುದ್ದೇಶಪೂರ್ವಕವಾಗಿ ಎಳೆದು ತರುತ್ತಿರುವುದರ ಹಿಂದೆ ಬಿಜೆಪಿ ಆರೆಸ್ಸೆಸ್ ರಾಜಕೀಯ ಸೈದ್ಧಾಂತಿಕ ವಿರೋಧಿ ನಿಲುವೇ ಕಾರಣವಾಗಿದೆ. ಆದ್ದರಿಂದ ಸಂಸದ ಮುನಿಸ್ವಾಮಿ ರವರು ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ವಿರುದ್ಧ ಮಾಡಿರುವ ಆರೋಪವನ್ನು ಈ ಕೂಡಲೇ ಬೇಷರತ್ತಾಗಿ ಹಿಂಪಡೆಯಬೇಕು ಮತ್ತು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಮಿಕರ ಹಿತ ಕಾಪಾಡಬೇಕೆಂದು ಎಸ್ಎಫ್ಐ ಒತ್ತಾಯಿಸಿದರು. ಮನವಿ ಪತ್ರವನ್ನು ಗ್ರಾಮ ಲೆಕ್ಕಿಗ ಸದಾಕಲಿಯವರ ಮೂಲಕ ಸರ್ಕಾರಕ್ಕೆ ಕಳುಹಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ SFI ನಗರ ಘಟಕದ ಅಧ್ಯಕ್ಷ ಮೌನೇಶ ಬುಳ್ಳಾಪುರ, ಕಾರ್ಯದರ್ಶಿ ವೆಂಕಟೇಶ,  DYFI ಅಧ್ಯಕ್ಷರಾದ ಮಹಮ್ಮದ್ ರಫಿ, ಮುಖಂಡರಾದ ಬಸವರಾಜ ಅಮೀನಗಡ, ನಾಗಮೋಹನ್ ಸಿಂಗ್, ರೆಡ್ಡಿ, ಸದ್ದಾಂ, ಮಲ್ಲಿಕಾರ್ಜುನ, ಚನ್ನಬಸವ ಕಲಂಗೇರಾ, ನಾಗರಾಜ,  ಚಂದ್ರಶೇಖರ, ಸುರೇಶ ಸೇರಿ ಅನೇಕರಿದ್ದರು.

Donate Janashakthi Media

Leave a Reply

Your email address will not be published. Required fields are marked *