ರೈತರನ್ನು ಅವಮಾನಿಸಿದ್ದ ನಟಿ ಕಂಗನಾ ವಿರುದ್ಧ ಕ್ರಿಮಿನಲ್ ಕೇಸ್

ಬೆಳಗಾವಿ,ಫೆ.10 : ಬಾಲಿವುಡ್ ನಟಿ ಕಂಗನಾ ರಣವತ್ ವಿರುದ್ದ ಬೆಳಗಾವಿ ಮೂಲದ ವಕೀಲರೊಬ್ಬರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ರೈತರನ್ನು ಹಾಗೂ ರೈತರ ಹೋರಾಟವನ್ನು ಅವಮಾನಿಸಿ ಮಾತನಾಡಿದಕ್ಕೆ ಈ ಪ್ರಕರಣವನ್ನು ದಾಖಲಿಸುತ್ತಿದೇನೆ ಎಂದು ವಕೀಲರಾದ ಹರ್ಷವರ್ಧನ್ ಪಾಟೀಲ್ ಹೇಳಿದರು.

‘ನಟಿ ಕಂಗನಾ ರಣವತ್  ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ರೈತರ ವಿರುದ್ದ ವಿಡಿಯೋಗಳನ್ನು ಹಾಕಿ ರೈತರನ್ನು ಭಯೋತ್ಪಾದಕರು ಎಂದು ಹೇಳಿತ್ತಿದ್ದಾರೆ, ರೈತರು ತಮ್ಮ ಹಕ್ಕುಗಳಿಗಾಗಿ ಶಾಂತಿಯುತ ಪ್ರತಿಭಟನೆಯನ್ನು ದೆಹಲಿಯ ಗಡಿಯಲ್ಲಿ ಮಾಡುತ್ತಿದ್ದಾರೆ. ಆದರೆ ಅವರನ್ನು ಈ ರೀತಿ ಬಿಂಬಿಸುವುದು ಖಂಡನೀಯ .  ಅವರು ಸೆಲೆಬ್ರಿಟಿ ಇರಬಹುದು, ಖ್ಯಾತ ನಟಿ ಇರಬಹುದು ಅವರ ಸಾಧನೆಯ ಹಿಂದೆ ರೈತರ ಶ್ರಮ ಇದೆ ಎಂಬುದನ್ನು ಕಂಗನಾ ಮರೆಯಬಾರದು ಎಂದು ವಕೀಲರಾದ ಹರ್ಷವರ್ಧನ್ ಹೇಳಿದ್ದಾರೆ.

ಇದನ್ನು ಓದಿ : ಅನ್ನದಾತರ ಹೋರಾಟಕ್ಕೆ ಹೆಚ್ಚಿದ ಸೆಲೆಬ್ರಿಟಿಗಳ ಬೆಂಬಲ

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಹರ್ಷವರ್ಧನ್ ಪಾಟೀಲ್  ಐ.ಪಿ.ಸಿ ಸೆಕ್ಷನ್ 153, 154, 505-1, 505A, 506 ರ ಅಡಿ ಕಂಗನಾ ವಿರುದ್ಧ  ಪ್ರಕರಣವನ್ನು ದಾಖಲಿಸಿದ್ದಾರೆ, ಪೊಲೀಸರು ಕಂಗನಾ ವಿರುದ್ದ (ಎಫ್.ಐ.ಆರ್) ದಾಖಲಿಸಲು ನಿರಾಕರಿಸಿದರೆ  ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಇದನ್ನು ಓದಿ : ದೆಹಲಿ ರೈತ ಹೋರಾಟಕ್ಕೆ ಹೆಚ್ಚುತ್ತಿದೆ ಜನ ಬೆಂಬಲ

Donate Janashakthi Media

Leave a Reply

Your email address will not be published. Required fields are marked *