ವಿಜಯನಗರ | ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಲಪನಗುಡಿಯಲ್ಲಿ ನೃತ್ಯ, ನಾಟಕೋತ್ಸವ

ವಿಜಯನಗರ : 2024–25ನೇ ಸಾಲಿನ ಗಿರಿಜನ ಉಪಯೋಜನೆಯಡಿಯಲ್ಲಿ ತಾಲ್ಲೂಕಿನ ಮಲಪನಗುಡಿ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆ, ಹೊಸಪೇಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಸಂಗೀತ, ನೃತ್ಯ, ನಾಟಕೋತ್ಸವ ನಡೆಯಿತು.

ಬದುಕಿನಲ್ಲಿ ಮುಳುಗಿ ಹೋದ ಜೀವಕೆ ಹಾಸ್ಯದ ಮೂಲಕ ಮನಸ್ಸಿಗೆ ಚೇತೋಹಾರಿ ಅನುಭವ ನೀಡುತ್ತವೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಮುಖಂಡ ಎಲ್.ಸಿದ್ಧನಗೌಡ್ರು ಹೇಳಿದರು.

ಇದನ್ನೂ ಓದಿ : ಶಾಂಭವಿ ಸೇತುವೆ | ಪರ್ಯಾಯ ವ್ಯವಸ್ಥೆ ಮಾಡಿಲ್ಲ- ಮುನೀರ್ ಕಾಟಿಪಳ್ಳ ಆರೋಪ

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್.ಎಸ್. ಶಿವಗಂಗ, ಹಿಂದುಳಿದ ವರ್ಗಗಳ ಒಕ್ಕೂಟದ ರವಿಶಂಕರ ದೇವರಮನೆ ಇದ್ದರು. ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆಯ ಅಧ್ಯಕ್ಷೆ ವಿ.ಅನುರಾಧ ಮಾತನಾಡಿದರು.

ಹೊಸಪೇಟೆಯ ಕೆ.ಚೈತ್ರ ಅವರಿಂದ ಸುಗಮ ಸಂಗೀತ, ಅಂಜಲಿ ನಾಟ್ಯ ಕಲಾ ಕೇಂದ್ರದವರಿಂದ ಭರತ ನಾಟ್ಯ, ಅಂಕ್ಲೇಶ ಕಲಾ ತಂಡದಿಂದ ರಂಗ ಗೀತೆಗಳು, ಬಳ್ಳಾರಿಯ ವೀರೇಶ ದಳವಾಯಿ ಕಲಾ ತಂಡದಿಂದ ಜನಪದ ಗೀತೆ, ಹಂಪಿಯ ರಂಜು ಆರ್ಟ್ಸ್‌ ಮಕ್ಕಳಿಂದ ಯೋಗ ನೃತ್ಯ ನಡೆದೆವು. ನಂತರ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆಯವರಿಂದ ‘ಸಂಸಾರದಲ್ಲಿ ಸ ನಿ ದ ಪ’ ನಾಟಕ ಪ್ರದರ್ಶನವಾಯಿತು. ಚಳಯಲ್ಲೂ ಸಹ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು.

ಇದನ್ನೂ ನೋಡಿ : ಧರ್ಮಸ್ಥಳ| ಕೊಂದವರು ಯಾರು?ಏಕವ್ಯಕ್ತಿ ಪ್ರದರ್ಶನ Janashakthi Media

 

Donate Janashakthi Media

Leave a Reply

Your email address will not be published. Required fields are marked *