ವಿದ್ಯುತ್ ದರ ಏರಿಕೆ ಖಂಡಿಸಿ ಮೆಸ್ಕಾಂ ಕಛೇರಿ ಎದುರು ಡಿವೈಎಫ್ಐ ಪ್ರತಿಭಟನೆ

ಬೈಂದೂರು: ರಾಜ್ಯದ ಬಿಜೆಪಿ ಸರಕಾರ ನಿರಂತರವಾಗಿ ವಿದ್ಯುತ್ ದರ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ವತಿಯಿಂದ ಮೆಸ್ಕಾಂ ಬೈಂದೂರು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಡಿವೈಎಫ್ಐ ತಾಲೂಕು ಅಧ್ಯಕ್ಷ ವಿಜಯ ಕಿರಿಮಂಜೇಶ್ವರ ಪ್ರತಿಭಟನಾಕಾರರನ್ನುದ್ದೆಶಿಸಿ ಮಾತನಾಡಿ, ಸರಕಾರದ ಸಂಸ್ಥೆಗಳಿಂದ ವಿದ್ಯುತ್‌ ಶುಲ್ಕಗಳು ಬಾಕಿ ಬರಬೇಕಾಗಿರುವುದನ್ನು ಈ ಕೂಡಲೇ ವಸೂಲಿಗೆ ಕ್ರಮವಹಿಸಬೇಕು, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಗೃಹ ಬಳಕೆ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಡಿವೈಎಫ್ಐ ಮುಖಂಡ ಹರೀಶ್ ಬೈಂದೂರು, ಹರೀಶ್ ಪವಾಸ್ಕರ್ ಬೈಂದೂರು, ರಾಮ ಖಂಭದಕೋಣೆ, ಮಹಿಳಾ ಉಪ ಸಮಿತಿಯ ನಾಗರತ್ನ ಪಡುವರಿ, ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಗಣಪತಿ ಪೂಜಾರಿ ಅಮಾಸ್ಯೆಬೈಲ್, ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಿಐಟಿಯು ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಇದ್ದರು.

ಬೇಡಿಕೆಗಳ ಮನವಿ ಪತ್ರವನ್ನು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್  ಮೂಲಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರಿಗೆ ಸಲ್ಲಿಸಿದರು.

ವರದಿ: ವೆಂಕಟೇಶ್ ಕೋಣಿ

Donate Janashakthi Media

Leave a Reply

Your email address will not be published. Required fields are marked *