ಮಳವಳ್ಳಿ : ವಿಧಾನ ಸಭಾ ಅಧಿವೇಶನದಲ್ಲಿ ಕರಾಳ ಕಾರ್ಮಿಕ ಸಂಹಿತೆಗಳು ಮತ್ತು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ತಿರಸ್ಕರಿಸುವಂತೆ ಮತ್ತು ಬೆಲೆ ಏರಿಕೆ, ನಿರುದ್ಯೋಗ ಮತ್ತು ಖಾಸಗೀಕರಣ ವಿರೋಧಿಸಿ ಎಲ್ಲಾ ಕಾರ್ಮಿಕರಿಗೆ ಕನಿಷ್ಟ ಮಾಸಿಕ ವೇತನ 24000 ರೂ ನಿಗಧಿಗಾಗಿ, ರೈತರ ಬೆಳೆಗಳಿಗೆ ವೈಜ್ಞಾನಿಕ ಕನಿಷ್ಟ ಬೆಂಬಲ ಬೆಲೆ ಕಾಯ್ದೆಗಾಗಿ, ವಿದ್ಯುತ್ ಮಸೂದೆ ವಾಪಸ್ಸಿಗಾಗಿ, ಹಾಗು ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಕಾಯ್ದೆ ಜಾರಿಗಾಗಿ ಒತ್ತಾಯಿಸುವಂತೆ ಇಂದು ಸಿಐಟಿಯು ಮಳವಳ್ಳಿ ಪಟ್ಟಣದಿಂದ ನಡಿಗೆ ಮೂಲಕ ಮಳವಳ್ಳಿ ಕ್ಷೇತ್ರದ ವಿಧಾನ ಸಭಾ ಸದಸ್ಯರಾದ ಡಾ ಕೆ. ಅನ್ನದಾನಿ ರವರಿಗೆ ಮನವಿಪತ್ರವನ್ನು ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಶಾಸಕ ಅನ್ನದಾನಿ, ಕಾರ್ಮಿಕರ ಸಮಸ್ಯೆಗಳ ಕುರಿತು ಮಾತನಾಡುತ್ತೇನೆ. ಅಧಿವೇಶನದಲ್ಲಿ ಈ ಕುರಿತು ಪ್ರಶ್ನೆ ಮತ್ತು ಚರ್ಚೆಗಳನ್ನು ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಈ ಪ್ರತಿಭಟನೆ ನಡಿಗೆ ಹೋರಾಟದಲ್ಲಿ CITU ರಾಜ್ಯ ಕಾರ್ಯದರ್ಶಿ G.ರಾಮಕೃಷ್ಣ, ಸಂಚಾಲಕ ತಿಮ್ಮೇಗೌಡ. ಹೆಚ್.ಕೆ, ಜಿಲ್ಲಾ ಖಜಾಂಚಿ ಮಹದೇವಮ್ಮ, ಅಂಗನವಾಡಿ ನೌಕರರ ಸಂಘದ ಲತಾ, ಶಿವಮ್ಮ ಪುರಸಭಾ ಸದಸ್ಯರು ಹಾಗೂ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಕುಮಾರ್.ಪಿ ಬೀದಿಬದಿ ವ್ಯಾಪಾರಿಗಳ ಸಂಘದ ಗೌರಮ್ಮ, ಟೈಲರ್ ಗಳ ಸಂಘದ ಚಂದ್ರು, ಕೆ.ಪಿ ಅಕ್ಷರ ದಾಸೋಹ ನೌಕರ ಸಂಘದ ಸುನಂದ ಭಾಗವಹಿಸಿದರು.