ಬೆಂಗಳೂರು : ರೈತ ನಾಯಕ ಹಾಗೂ ಹಿರಿಯ ಸಿಪಿಐಎಂ ಮುಖಂಡ ಮಾರುತಿ ಮಾನ್ಪಡೆಯವರು ನಿನ್ನ ಬೆಳಗ್ಗೆ 9:30 ಕ್ಕೆ ನಿಧರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ಸ್ವಗ್ರಾಮವಾದ ಅಂಬಲಗಾ ಗ್ರಾಮದಲ್ಲಿ ನೇರವೇರಿತು.
ಶೋಷಿತ ಸಮುದಾಯದಿಂದ ಬಂದ ಮಾನ್ಪಡೆಯವರು ರೈತ ಕಾರ್ಮಿಕ ಚಳುವಳಿಯ ಪ್ರಖರ ಮುಂದಾಳಾಗಿ ಗುರುತಿಸಿಕೊಂಡಿದ್ದು, ಸರಕಾರಿ ಹುದ್ದೆಯನ್ನು ತೊರೆದು 1982 ರಲ್ಲಿ ಜನಪರ ಚಳುವಳಿಗೆ ಧುಮುಕಿದ್ದ ಮಾನ್ಪಡೆಯವರು ರೈತ ಚಳುವಳಿಯ ಮೂಲಕ ಎಲ್ಲರಿಗೂ ಚಿರಪರಿಚಿತರಾದ ಇವರ ಸಾವಿಗೆ ಅನೇಕರು ಕಂಬಿನಿಯನ್ನು ಮಿಡಿದಿದ್ದಾರೆ. ಮಾನಪಡೆಯವರ ಅಗಲಿಕೆಗೆ ನಾಡಿನ ಹಿರಿಯರು, ರಾಜಕೀಯ ಮುಖಂಡರು, ಯುವಜನಾಂಗ, ಮಹಿಳೆಯರು ಹಲವಾರು ಸಂಘಟನೆಗಳು ಸೇರಿದಂತೆ ಅನೇಕ ಜನರು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.
ಇವರ ಅಂತಿಮ ದರ್ಶನಕ್ಕೆಂದೇ ಅಂಬಲಗಾ ಗ್ರಾಮಕ್ಕೆ ನಾಡಿನ ಹಲವು ಜಿಲ್ಲೆಗಳಿಂದ ಅನೇಕ ನಾಯಕರು, ಸಂಘಟನೆಗಳ ಮುಖಂಡರು, ಯುವಜನಾಂಗ, ಊರಿನ ಗಣ್ಯರು ಸೇರಿದಂತೆ ಅಂಬಲಗಾ ಗ್ರಾಮದಲ್ಲಿ ಈ ಜನನಾಯಕನ ಅಂತಿಮ ನಮನಕ್ಕೆ ಜನಸ್ತೋಮವೇ ಸೇರಿತು.
ಕೋವಿಡ್ ವೈರಾಣುವಿನ ನಡುವಿನಲ್ಲಿಯೂ ಕೂಡ ಗ್ರಾಮಕ್ಕೆ ಜನಸಾರವೇ ಹರಿದುಬಂದಿತ್ತು. ಬಡಜನ, ರೈತರು, ದಮನಿತರ ದ್ವನಿಯಾಗಿದ್ದ ಧ್ವನಿಯೊಂದು ನಮ್ಮನಗಲಿ ಹೋಗಿದೆ ಎಂದು ಕಂಬನಿಯನ್ನು ಮೀಡಿದಿದ್ದಾರೆ. ಮತ್ತೆ ಹುಟ್ಟಿಬರಲಿ ನಿಮ್ಮ ಆಶಯಗಳನ್ನು ನಾವು ಮುಂದುವರೆಸುತ್ತೇವೆ ಎಂದು ಪ್ರತಿಜ್ಞೆ ಗೈಯುವ ಮೂಲಕ ಜನ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.