ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ದೂರು ದಾಖಲು

ಬೆಂಗಳೂರು: ರೈತ ಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್ ವಿರುದ್ಧ ಬಿಡಿಎ ಎಂಜಿನಿಯರ್ ಮೋಹನ್ ಆರ್.ಕೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಡಾ.ಶಿವರಾಮ ಕಾರಂತ ಬಡಾವಣೆ ವಿರೋಧಿಸಿ ಪ್ರತಿಭಟನೆ ಮಾಡಲಾಗಿತ್ತು. ಬಿಡಿಎ ವಿರುದ್ಧ, ಸಾರ್ವಜನಿಕರು, ಭೂಮಾಲೀಕರು, ರೈತರ ಎತ್ತಿಕಟ್ಟಿದ ಆರೋಪದಡಿ ಕೋಡಿಹಳ್ಳಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ ಎಫ್​ಐಆರ್ ದಾಖಲಿಸಲಾಗಿದೆ.

ದೂರಿನಲ್ಲಿ ನಿವೃತ್ತ ನ್ಯಾ. ಎ ವಿ ಚಂದ್ರಶೇಖರ್ ಅಸಮಾಧಾನದ ಬಗ್ಗೆ ಮಾಹಿತಿ ನೀಡಿದ್ದು ಕೋಡಿಹಳ್ಳಿ ಚಂದ್ರಶೇಖರ್ ತಪ್ಪು ಮಾಹಿತಿ ನೀಡಿ ಜನರನ್ನ ದಾರಿ ತಪ್ಪಿಸಿದ್ರು. ಶಿವರಾಮ ಕಾರಂತ ಬಡಾವಣೆ ನಿರ್ಮಾಣ ವಿಚಾರದಲ್ಲಿ ಜನರ ದಾರಿ ತಪ್ಪಿಸಿದ್ದಾರೆ. ಈಗಾಗಲೇ ನ್ಯಾಯಾಂಗ ನಿಂದನೆ ಅಡಿಯಲ್ಲಿ ನೋಟಿಸ್ ಕೂಡ ಕೊಡಲಾಗಿದೆ. ಪೊಲೀಸ್ರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿಗೆ ದಾಖಲೆಗಳನ್ನು ನೀಡದಂತೆ ಹೇಳಿದ್ದರು ಎಂದು ಕೋಡಿಹಳ್ಳಿ ಜನರ ದಾರಿ ತಪ್ಪಿಸಿ ಪ್ರತಿಭಟನೆ ಮಾಡಿಸಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಹಿನ್ನಲೆ:
3456 ಎಕರೆ ಜಾಗದಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣವಾಗ್ತಿದೆ. ಅದಕ್ಕೆ ಮೊದಲು ಹೈಕೋರ್ಟ್​ನಲ್ಲಿ ಸ್ಟೇ ಮಾಡಿಸಲಾಗಿತ್ತು. ಬಳಿಕ ಸುಪ್ರಿಂ ಕೋರ್ಟ್ ನಲ್ಲಿ ಸುಮಾರು 4 ವರ್ಷಗಳ ನಂತರ ಸ್ಟೇ ರದ್ದಾಗಿತ್ತು. ಸುಪ್ರೀಂ ಕೋರ್ಟ್ ಸಮಿತಿ ರಚನೆ ಮಾಡಿ ಅಭಿವೃದ್ಧಿ ಪಡಿಸಲು ಸೂಚಿಸಿತ್ತು. ಈ ವೇಳೆ ಕಳೆದ ತಿಂಗಳು ಕೋಡಿಹಳ್ಳಿ ವಿರುದ್ಧ ಕ್ರಮಕ್ಕೆ ಸೂಚಿಸಿತ್ತು. ಜನರ ಅಹವಾಲು ಸ್ವೀಕರಿಸಲು ಸಮಿತಿ 4 ಕಡೆ ಕೇಂದ್ರ ಸ್ಥಾಪಿಸಿತ್ತು. ಆದರೆ ಸೂಕ್ತ ದಾಖಲೆಗಳ‌ ನೀಡದಂತೆ ಎತ್ತಿಕಟ್ಟಿದ ಆರೋಪವಿದೆ. ಕಳೆದ ಮಾರ್ಚ್ 23 ರಂದು‌ ಬಿಡಿಎ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಆನಂತರ 24 ಮಾರ್ಚ್ ಪ್ರತಿಭಟನೆ ವೇಳೆ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಮಾತನಾಡಿದ ಆರೋಪವೂ ಕೇಳಿಬಂದಿದೆ. ಈ ಮೂಲಕ ಅಶಾಂತಿಗೆ ಕಾರಣರಾಗಿದ್ದಾರೆಂದು ದೂರು ನೀಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *