ಬೆಂಗಳೂರು : ಕೋರಾನಾ ಮತ್ತು ಲಾಕ್ ಡೌನ್ ನಿಂದಾಗಿ ಕಳೆದ 6-7 ತಿಂಗಳ ಬಳಿಕ ಥಿಯೇಟರ್ ಗಳು ಅಕ್ಟೋಬರ್ 15 ಗುರುವಾರದಂದು ಒಪನ್ ಆಗಿವೆ. ಲಾಕ್ ಡೌನ್ ಬಳಿಕ ಥಿಯೇಟರ್ ಗಳು ಒಪನ್ ಆಗುತ್ತಿದ್ದರೂ ಕೆಲವು ಷರತ್ತುಗಳನ್ನು ಪ್ರೇಕ್ಷಕರು ಪಾಲಿಸಬೇಕು.
ಇಷ್ಟು ದಿನಗಳ ಕಾಲ ಕಾದು ಕುಳಿತಿದ್ದ ಸಿನಿಪ್ರಿಯರು ಇನ್ನು ಥಿಯೇಟರ್ ಗಳಿಗೆ ಹೋಗಿ ಸಿನಿಮಾಗಳನ್ನು ವಿಕ್ಷಿಸಬಹುದಾದರೂ ಕೆಲವು ಷರತ್ತುಗಳು ಅನ್ವಯವಾಗುತ್ತವೆ. ಶೇ 50ರಷ್ಟು ವಿಕ್ಷಕರಿಗೆ ಮಾತ್ರ ಒಂದು ಶೋ ಅವಕಾಶವಿದೆ. ಥಿಯೇಟರ್ ಗೆ ಬಂದ್ರೆ ಆರೋಗ್ಯ ಸೇತು ಆ್ಯಪ್ ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಳ್ಳಬೇಕು. ಕೊರೊನಾ ಲಕ್ಷಣಗಳು ಇಲ್ಲದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿದೆ. ತಮ್ಮ ಹೆಸರು ಮತ್ತು ನಂಬರ್ ನಮೋದಿಸಬೇಕಾಗಿದೆ. ಪ್ಯಾಕ್ ಮಾಡಿದ ತಿಂಡಿ, ನೀರು ಬಳಕೆ ಮಾಡಲು ಮನವಿ ಮಾಡಿದೆ. ಥಿಯೇಟರ್ ನ ಸಿಬ್ಬಂದಿಗಳು ಕೂಡ ಮಾಸ್ಕ್, ಗ್ಲೌಸ್, ಶೂ, ಸ್ಯಾನಿಟೈಸರ್ ಬಳಕೆ ಮಾಡಬೇಕು. ಆನ್ ಲೈನ್ ಟಿಕೇಟ್ ಬುಕ್ ಮಾಡಿಕೊಳ್ಳಬೇಕು. ಇಲ್ಲವಾದರೆ 6 ಅಡಿಗಳ ಅಂತರ ಕಾಯ್ದುಕೊಂಡು ಟಿಕೇಟ್ ಪಡೆಯಬಹುದು.
ಲಾಕ್ ಡೌನ್ ಗೂ ಮೊದಲೇ ತೆರೆ ಕಂಡಿದ್ದ ಹಲವು ಸಿನಿಮಾಗಳು ರೀ ರೀಲಿಸ್ ಗೆ ಸಿದ್ದವಾಗಿವೆ. ಸ್ಯಾಂಡಲ್ ವುಡ್ ಯುವ ಸಾಮ್ರಾಟ್ ಚಿರಂಜಿವಿ ಸರ್ಜಾ ಅಭಿನಯದ ‘ಶಿವಾರ್ಜುನ’, ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ ‘ಕಾಣದಂತೆ ಮಾಯವಾದನು’ ಪುನಿತ್ ರಾಜಕುಮಾರ್ ನಿರ್ಮಾಣದ ಮಾಯಾಬಜಾರ್ 2016 ಸೇರಿದಂತೆ ಹಲವು ಸಿನಿಮಾಗಳು ಮರು ಬಿಡುಗಡೆಯಾಗುತ್ತಿವೆ. ನಾಳೆ ಚಿರಂಜಿವಿ ಸರ್ಜಾ ರವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ರೀಲಿಸ್ ಆದ ಶಿವಾರ್ಜುನ ಸಿನಿಮಾವನ್ನು ಸರ್ಜಾರವರ ಕುಟುಂಬ ಆಗಮಿಸಿ ವಿಕ್ಷಣೆ ಮಾಡಿ ಚಿರುವನ್ನು ಮರು ನೆನಪುಮಾಡಿಕೊಂಡಿದ್ದಾರೆ.
ಕೊರೊನಾ ಮತ್ತು ಲಾಕ್ ಡೌನ್ ನಂತರ ರೀ ರೀಲಿಜ್ ಆಗುತ್ತಿರುವ ಚಿತ್ರಗಳಿಗೆ ಪ್ರೆಕ್ಷಕರು ಪ್ರತಿಕ್ರಿಯೇ ನೋಡಿ ನಿರ್ಮಾಪಕರು ಮತ್ತು ನಿರ್ದೇಶಕರ ಮುಖದಲ್ಲಿಕೊಂಚ ನಗು ಮೂಡಿದೆ.