ವಿಟ್ಲ ಪೇಟೆ ಪ್ರವೇಶಿಸಲು ಕೋವಿಡ್ ನೆಗೆಟಿವ್ ರಿಪೋರ್ಟ್ ‌ಕಡ್ಡಾಯ : ಪಟ್ಟಣ ಪಂಚಾಯತ್ ಆದೇಶಕ್ಕೆ ಡಿವೈಎಫ್‌ಐ ವಿರೋಧ

ವಿಟ್ಲ: ವಿಟ್ಲ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಟಾಸ್ಕ್ ಪೋರ್ಸ್ ಸಭೆಯಲ್ಲಿ ನಾಳೆಯಿಂದ ವಿಟ್ಲ ಪೇಟೆಗೆ ಪ್ರವೇಶಿಸುವವರು ಕೋವಿಡ್ ನೆಗೆಟಿವ್ ರಿಪೋರ್ಟ್ ತೋರಿಸಬೇಕು ಎಂದು ಆದೇಶಿಸಿರುವುದಕ್ಕೆ ಡಿವೈಎಫ್‌ಐ ಆಕ್ಷೇಪ ವ್ಯಕ್ತಪಡಿಸಿದೆ.

ಪಟ್ಟಣ ಪಂಚಾಯತ್ ನ ಈ ಆದೇಶದಿಂದ ಜನರಿಗೆ ತೊಂದರೆ ಆಗಲಿದ್ದು , ತೀರಾ ಅಗತ್ಯ ಸಂಧರ್ಭದಲ್ಲಿ ವಿಟ್ಲ ಪೇಟೆಗೆ ಸುತ್ತಮುತ್ತಲಿನ ಜನರಿಗೆ ಅಗತ್ಯ ಕ್ಕಾಗಿ ಆಸ್ಪತ್ರೆಗೆ,ಮೆಡಿಕಲ್ ಗಳಿಗೆ, ಬ್ಯಾಂಕ್ ಗಳಿಗೆ,ಅಗತ್ಯ ಸಾಮಾಗ್ರಿಗಳ ಖರೀದಿ ಗಾಗಿ ಬರುವುದು ಅನಿವಾರ್ಯ ವಾಗಿದೆ, ಅಲ್ಲದೆ ವಿವಿಧ ಕೆಲಸಗಳಲಿಗೆ ದಿನ ನಿತ್ಯ ದೂರದ  ಊರುಗಳಿಗೆ ತೆರಳುವವರು, ಕಾರ್ಮಿಕರು ಕೆಲಸಕ್ಕೆ ತೆರಳಲು ಕೂಡಾ ಪೇಟೆಯನ್ನು ಹಾದು ಹೋಗುವ ಅನಿವಾರ್ಯತೆ ಇದೆ.

ನಿರ್ಮಾಣ ಕಾಮಗಾರಿಗಳಿಗೆ ಕೂಡಾ ಆರಂಭವಾಗಿದ್ದು ಇದಕ್ಕೆ ಬೇಕಾದ ಸಾಮಾಗ್ರಿಗಳ ಖರೀದಿಗೆ ಕೂಡಾ ವಿಟ್ಲ ಆಸುಪಾಸಿನವರಿಗೆ ಪೇಟೆಯನ್ನು ಅನುಸರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪಂಚಾಯತ್ ನ ಆದೇಶವು ಜನರ ಪಾಲಿಗೆ ಕಷ್ಟಕರವಾಗಿದೆ. ಅಲ್ಲದೆ ಜನರ ಜೀವನದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಈ ರೀತಿಯ ಆದೇಶವನ್ನು ಮಾಡಿರುವುದು ಪಟ್ಟಣ ಪಂಚಾಯತ್ ನ ಜನ ವಿರೋಧಿ ನಿಲುವಿಗೆ ಸ್ಪಷ್ಟ ನಿದರ್ಶನವಾಗಿದೆ.

ಈ ಬಗ್ಗೆ ಪಂಚಾಯತ್ ಆದೇಶವನ್ನು ಪುನರ್ ಪರಿಶೀಲಿಸಿ ಅಗತ್ಯ ಸೇವೆಗೆ ಜನರಿಗೆ ಪೇಟೆಗೆ ಬರಲು ಕೋವಿಡ್ ಟೆಸ್ಟ್ ನಿಂದ ವಿನಾಯತಿ ನೀಡಬೇಕು ಎಂದು ಡಿ.ವೈ.ಎಫ್.ಐ‌ ವಿಟ್ಲ ವಲಯ ಸಮಿತಿ ಮುಖಂಡ  ತುಳಸೀದಾಸ್ ವಿಟ್ಲ  ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *