ವಿಸ್ಟ್ರಾನ್ ಕಾರ್ಖಾನೆಯ ಕಾರ್ಮಿಕ ಶೋಷಣೆಯ ವಿರುದ್ಧ ಡಿ. 19 ರಂದು ಪ್ರತಿಭಟನಾ ಧರಣಿ

ಬೆಂಗಳೂರು : ವಿಸ್ಟ್ರಾನ್ ಕಾರ್ಖಾನೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅಮಾಯಕ ಕಾರ್ಮಿಕರನ್ನು ಬಂಧಿಸಿ ಶೋಷಣೆ ನೀಡುತ್ತಾ ಇರುವ ಜಿಲ್ಲಾಡಳಿತ ವಿರುದ್ದ ಡಿಸೆಂಬರ್ 19 ರಂದು ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಲು ತೀರ್ಮಾನಿಸಲಾಯಿತು

ನಗರದ ನಚಿಕೇತನ ನಿಲಯದಲ್ಲಿ ಗುರುವಾರ  ಪ್ರಗತಿಪರ ಸಂಘಟನೆಗಳ ಮುಖಂಡರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಮುಖಂಡರು ಜಿಲ್ಲೆಯಲ್ಲಿ ಇಂತಹ ಘಟನೆ ನಡೆಯಬಾರದಿತ್ತು ಕಾರ್ಮಿಕರಿಗೆ ಮಾಲೀಕರು ನೀಡಿರುವ ಕಿರುಕುಳ ಸಂಬಳ ಇತ್ಯಾದಿ ಸೌಲಭ್ಯಗಳನ್ನು ಒದಗಿಸದೇ ವಿಫಲವಾಗಿರುವುದರಿಂದ ಇಂತಹ ಘಟನೆ ನಡೆದಿದೆ ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ಅಮಾಯಕ ಕಾರ್ಮಿಕರನ್ನು ಬಿಡುಗಡೆ ಮಾಡಬೇಕು  ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕೊರೊನಾ ಸಂದರ್ಭದಲ್ಲಿ ಕೆಲಸವಿಲ್ಲದೇ ಅನೇಕ ಯುವಜನರು ವಿಧ್ಯಾರ್ಥಿಗಳು ಉದ್ಯೋಗದ ಆಸೆಯಿಂದ ಕಂಪೆನಿಗೆ ಸೇರಿದ್ದಾರೆ ಆದರೆ ಅವರಿಗೆ ಕಾರ್ಮಿಕ ಕಾಯಿದೆಗಳು ಸರಿಯಾಗಿ ಜಾರಿಯಾಗದೇ ಇದ್ದು ಮಾಲೀಕರಿಗೆ ಮತ್ತು ಗುತ್ತಿಗೆದಾರನಿಗೆ ಲಾಭವಾಗಿದೆ ಹೊರತು ಕಾರ್ಮಿಕರಿಗೆ ಅಲ್ಲ ಸಂಬಳ ಕೊಡದ ಗುತ್ತಿಗೆದಾರನ ಪರವಾನಗಿ ರದ್ದು ಮಾಡಬೇಕು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಘಟನೆ ಬಗ್ಗೆ ಸಮಗ್ರ ತನಿಖೆಯಾಗಬೇಕು ಘಟಕಯ ಮೂಲವನ್ನು ಗುರುತಿಸಬೇಕು  ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು ಜಿಲ್ಲೆಯಲ್ಲಿ ವಿಸ್ಟ್ರಾನ್ ಕಾರ್ಖಾನೆಯನ್ನು ಪುನಃ ಪ್ರಾರಂಭಿಸಬೇಕು ಕಾರ್ಮಿಕರನ್ನು ದುಡಿಸಿಕೊಂಡರು ಯಾಕೆ ಸಂಬಳ ನೀಡಿಲ್ಲ ಎಂಬುದು ತನಿಖೆಯಾಗಬೇಕು ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಎಲ್ಲಿಯೂ ಮರುಕಳಿಸದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಒತ್ತಾಯಿಸಿದರು

ಪೂರ್ವಭಾವಿ ಸಭೆಯಲ್ಲಿ ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್ ವರಲಕ್ಷ್ಮೀ, ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಜೆ ಎಂ ಎಸ್ ವಿ.ಗೀತಾ, ಡಿಎಸ್ ಎಸ್ ಮುಖಂಡರಾದ ವಕ್ಕಲೇರಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ಭೀಮಸೇನೆ ಪಂಡಿತ್ ಮುನಿವೆಂಕಟಪ್ಪ, ವಿವಿಧ ಸಂಘಟನೆಗಳ ಮುಖಂಡರಾದ ವಿ.ಅಂಬರೀಶ್, ನಾಗೇಶ್, ವಾಸುದೇವಾರೆಡ್ಡಿ, ಬೀರಾಜು, ವಿಜಯಕುಮಾರಿ, ಅಂಕಿತಾ, ಭೀಮರಾಜ್, ಮುಂತಾದವರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *