ಸೀತಾರಾಮ್ ಯೆಚೂರಿ
ಮುಂದಿನ ಎರಡು ವಾರಗಳು ಎಲ್ಲ ಭಾರತೀಯರಿಗೆ ಮುನ್ನೆಚ್ಚರಿಕೆಯಾಗಿ ಬರುತ್ತಿವೆ.. ಚುನಾವಣೆಗಳ ಕೊನೆಯ ಎರಡು ಹಂತಗಳು ಸಮೀಪಿಸುತ್ತಿರುವಂತೆ ಆರೆಸ್ಸೆಸ್/ಬಿಜೆಪಿ ವ್ಯವಸ್ಥಿತವಾಗಿ ಕೋಮುವಾದಿ ಭಾವೋದ್ವೇಗಗಳನ್ನು ಹುಟ್ಟು ಹಾಕುತ್ತಿವೆ. ಏಕೆಂದರೆ ಲೋಕಸಭೆಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರುಗಳನ್ನು ಕಳಿಸುವ, ಕೋಮುವಾದಿ ಶಕ್ತಿಗಳ ಬಲಿಷ್ಟ ನೆಲೆಗಳು ಎಂದು ಪರಿಗಣಿಸಲ್ಪಟ್ಟಿರುವ ಬಿಹಾರ ಮತ್ತು ಉತ್ತರ ಪ್ರದೇಶದ ಬಹುಪಾಲು ಕ್ಷೇತ್ರಗಳಲ್ಲಿ ಮತದಾನ ನಡೆಯುವುದು ಈ ಎರಡು ಹಂತಗಳಲ್ಲಿಯೇ. ವೋಟ್ ಬ್ಯಾಂಕ್ ರಾಜಕೀಯದ ಅತ್ಯಂತ ಹೊಲಸು ಸ್ವರೂಪವನ್ನು ಅನಾವರಣಗೊಳಿಸಲಾಗುತ್ತಿದೆ.
ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಒಂಭತ್ತು ಹಂತಗಳ ಸುದೀರ್ಘವಾದ 16ನೇ ಸಾರ್ವತ್ರಿಕ ಚುನಾವಣೆಗಳ ಏಳನೇ ಹಂತ ಮುಗಿದಿದೆ. 7ನೇ ಹಂತದಲ್ಲಿ ಪಶ್ಚಿಮ ಬಂಗಾಲದಲ್ಲಿ ಆಳುವ ತೃಣಮೂಲ ಕಾಂಗ್ರೆಸ್ ಮಂದಿ ವ್ಯಾಪಕ ಹಿಂಸಾಚಾರ, ಭಯೋತ್ಪಾದನೆ ಮತ್ತು ಖೋಟಾ ಮತದಾನಗಳಲ್ಲ್ಲಿ ತೊಡಗಿದ್ದು ಕಾಣ ಬಂದಿದೆ. ಈ ಬಗ್ಗೆ ಚುನಾವಣಾ ಆಯೋಗದ ಮುಂದೆ ದೂರುಗಳನ್ನು ದಾಖಲಿಸಲಾಗಿದೆ, ಕೇಂದ್ರೀಯ ಪಡೆಗಳ ಸೂಕ್ತ ಉಸ್ತುವಾರಿ ಮತ್ತು ತಪಾಸಣೆಯಲ್ಲಿ ಮರು ಮತದಾನ ನಡೆಸಬೇಕೆಂದು ಒತ್ತಾಯಿಸಲಾಗಿದೆ. ಮುಕ್ತ ಹಾಗೂ ನ್ಯಾಯಪೂರ್ಣ ಮತದಾನವನ್ನು ತಡೆಯಲು ಮಾಡಿರುವ ಪ್ರಕರಣಗಳ ಪಟ್ಟಿಯನ್ನು ಸಲ್ಲಿಸಲಾಗಿದೆ. ಚುನಾವಣಾ ಆಯೋಗದ ಸೂಕ್ತ ನಿರ್ಣಯಗಳನ್ನು ಈಗ ಕಾಯಬೇಕಾಗಿದೆ.
ಚುನಾವಣೆಗಳ ಕೊನೆಯ ಎರಡು ಹಂತಗಳು ಸಮೀಪಿಸುತ್ತಿರುವಂತೆ ಆರೆಸ್ಸೆಸ್/ಬಿಜೆಪಿ ವ್ಯವಸ್ಥಿತವಾಗಿ ಕೋಮುವಾದಿ ಭಾವೋದ್ವೇಗಗಳನ್ನು ಹುಟ್ಟು ಹಾಕುತ್ತಿವೆ. ಏಕೆಂದರೆ ಬಿಹಾರ ಮತ್ತು ಉತ್ತರ ಪ್ರದೇಶದ ಬಹುಪಾಲು ಕ್ಷೇತ್ರಗಳಲ್ಲಿ ಮತದಾನ ನಡೆಯುವುದು ಈ ಎರಡು ಹಂತಗಳಲ್ಲಿಯೇ. ಲೋಕಸಭೆಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರುಗಳನ್ನು ಕಳಿಸುವುದು ಈ ಪ್ರದೇಶಗಳೇ. ಅಲ್ಲದೆ, ಉತ್ತರ ಪ್ರದೇಶ ಮತ್ತು ಬಿಹಾರದ ಈ ಹಿಂದಿ ಭಾಷಿಕ ನಾಡುಗಳು ಕೋಮುವಾದಿ ಶಕ್ತಿಗಳ ಬಲಿಷ್ಟ ನೆಲೆಗಳು ಎಂದು ಪರಿಗಣಿಸಲ್ಪಟ್ಟಿವೆ, ಇದು ಅವರಿಗೆ ನಿಣರ್ಾಯಕವಾದ ಪ್ರದೇಶ. ವೋಟ್ ಬ್ಯಾಂಕ್ ರಾಜಕೀಯದ ಅತ್ಯಂತ ಹೊಲಸು ಸ್ವರೂಪವಾದ ಬಹುಸಂಖ್ಯಾತ ಹಿಂದೂ ಮತಗಳ ಕ್ರೋಡೀಕರಣದ ಕ್ರಿಯೆಯನ್ನು ಈಗ ಹರಿಯಬಿಡಲಾಗುತ್ತಿದೆ.
‘ಬಾಂಗ್ಲಾದೇಶಿ’- ಮೊದಲ ತುಫಾಕಿ
ಬಿಜೆಪಿಯ ಪ್ರಧಾನ ಮಂತ್ರಿ ಪಟ್ಟಾಕಾಂಕ್ಷಿಯೇ ಸ್ವತಃ ಮೊದಲ ತುಫಾಕಿ ಹಾರಿಸಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ಒಂದು ಚುನಾವಣಾ ರ್ಯಾಲಿಯಲ್ಲಿ ಮೇ 16ರಂದು ಚುನಾವಣಾ ಫಲಿತಾಂಶಗಳು ಬರುತ್ತಿರುವಂತೆಯೇ ಬಾಂಗ್ಲಾದೇಶಿಗಳು ತಮ್ಮ ಗಂಟುಮೂಟೆ ಕಟ್ಟಕೊಂಡು-ಪೆಟ್ಟಿಗೆ ಹೊತ್ತುಕೊಂಡು ಭಾರತದಿಂದ ಹೊರಹೋಗಲು ಸಿದ್ಧರಾಗಬೇಕು ಎಂದು ಎಚ್ಚರಿಸಿದ್ದಾರೆ. ಬಾಂಗ್ಲಾದೇಶಿಗಳು ಎಂದು ಹೇಳಲಾಗುವವರ ಮೇಲೆ ಇಂತಹ ದೂಷಣೆಗಳ ಸುರಿಮಳೆ ಆರೆಸ್ಸೆಸ್ಗೆ ಬಹುಕಾಲದಿಂದ ಕೋಮುವಾದಿ ಭಾವೋದ್ವೇಗಗಳನ್ನು ಬಡಿದೆಬ್ಬಿಸುವ ಪ್ರಿಯ ಬಡಿಗೆ. ಇದಕ್ಕಾಗಿ ಎಲ್ಲ ಬಂಗಾಲಿ ಭಾಷಿಕರ ಮೇಲೆ ಗುರಿ ಇಡಲಾಗುತ್ತದೆ. ಈ ಹಿಂದೆ ಇಂತಹ ಪ್ರಚಾರಗಳಲ್ಲಿ ಅವರು ಪಶ್ಚಿಮ ಬಂಗಾಲದಿಂದ ಬಂದು ಮುಂಬೈ, ದಿಲ್ಲಿಯಂತಹ ಮಹಾನಗರಗಳಲ್ಲಿ ನೆಲೆ ನಿಂತಿರುವ ಬಂಗಾಲಿ ಭಾಷಿಕ ನೈಜ ಭಾರತೀಯ ನಾಗರಿಕರ ಮೇಲೆ ಗುರಿಯಿಟ್ಟಿದ್ದಾರೆ, ಅವರಿಗೆ ಕಿರುಕುಳ ಕೊಟ್ಟಿದ್ದಾರೆ, ಬೆದರಿಸಿದ್ದಾರೆ.
ಆರೆಸ್ಸೆಸ್/ಬಿಜಪಿಯ ಪ್ರಧಾನ ಮಂತ್ರಿ ಪಟ್ಟಾಕಾಂಕ್ಷಿಯ ಈ ಇತ್ತೀಚಿನ ಕರೆ ಹಿಂದುತ್ವ ಗಲಭೆಕೋರರಿಗೆ ಕೋಮುದಾಳಿ ಮಾಡಲು ಮುನ್ನುಗ್ಗುವಂತೆ ಕೊಟ್ಟಿರುವ ಸಂಕೇತವಲ್ಲದೆ ಬೇರೇನೂ ಅಲ್ಲ. ಕಳೆದ ವಾರ ಈ ಅಂಕಣದಲ್ಲಿ ಹೇಳಿರುವಂತೆ, ಆರೆಸ್ಸೆಸ್ ಅಕ್ಟೋಪಸ್ನ ಅಸಂಖ್ಯ ವಿಷಬಾಹುಗಳ ವಿವಿಧ ಮುಖಂಡರುಗಳು ಕೋಮುದ್ವೇಷದ ಜ್ವರ ಏರುವಂತೆ ಮಾಡುತ್ತಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಇದು ಬರುತ್ತಿದೆ. ತೊಗಾಡಿಯ ಭಾಷಣವಂತೂ ಗುಜರಾತ್ ಮಾದರಿಯ ನಿಜವಾದ ಹೂರಣವನ್ನೂ ಕೂಡ ಬಯಲು ಮಾಡಿತು. ಕೆಲವು ಭಾರತೀಯ ಮುಸ್ಲಿಮರು ಗುಜರಾತಿನ ಹಿಂದೂ ವಸತಿ ಪ್ರದೇಶಗಳಲ್ಲಿ ಜಮೀನು ಖರೀದಿಸಿದ್ದಕ್ಕೆ ಹೌಹಾರಿ ಗಲಭೆ ಎಬ್ಬಿಸುವ ಮೂಲಕ ಆತ ಗುಜರಾತ ಇಂದು ಹಿಂದೂಗಳು ಮತ್ತು ಮುಸ್ಲಿಮರು ಪ್ರತ್ಯೇಕ ಕಾಲನಿಗಳಲ್ಲಿ ವಾಸಿಸುವ ರಾಜ್ಯ ಎಂಬುದನ್ನು ದೃಢಫಡಿಸಿದರು. ಭಾರತ ಉಪಖಂಡ ಬ್ರಿಟಿಶರಿಂದಾಗಿ ಧಾಮರ್ಿಕ ಆಧಾರದಲ್ಲಿ ವಿಭಜನೆಗೊಂಡ ಹಲವು ದಶಕಗಳ ನಂತರ ಈಗಿನ ತನ್ನ ಮುಖ್ಯಮಂತ್ರಿಯ ಅಡಿಯಲ್ಲಿ ಗುಜರಾತ ಧಾಮರ್ಿಕ ಆಧಾರದಲ್ಲಿ ವಿಭಜನೆಗೊಂಡಿದೆ. ಇದೇ ಗುಜರಾತ್ ಮುಖ್ಯಮಂತ್ರಿ ಈಗ ದೇಶದ ಪ್ರಧಾನ ಮಂತ್ರಿಯಾಗುವ ಆಕಾಂಕ್ಷೆ ಹೊಂದಿದ್ದಾರೆ.
ಹೀಗೆ, ಮುಂದಿನ ಎರಡು ವಾರಗಳು ಎಲ್ಲ ಭಾರತೀಯರಿಗೆ ಮುನ್ನೆಚ್ಚರಿಕೆಯಾಗಿ ಬರುತ್ತಿವೆ. ಈ ರೀತಿ ಕೋಮು ವಿಷದ ಪ್ರಸಾರ, ಕೋಮು ಧ್ರುವೀಕರಣ ಬಿಜೆಪಿ ಕೆಲವು ಚುನಾವಣಾ ಲಾಭಗಳನ್ನು ತಂದುಕೊಡಬಹುದು. ಆದರೆ ಅದಕ್ಕೆ ದೇಶದ ಐಕ್ಯತೆ, ಸಮಗ್ರತೆ ಮತ್ತು ಕೋಮು ಸೌಹಾರ್ದ ಗಂಭೀರ ಬೆಲೆ ತೆರಬೇಕಾಗುತ್ತದೆ. ಬಿಜೆಪಿ ಎಂದಿನಂತೆ ಇಬ್ಬಂದಿತನದ, ಒಂದು ದ್ವಿಮುಖ ಕಾರ್ಯತಂತ್ರದ ಅಜೆಂಡಾದೊಂದಿಗೆ ಸಾಗಿದೆ ಎಂಬುದೀಗ ಸ್ಪಷ್ಟವಾಗಿದೆ. ಎಲ್ಲಿ ಕೋಮುವಾದಿ ಧ್ರುವೀಕರಣ ಹೆಚ್ಚೇನೂ ಚುನಾವಣಾ ಲಾಭ ಕೊಡದು ಎಂದು ಅದಕ್ಕೆ ಅನಿಸಿದೆಯೋ ಅಲ್ಲೆಲ್ಲ ಅದು ಅಭಿವೃದ್ಧಿ ತನ್ನ ಅಜೆಂಡಾ ಎಂದು ಆಲಾಪನೆ ಹಾಕುತ್ತ ಕೋಮುವಾದಿ ಧ್ರುವೀಕರಣದ ತನ್ನ ನಿಜ ಅಜೆಂಡಾವನ್ನು ಮರೆ ಮಾಚಲು ಪ್ರಯತ್ನಿಸುತ್ತಿದೆ. ದೇಶದ ಇಂತಹ ಬಹುಭಾಗಗಳಲ್ಲಿ ಮತದಾನ ಈ ಏಳು ಹಂತಗಳಲ್ಲಿ ಮುಗಿದಿರುವುದರಿಂದ, ಅದೀಗ ತನ್ನ ಕೋಮುವಾದಿ ಹೆಡೆಗಳನ್ನು ಬಿಚ್ಚುತ್ತಿದೆ.
ದಿಕ್ಕು ತಪ್ಪಿಸುವ ಮಾಧ್ಯಮಗಳು
ಇದರ ಅತ್ಯಂತ ಮುಖ್ಯ ಪರಿಣಾಮವೆಂದರೆ ಮಾಧ್ಯಮಗಳಲ್ಲಿ ಪ್ರಚಾರ ಪಡೆದ ಈ ಚುನಾವಣೆಗಳ ಅಜೆಂಡಾಕ್ಕೂ ಮತದಾರರಿಗೆ ಬಹಳಷ್ಟು ಸಂಬಂಧಿಸಿದ ಅತ್ಯಗತ್ಯ ಪ್ರಶ್ನೆಗಳಿಗೂ ಇರುವ ಕಂದರ ಪೂರ್ಣಗೊಂಡಿದೆ. ಜನತೆ ತಮ್ಮ ಬದುಕಿನ ಗುಣಮಟ್ಟವನ್ನು ಜರ್ಝರಿತಗೊಳಿಸಿರುವ ಹೆಚ್ಚೆಚ್ಚು ಆಥರ್ಿಕ ಹೊರೆಗಳಿಂದ ಪರಿಹಾರಕ್ಕಾಗಿ ಪರಿತಪಿಸುತ್ತಿದ್ದಾರೆ. ಆದರೆ, ಮಾಧ್ಯಮಗಳು ಜನಗಳ ಗಮನವನ್ನು ಉದ್ರೇಕಕಾರಿ ವಿಷಯಗಳತ್ತ, ಉದಾ: ಪ್ರಧಾನ ಮಂತ್ರಿಗಳ ಮಾಜಿ ಸಲಹಾಕಾರ ತಾನು ಅಧಿಕಾರದಲ್ಲಿದ್ದಾಗ ಏನು ಮಾಡಿದೆ ಎಂದು ಹೇಳಹೊರಟಿರುವ ವೃತ್ತಾಂತಗಳು ಇತ್ಯಾದಿಗಳತ್ತ ತಿರುಗಿಸುವ ಶತಪ್ರಯತ್ನ ನಡೆಸುತ್ತಿವೆ. ಅಥವ ಬಿಜೆಪಿ ತನ್ನ ಹಿಂದುತ್ವ ಅಜೆಂಡಾವನ್ನು ಅಷ್ಟಾಗಿ ಎತ್ತುತ್ತಿಲ್ಲ ಎಂದು ನಮ್ಮನ್ನು ನಂಬಿಸುವ ಮಾಧ್ಯಮಗಳ ಪ್ರಯತ್ನವನ್ನೇ ನೋಡಿ- ಅದೂ ಅದರ ಮುಖಂಡರು ‘ದ್ವೇಷ ಕಾರುವ’ ಅಲ್ಪಸಂಖ್ಯಾತ-ವಿರೋಧಿ ಭಾಷಣಗಳನ್ನು ಮಾಡುತ್ತಿರುವಾಗಲೇ ಮಾಧ್ಯಮಗಳು ಈ ಪ್ರಯತ್ನ ಮಾಡುತ್ತಿವೆ. ಈ ಅಜೆಂಡಾ 42 ಪುಟಗಳ ಅದರ ಪ್ರಣಾಳಿಕೆಯ 41ನೇ ಪುಟದಲ್ಲಷ್ಟೇ ಪ್ರಸ್ತಾಪಿತವಾಗಿದೆ ಎಂದು ಹೇಳುತ್ತ ‘ಪರಿಣಿತರು’ ನಾವು ಸಮಾಧಾನ ಪಡುವಂತೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಬಿಜೆಪಿ, ಆರೆಸ್ಸೆಸ್ನ ರಾಜಕೀಯ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಅದೀಗ ತನ್ನ ಕಟ್ಟಾ ಹಿಂದುತ್ವ ಅಜೆಂಡಾವನ್ನು ಹಿನ್ನೆಲೆಗೆ ತಳ್ಳಿದೆ ಎಂದು ನಾವು ನಂಬಬೇಕು ಎಂದು ಈ ಮಾಧ್ಯಮಗಳು ಆಗ್ರಹಿಸುತ್ತಿವೆ!
ನಮ್ಮ ಚಾಣಕ್ಯನಂತಹ ಪಶ್ಚಿಮದ ಮ್ಯಾಕಿಯವೆಲಿ ರಾಜಕುಮಾರನಿಗೆ ತನ್ನ ಆಳ್ವಿಕೆಯನ್ನು ಹೇಗೆ ಕ್ರೋಡೀಕರಿಸಬೇಕು ಎನ್ನುವುದರ ಕುರಿತು ಸಲಹೆ ನೀಡುತ್ತ ಹೀಗೆ ಹೇಳಿದ್ದ: ಮೊದಲಿಗೆ, ನಿನ್ನ ಆಳ್ವಿಕೆ ಎಷ್ಟೊಂದು ಕೆಡುಕು ಮಾಡಲು ಸಾಧ್ಯ ಎನ್ನುವುದನ್ನು ತೋರಿಸಿ ಕೊಡು. ನಂತರ ಅದನ್ನು ಮಾಡಲು ಮುಂದಾಗಬೇಡ. ಆಗ ಜನ ನಿಟ್ಟುಸಿರು ಬಿಟ್ಟು ನಿನ್ನ ಆಳ್ವಿಕೆ ಎಷ್ಟೊಂದು ದಯಾಮಯವಾಗಿದೆ ಎಂದು ಹಾಡಿ ಹೊಗಳುತ್ತಾರೆ. ಈ ಸಲಹೆಯನ್ನು ಆರೆಸ್ಸೆಸ್/ಬಿಜೆಪಿ ಇನ್ನಷ್ಟು ಪರಿಪೂರ್ಣಗೊಳಿಸುತ್ತಿದ್ದಾರೆ.
ಅಪಾಯಕಾರಿ ಸಂಯೋಜನೆ
ಇನ್ನುಳಿದಿರುವ ಎರಡು ಹಂತಗಳಲ್ಲಿ ಆರೆಸ್ಸೆಸ್/ಬಿಜೆಪಿ ಒಂದೆಡೆ, ಹಿಟ್ಲರನ ಫ್ಯಾಸಿಸ್ಟ್ ಮಾದರಿ ಪ್ರಚಾರವನ್ನು ಪರಿಪೂರ್ಣಗೊಳಿಸುತ್ತಿದ್ದರೆ, ಇನ್ನೊಂದೆಡೆಯಲ್ಲಿ, ಮೆಕಿಯವೆಲ್ಲಿಯ ದುಷ್ಟ ಸಲಹೆಗೆ ಮತ್ತೆ ಜೀವ ತುಂಬುತ್ತಿದ್ದಾರೆ ಎಂಬುದು ಸ್ಪಷ್ಟ.
ಇದೀಗ ಒಂದು ನಿದರ್ಿಷ್ಟ ವಿಧಾನದ ಮತ್ತು ಆರೆಸ್ಸೆಸ್ ತತ್ವಸಿದ್ದಾಂತದ-ಅಂದರೆ ಜಾತ್ಯಾತೀತ ಪ್ರಜಾಸತ್ತಾತ್ಮಕ ಭಾರತೀಯ ಗಣತಂತ್ರವನ್ನು ಒಂದು ಉನ್ಮತ್ತ ಫ್ಯಾಸಿಸ್ಟ್ ಮಾದರಿ ‘ಹಿಂದೂರಾಷ್ಟ್ರವಾಗಿ ಪರಿವತರ್ಿಸುವ ತತ್ವಸಿದ್ಧಾಂತದ- ಒಂದು ಅಪಾಯಕಾರಿ ಸಂಯೋಜನೆ. ಇಂತಹ ಒಂದು ಅಜೆಂಡಾ ಯಶಸ್ವಿಯಾಗಲು ಬಿಟ್ಟರೆ, ನಮಗೀಗ ಗೊತ್ತಿರುವಂತಹ ಭಾರತದ ಅಸ್ತಿತ್ವವೇ ಉಳಿಯುವುದಿಲ್ಲ. ಇದಕ್ಕೆ ಹಲವಾರು ಪ್ರಾಣಗಳು ಬಲಿಯಾಗುತ್ತವೆ, ಪರಸ್ಪರ ಬೈದಾಡುವ ಕೋಮು ದ್ವೇಷ ಮತ್ತು ಅದರೊಂದಿಗೇ ಬರುವ ಇತರ ಎಲ್ಲ ಅನಿಷ್ಟಗಳನ್ನು ಕಾಣಬೇಕಾಗುತ್ತದೆ. ಇದು ಭಾರತದ ಸಮ್ಮಿಶ್ರ ನಾಗರಿಕತೆಯ ಮುನ್ನಡೆಯನ್ನು ತಡೆದು ನಿಲ್ಲಿಸುತ್ತದೆ, ವಿರೂಪಗೊಳಿಸುತ್ತದೆ.
ಆದ್ದರಿಂದಲೇ ಈ ಚುನಾವಣೆಗಳು ಒಂದು ಪಯರ್ಾಯ ಸರಕಾರ, ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಪಯರ್ಾಯವಾದ ಧೋರಣೆಗಳನ್ನು ಅನುಸರಿಸುವ ಸರಕಾರ ಮೂಡಿಬರುವಂತೆ ಮಾಡಲು ಭಾರತೀಯ ಜನತೆ ಜೊತೆಗೂಡುವುದು ಇನ್ನಷ್ಟು ಅಗತ್ಯವಾಗಿದೆ. ಇಂತಹ ಸರಕಾರ ಮಾತ್ರವೇ, ಈ ಹಿಂದೆ ಈ ಅಂಕಣದಲ್ಲಿ ಚಚರ್ಿಸಿರುವಂತೆ, ಜನತೆಗೆ ತಕ್ಷಣದ ಪರಿಹಾರ ಒದಗಿಸುವುದರೊಂದಿಗೇ, ಭವಿಷ್ಯದಲ್ಲಿ ಒಂದು ಉತ್ತಮ ಭಾರತವನ್ನು ಕಟ್ಟಲು ಸಾಧ್ಯ.