ದೆಹಲಿ : ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದು ಅವರನ್ನು “ಖಾಲಿಸ್ತಾನಿ” ಅಥವಾ “ನಕ್ಸಲೀಯರು” ಎಂದು ಕರೆದಿರುವುದು ವಿಷಾದನೀಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವ್ಯಕ್ತಪಡಿಸಿದ್ದಾರೆ. “ರೈತರು ಅನ್ನದಾತರು ಈ ದೇಶದ ಬೆನ್ನೆಲುಬು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ರೈತರ ಬಗ್ಗೆ ನಮಗೆ ಗೌರವವಿದೆ. ಅವರನ್ನು ಈಗೆ ಬಿಂಬಿಸುತ್ತಿರುವುದು ಸರಿಯಲ್ಲ. ದೇಶವು ಅನೇಕ ಆರ್ಥಿಕ ಸಂಕಷ್ಟದಲ್ಲಿ ಇರುವಾಗಲ್ಲೂ ರೈತರು ಪಾರುಮಾಡಿದ್ದಾರೆ. ಸುಳ್ಳು ಆರೋಪ ಮಾಡಬಾರದು ಎಂದು ಅವರು ಹೇಳಿದ್ದಾರೆ.
ಒಂದೇಡೆ ರಾಜ್ ನಾಥ್ ಸಿಂಗ್ ರೈತರ ಮೇಲಿನ ಆರೋಪಗಳ ಕುರಿತು ವಿಷಾದ ವ್ಯಕ್ತಿಪಡಿಸಿದರೆ. ಇದು ಸ್ವಾಗತರ್ಹ ವಿಷಯ. ಆದರೆ ಇನ್ನೊಂದೆಡೆ ಅದೇ ಹೋರಾಟದ ರೈತರನ್ನು ಪ್ರಧಾನಿ ಮೋದಿ ಮತ್ತು ಶಾ ಇಬ್ಬರು ಖಾಲಿಸ್ತಾನಿ” ಅಥವಾ “ನಕ್ಸಲೀಯರು ಎಂದು ರೈತರನ್ನು ಅವಮಾನಿಸಿದ್ದಾರೆ. ಒಂದೇ ಪಕ್ಷದ ಈ ನಾಯಕರುಗಳು ಈ ರೀತಿಯ ವಿಭಿನ್ನ ಹೇಳಿಕೆಗಳು ಹಲವು ರೀತಿಯ ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ.