ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಯವರು ಪ್ರಶಸ್ತಿ ಪ್ರದಾನ ಮಾಡಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕಗಳನ್ನು ತಂದುಕೊಟ್ಟ ಕ್ರೀಡಾ ಪಟುಗಳು ಒಳಗೊಂಡು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ.

ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನದಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ನೀಡಲಾಗುತ್ತದೆ, ಆದರೆ ಒಲಿಂಪಿಕ್ಸ್‌ ಪಂದ್ಯ ಮತ್ತು ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟಗಳ ಕಾರಣದಿಂದಾಗಿ ಈ ವರ್ಷ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಇಂದಿಗೆ(ನವೆಂಬರ್‌ 13) ಮುಂದೂಡಲಾಗಿತ್ತು.

ಟೋಕಿಯೋ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿ 12 ಕ್ರೀಡಾಪಟುಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಹಾಗೂ 32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವಾಲಯವು 2021ರ ನವೆಂಬರ್ 2 ರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿತು. ಕ್ರೀಡೆಯಲ್ಲಿನ ಶ್ರೇಷ್ಠತೆಯನ್ನ ಗುರುತಿಸಲು ಮತ್ತು ಬಹುಮಾನ ನೀಡಲು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಹಾಗೂ 35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಪ್ರಕಟಿಸಿತ್ತು. ಐವರು ಕೋಚ್‌ಗಳಿಗೆ  ದ್ರೋಣಾಚಾರ್ಯ ಪ್ರಶಸ್ತಿ, ಐದು ಮಂದಿಗೆ ಮೇಜರ್‌ ಧ್ಯಾನ್‌ಚಂದ್‌ ಜೀವಮಾನ ಶ್ರೇಷ್ಠ ಸಾಧನೆ ನೀಡುವ ಕ್ರೀಡಾಪಟುಗಳ ಪಟ್ಟಿಯನ್ನು ಪ್ರಕಟಿಸಿತು.

ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ

ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ರವಿಕುಮಾರ್ (ಕುಸ್ತಿ), ಲೊವ್ಲಿನಾ (ಬಾಕ್ಸಿಂಗ್), ಶ್ರೀಜೇಶ್ ಪಿಆರ್ (ಹಾಕಿ), ಅವನಿ ಲೆಖರಾ (ಪ್ಯಾರಾ ಶೂಟಿಂಗ್), ಸುಮಿತ್ ಅಂಟಿಲ್ (ಪ್ಯಾರಾ ಅಥ್ಲೆಟಿಕ್ಸ್), ಪ್ರಮೋದ್ ಭಗತ್ (ಪ್ಯಾರಾ ಬ್ಯಾಡ್ಮಿಂಟನ್), ಕೃಷ್ಣ ನಗರ (ಪ್ಯಾರಾ ಬ್ಯಾಡ್ಮಿಂಟನ್), ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್), ಮಿಥಾಲಿ ರಾಜ್ (ಕ್ರಿಕೆಟ್), ಸುನಿಲ್ ಛೆಟ್ರಿ (ಫುಟ್ಬಾಲ್), ಮತ್ತು ಮನ್‌ಪ್ರೀತ್ ಸಿಂಗ್ (ಹಾಕಿ)

ಅರ್ಜುನ ಪ್ರಶಸ್ತಿ

ಅರ್ಪಿಂದರ್ ಸಿಂಗ್(ಅಥ್ಲಿಟಿಕ್ಸ್), ಸಿಮ್ರನ್‌ಜಿತ್ ಕೌರ್(ಬಾಕ್ಸಿಂಗ್), ಶಿಖರ್ ಧವನ್(ಕ್ರಿಕೆಟ್) ಸಿಎ ಭವಾನಿ ದೇವಿ(ಫೆನ್ಸಿಂಗ್), ಮೋನಿಕಾ(ಹಾಕಿ), ವಂದನಾ ಕಟಾರಿಯಾ(ಹಾಕಿ), ಸಂದೀಪ್ ನರ್ವಾಲ್(ಕಬಡ್ಡಿ)ಹಿಮಾನಿ ಉತ್ತಮ್ ಪರಾಬ್(ಮಲ್ಲಕಂಬ), ಅಭಿಷೇಕ್ ವರ್ಮಾ(ಶೂಟಿಂಗ್), ಅಂಕಿತಾ ರೈನಾ(ಟೆನಿಸ್), ದೀಪಕ್ ಪೂನಿಯಾ(ರಸ್ಲಿಂಗ್) ದಿಲ್‌ಪ್ರೀತ್ ಸಿಂಗ್(ಹಾಕಿ), ಹರ್ಮನ್‌ಪ್ರೀತ್ ಸಿಂಗ್(ಹಾಕಿ), ರೂಪಿಂದರ್ ಪಾಲ್ ಸಿಂಗ್ (ಹಾಕಿ),  ಸುರೇಂದರ್ ಕುಮಾರ್ (ಹಾಕಿ), ಅಮಿತ್ ರೋಹಿದಾಸ್ (ಹಾಕಿ).

ಬೀರೇಂದ್ರ ಲಾಕ್ರಾ (ಹಾಕಿ), ಸುಮಿತ್ (ಹಾಕಿ), ನೀಲಕಂಠ ಶರ್ಮಾ (ಹಾಕಿ), ಹಾರ್ದಿಕ್ ಸಿಂಗ್ (ಹಾಕಿ), ವಿವೇಕ್ ಸಾಗರ್ ಪ್ರಸಾದ್ (ಹಾಕಿ), ಗುರ್ಜಂತ್ ಸಿಂಗ್ (ಹಾಕಿ), ಮನದೀಪ್ ಸಿಂಗ್ (ಹಾಕಿ), ಶಂಶೇರ್ ಸಿಂಗ್ (ಹಾಕಿ), ಲಲಿತ್ ಕುಮಾರ್ ಉಪಾಧ್ಯಾಯ (ಹಾಕಿ), ವರುಣ್ ಕುಮಾರ್ (ಹಾಕಿ), ಸಿಮ್ರಂಜೀತ್ ಸಿಂಗ್ (ಹಾಕಿ), ಯೋಗೇಶ್ ಕಥುನಿಯಾ (ಪ್ಯಾರಾ ಅಥ್ಲೆಟಿಕ್ಸ್), ನಿಶಾದ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), ಪ್ರವೀಣ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), ಸುಹಾಶ್ ಯತಿರಾಜ್ (ಪ್ಯಾರಾ ಬ್ಯಾಡ್ಮಿಂಟನ್), ಸಿಂಗ್ರಾಜ್ ಅಧಾನ (ಪ್ಯಾರಾ ಶೂಟಿಂಗ್), ಭಾವಿನಾ ಪಟೇಲ್ (ಪ್ಯಾರಾ ಟೇಬಲ್ ಟೆನಿಸ್), ಹರ್ವಿಂದರ್ ಸಿಂಗ್ (ಪ್ಯಾರಾ ಆರ್ಚರಿ), ಶರದ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್)

ದ್ರೋಣಾಚಾರ್ಯ ಪ್ರಶಸ್ತಿ ವಿಜೇತರು

ಸರ್ಪಾಲ್ ಸಿಂಗ್ (ಹಾಕಿ)
ಅಶನ್ ಕುಮಾರ್(ಕಬಡ್ಡಿ)
ಟಿ. ಪಿ. ಔಸೆಫ್ (ಅಥ್ಲೆಟಿಕ್ಸ್)
ಸರ್ಕಾರ್ ತಲ್ವಾರ್ (ಕ್ರಿಕೆಟ್)
ತಪನ್ ಕುಮಾರ್  (ಈಜು)

ಮೇಜರ್ ಧ್ಯಾನ್‌ಚಂದ್ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ 

ದೇವಿಂದರ್ ಸಿಂಗ್ ಗರ್ಚಾ( ಹಾಕಿ)
ವಿಕಾಸ್ ಕುಮಾರ್ (ಕಬಡ್ಡಿ)
ಸಜ್ಜನ್ ಸಿಂಗ್( ಕುಸ್ತಿ)
ಲೇಖಾ ಕೆ.ಸಿ. (ಬಾಕ್ಸಿಂಗ್)
ಅಭಿಜೀತ್ ಕುಂಟೆ (ಚೆಸ್)

Donate Janashakthi Media

Leave a Reply

Your email address will not be published. Required fields are marked *