ವಿದ್ಯಾಥರ್ಿ ಮುಖಂಡ ಸುದಿಪ್ತೋ ಗುಪ್ತಾರ ಕೊಲೆ ಖಂಡಿಸಿ ಪ್ರತಿಭಟನೆ , ಮಮತಾ ಬ್ಯಾನಜರ್ಿ ಪ್ರತಿಕೃತಿ ದಹನ.

ಸಂಪುಟ – 07, ಸಂಚಿಕೆ 15, ಎಪ್ರೀಲ್ 14, 2013

11

02.04.2013 ರಂದು ಕೊಲ್ಕತ್ತಾದಲ್ಲಿ ಎಸ್.ಎಫ್.ಐ ಸೇರಿದಂತೆ ನಾಲ್ಕು ಎಡ ವಿದ್ಯಾಥರ್ಿ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾಥರ್ಿಗಳು ಪ್ರತಿಬಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನಾ ನಿರತರ ಮೇಲೆ ಪಶ್ಚಿಮ ಬಂಗಾಳ ಪೋಲೀಸರು ಕ್ರೂರವಾಗಿ ಲಾಠಿಚಾಜರ್್ ನಡೆಸಿ ಎಸ್.ಎಫ್.ಐ ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಸುದಿಪ್ತೋ ಗುಪ್ತಾ ರವರನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿ ಎಸ್.ಎಫ್.ಐ ಹಾಗೂ ಡಿ.ವೈ.ಎಫ್.ಐ ಸಂಘಟನೆಗಳು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಮತಾ ಬ್ಯಾನಜರ್ಿಯವರ ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಎಸ್.ಎಫ್.ಐ ರಾಜ್ಯ ಕಾರ್ಯದಶರ್ಿ ಹುಳ್ಳಿ ಉಮೇಶ್, ಡಿವೈಎಫ್ಐ ರಾಜ್ಯ ಕಾರ್ಯದಶರ್ಿ ರಾಜಶೇಖರ್ ಮೂತರ್ಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದಶರ್ಿ ಲಕ್ಷ್ಮಿ.ಕೆ.ಎಸ್ ಮಾತನಾಡಿ ಪಶ್ಚಿಮ ಬಂಗಾಳದ ಮಮತಾ ಬ್ಯಾನಜರ್ಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸಕರ್ಾರದ ಪ್ರಜಾಪ್ರಭುತ್ವ ವಿರೋಧಿ ಕ್ರಮ ವನ್ನು ಖಂಡಿಸಿ ಪಶ್ಚಿಮ ಬಂಗಾಳದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಥರ್ಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿ ಅಮಾನéುಷವಾಗಿ ಲಾಠಿಚಾಜರ್್ ನಡೆಸಲಾಗಿದೆ. ಪ.ಬಂಗಾಳದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿವರ್ಷ ನಡೆಯುತ್ತಿದ್ದ ವಿದ್ಯಾಥರ್ಿ ಸಂಘಗಳ ಚುನಾವಣೆಗಳನ್ನು ಎರಡು ವರ್ಷಗಳಿಗೊಮ್ಮೆ ನಡೆಸುವಂತೆ ಸಕರ್ಾರ ತೀಮರ್ಾನಿಸಿ ವಿದ್ಯಾಥರ್ಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡಲು ಹೊರಟ್ಟಿತ್ತು. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಟಿಎಂಸಿ ಗೂಂಡಾಗಳು ಶಿಕ್ಷಣ ಸಂಸ್ಥೆಗಳಲ್ಲಿ ಅರೆ ಫ್ಯಾಸಿಸ್ಟ ಧಾಳಿಗಳಮೂಲಕ ವಿದ್ಯಾಥರ್ಿಗಳ ಮೇಲೆ ಹಲ್ಲೆ ನೆಡೆಸಿ ಪ್ರಜಾಪ್ರಭುತ್ವ ವಿರೋಧಿಯಾಗಿ ವತರ್ಿಸುತ್ತಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನಜರ್ಿ ಕೂಡ 1970 ರ ದಶಕದಲ್ಲಿ ಮಾಡಿದ ರೀತಿಯಲ್ಲಿ ಹೋರಾಟಗಾರರ ಮೇಲೆ ಅರೆ ಫ್ಯಾಸಿಸ್ಟ್ ಧಾಳಿಗಳನ್ನು ನಡೆಸುತ್ತಿದ್ದಾರೆ. ಈ ವಿದ್ಯಾಥರ್ಿಗಳ ಕೊಲೆಯನ್ನು ಅನಿರೀಕ್ಷಿತ ಸಾವು ಎಂದು ಬಿಂಬಿಸುತ್ತಾ ಸಕರ್ಾರದ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ಹೊರಟಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಲಾಗುತ್ತಿದೆ. ಪ.ಬಂಗಾಳದಲ್ಲಿ ಎಡ ರಂಗ ಸಕರ್ಾರ ವಿದ್ದಾಗ ವಿದ್ಯಾಥರ್ಿಗಳಿಗೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಖಾತ್ರಿಗೊಳಿಸಲಾಗಿತ್ತು. ಆದರೆ ತೃಣಮೂಲ ಕಾಂಗ್ರೆಸ್ ಸಕರ್ಾರ ಅಂತಹ ಹಕ್ಕುಗಳನ್ನು ಮೊಟಕುಗೊಳಿಸಲು ಹೊರಟಿದೆ. ಇದರ ವಿರುದ್ಧ ಪಶ್ಚಿಮ ಬಂಗಾಳ ಹಾಗೂ ಇಡೀ ದೇಶದಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದರು.
0

Donate Janashakthi Media

Leave a Reply

Your email address will not be published. Required fields are marked *