ನವದೆಹಲಿ : ಇಂದು ಲೋಕಸಭೆಯಲ್ಲಿ ಡಿಎಂಕೆ ಸಂಸದರು ಟೀ ಶರ್ಟ್ ಪ್ರತಿಭಟನೆ ನಡೆಸಿದರು.
ಡೀಲಿಮಿಟೇಷನ್ ವಿರುದ್ಧ ಪ್ರತಿಭಟನಾ ಸಂದೇಶ ಒಳಗೊಂಡ ಟಿ-ಶರ್ಟ್‌ಗಳನ್ನು ಧರಿಸಿ ಡಿಎಂಕೆ ಸಂಸದರು ಸದನಕ್ಕೆ ಬಂದ ಹಿನ್ನಲೆ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಇದನ್ನು ಓದಿ :-ವಸತಿ ನಿಲಯ ವಿದ್ಯಾರ್ಥಿನಿಯರಿಗೆ ಮೂಲಭೂತ ಸೌಕರ್ಯಗಳಿಂದ ವಂಚನೆ – ವಿದ್ಯಾರ್ಥಿನಿಯರ ಪ್ರತಿಭಟನೆ
ಡಿಎಂಕೆ ಸಂಸದರು ‘ನ್ಯಾಯಯುತ ಡೀಲಿಮಿಟೇಷನ್’, ‘ತಮಿಳುನಾಡು ಹೋರಾಡುತ್ತದೆ, ತಮಿಳುನಾಡು ಗೆಲ್ಲುತ್ತದೆ’ ಎಂಬ ಘೋಷಣೆಗಳು ಬರೆದ ಟಿ-ಶರ್ಟ್‌ಗಳನ್ನು ಧರಿಸಿ ಸದನಕ್ಕೆ ಆಗಮಿಸಿದರು.
ಇದನ್ನು ಓದಿ :-ಮೇ 20ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ – ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡಿ- ಐಎಲ್‍ಸಿ ಆಯೋಜಿಸಿ
ಪ್ರತಿಭಟನೆಯ ಭಾಗವಾಗಿ, ಡಿಎಂಕೆ ಸಂಸದರು ಕ್ಷೇತ್ರ ಪುನರ್ ವಿಂಗಡನೆ ವಿಷಯವನ್ನು ಲೋಕಸಭೆಯಲ್ಲಿ ಚರ್ಚೆಗೆ ಒತ್ತಾಯಿಸಿದರು. ಆದರೆ, ಜನಗಣತಿ ಇನ್ನೂ ನಡೆದಿಲ್ಲದ ಕಾರಣ ಈ ವಿಷಯ ಸರ್ಕಾರದ ವ್ಯಾಪ್ತಿಯಲ್ಲಿಲ್ಲ ಇಲ್ಲ ಎಂದು ಸ್ಪೀಕರ್ ತಿರಸ್ಕರಿಸಿದರು. ಈ ಘಟನೆಯಿಂದ ಸದನದಲ್ಲಿ ಗೊಂದಲ ಉಂಟಾಗಿ, ಮೊದಲು ಮಧ್ಯಾಹ್ನ 12 ಗಂಟೆವರೆಗೆ ಮತ್ತು ನಂತರ 2 ಗಂಟೆವರೆಗೆ ಸದನವನ್ನು ಮೊಟಕುಗೊಳಿಸಲಾಯಿತು.