- ನವೆಂಬರ್ ತಿಂಗಳನ್ನು ವಿಜೆಲಿಯನ್ಸ್ ದಿನಾಚರಣೆಯನ್ನಾಗಿ ಆಚರಣೆ
ಕೋಲಾರ : ಲೋಕಾಯುಕ್ತ ಕಾಯ್ದೆಗಳ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ನವೆಂಬರ್ ತಿಂಗಳದ ಈ ವಾರವನ್ನು ವಿಜೆಲಿಯನ್ಸ್ ದಿನಾಚರಣೆಯನ್ನಾಗಿ ಎಲ್ಲಾ ರಾಜ್ಯಗಳಲ್ಲೂ ಅಚರಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಲೋಕಾಯುಕ್ತ ಅಧೀಕ್ಷಕ ಸಿ.ಎನ್. ಜನಾರ್ಧನ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋಲಾರ ತಾಲ್ಲೂಕಿನ ಪಿ.ಡಿ.ಓ,ಗಳಿಗೆ ಲೋಕಾಯುಕ್ತ ಪ್ರತಿಜ್ಞಾ ವಿಧಿ ಭೋಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಯಾವ ರೀತಿ ವರ್ತಿಸಬೇಕೆಂದು ಲೋಕಾಯುಕ್ತ ಕಾಯ್ದೆಯಲ್ಲಿ ಸೂಚಿಸಿರುವುದನ್ನು ಅಧಿಕಾರಿಗಳು ತಿಳಿದುಕೊಳ್ಳಬೇಕು ಅದರಂತೆಯೇ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಲೋಕಾಯುಕ್ತ ಸಂಸ್ಥೆಯ ಉಪಾಧೀಕ್ಷಕ ಕೃಷ್ಣಮೂರ್ತಿ ಮಾತನಾಡಿ ಜಾಗೃತ ಅರಿವು ಸಪ್ತಾಹದ ಮುಖ್ಯ ಉದ್ದೇಶ ಭ್ರಷ್ಟಚಾರ ವಿರೋಧಿ ದಿನಾಚರಣೆಯಾಗಿ ಎಲ್ಲಾ ಎ.ಸಿ.ಬಿ. ಕಚೇರಿಗಳ ಮೂಲಕ ಎಲ್ಲಾ ಇಲಾಖೆಗಳಲ್ಲಿ ಲಂಚ ಪಡೆಯುವುದು ಮತ್ತು ಕೊಡುವುದು ಎರಡು ಸಹ ಕಾನೂನಿನ್ವಯ ಅಪರಾಧವಾಗುತ್ತದೆ ಎಂಬುದನ್ನು ತಿಳಿಸಿಕೊಡುವುದು ಎಂದರು.
ಸರಕಾರದ ಯಾವುದೇ ಕಚೇರಿಗಳಾಗಲಿ ಅಗಲಿ ಗ್ರಾಮ ಪಂಚಾಯಿತಿಯಾಗಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಿ ಕೊಡಬೇಕು ವಿನಾಕಾರಣ ಕಚೇರಿಗೆ ತಿಂಗಳಾನುಗಟ್ಟಲೇ ಅಲೆದಾಡಿಸುವುದು ಲಂಚಕ್ಕಾಗಿ ಬೇಡಿಕೆ ಒಡ್ಡುವುದು ಕರ್ತವ್ಯವನ್ನು ನಿರ್ಲಕ್ಷಿಸುವುದು, ಕಾನೂನುಗಳನ್ನು ಉಲ್ಲಂಘಿಸುವುದು, ಅಗೌರವದಿಂದ ಕಾಣುವುದು ಉದ್ಟಟತನದಿಂತ ವರ್ತಿಸುವುದು ಇವೆಲ್ಲಾವು ಸಹ ಕಾನೂನಿನ ದೃಷ್ಠಿಯಲ್ಲಿ ಅಪರಾಧ ಎಂದರು.
ಕರ್ನಾಟಕದ ಜನಸಂಖ್ಯೆ 7 ಕೋಟಿ ದಾಟಿದೆ. ಸರ್ಕಾರಿ ನೌಕರರ ಸಂಖ್ಯೆ 4.5 ಲಕ್ಷವಿದೆ ಒತ್ತಡದ ಕೆಲಸದ ನಡುವೇ ಪ್ರಮಾಣಿಕವಾಗಿ ಕರ್ತವ್ಯ ನಿಷ್ಟೆಗೆ ಬದ್ದರಾಗಿರಬೇಕು. ನಾವು ಒಳ್ಳೆಯ ಕೆಲಸ ಮಾಡಿದರೆ ಭಗವಂತ ನಮಗೆ ಒಳ್ಳೆದನ್ನೆ ಮಾಡುತ್ತಾನೆ ಎಂಬ ನಂಬಿಕೆಯಲ್ಲಿ ಕರ್ತವ್ಯವನ್ನು ನಿರ್ವಹಿಸಬೇಕು 1984ರಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ಲಂಚಾದ ಹಾವಳಿಯನ್ನು ನಿಯಂತ್ರಿಸಲು ಲೋಕಾಯುಕ್ತ ಇಲಾಖೆಯನ್ನು ಸ್ಥಾಪಿಸುವ ಮೂಲಕ ಹಲವು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಜಿಲ್ಲೆಯಲ್ಲಿ 156 ಪಂಚಾಯಿತಿಗಳಿದ್ದು ಪ್ರತಿ ಮಾಹೆ 80-90 ಮಂದಿ ಪಿಡಿಓಗಳು ಜಿಲ್ಲಾ,ತಾಲ್ಲೂಕು ಪಂಚಾಯಿತಿ ಕಚೇರಿಗಳಿಗೆ ಬಂದು ಹೋಗುತ್ತಿರುತ್ತಾರೆ. ಅವರ ಕೆಲಸಗಳನ್ನು ಮುಖ್ಯ ಕಚೇರಿಗಳಲ್ಲಿ ತ್ವರಿತವಾಗಿ ಮಾಡಿಕೊಟ್ಟರೆ ಅವರು ಬಂದು ಹೋದ ಅವಧಿಯಲ್ಲಿ ಹತ್ತಾರು ಜನರ ಕೆಲಸಗಳನ್ನು ನಿರ್ವಹಿಸಬಹುದಾಗಿದೆ.
ಯಾರೇ ಆಗಲಿ ದೂರು ನೀಡಿದ ಕೊಡಲೇ ಕ್ರಮ ಕೈಗೊಳ್ಳಲಾಗುವುದಿಲ್ಲ ಅವರಿಗೂ ಒಂದು ತಿಂಗಳು ಕಾಲವಕಾಶ ನೀಡಿ ಸೂಚನೆ ನೀಡಲಾಗುವುದು. ಅದ್ಯಾಗೂ ಮಾಡಿ ಕೊಡದಿದ್ದರೆ ನೋಟಿಸ್ ಜಾರಿ ಮಾಡಲಾಗುವುದು, ನೋಟಿಸ್‍ಗೊ ಮಾನ್ಯತೆ ನೀಡದಿದ್ದಲ್ಲಿ ಮಾತ್ರ ಕಾನೂನಿನ್ವಯ ಕ್ರಮ ಜರುಗಿಸಲಾಗುವುದು ಬಡ್ತಿಗಳಿಗೆ ಕಡಿವಾಣ ಹಾಕಲಾಗುವುದು ಸೇವಾ ದಾಖಲಾತಿಗಳಲ್ಲಿ ದೋಷರೊಪಗಳನ್ನು ನಮೋಧಿಸುವುದರಿಂದ ಅವರಿಗೆ ಮುಂದಿನ ದಿನಗಳಲ್ಲಿ ಭಾರಿ ತೊಂದರೆಗಳಾಗುವುದು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಆರ್. ರವಿಕುಮಾರ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ಬಾಬು ಸೇರಿದಂತೆ ಅಧಿಕಾರಿಗಳು ಇದ್ದರು.