ಕುಶಾಲನಗರ: ಕೊಡಗಿನ ಏಕೈಕ ಅಂತರಾಷ್ಟ್ರೀಯ ಮಹಿಳಾ ಹಾಕಿ ತೀರ್ಪುಗಾರ್ತಿ ಆಗಿದ್ದ ಹಾಕಿಪಟು ಮುಂಡಂಡ ಅನುಪಮ ಭಾನುವಾರ ಬೆಳಿಗ್ಗೆ ಕೊರೊನಾ ಸೋಂಕಿಗೆ ಮರಣವನ್ನಪ್ಪಿರುವುದು ನಿಜವಾಗಿಯೂ ಕ್ರೀಡಾ ಅಭಿಮಾನಿಗಳಿಗೆ. ನಾಡಿನ ಜನತೆಗೆ ಸಹಿಸಲಾಗದಷ್ಟು ದುಃಖವಾಗಿದೆ .
ಮೂಲತ ಕೊಡಗಿನ ಬಿಟ್ಟಂಗಾಲದ ದಿವಂಗತ ಪುಚ್ಚಿಮಾಡ ಶಿವಪ್ಪ ಮತ್ತು ಶಾಂತಿಯವರ ಪುತ್ರಿಯಾಗಿದ್ದು . ತಾಯಿ ಶಾಂತಿಯವರು ಅತ್ಯುತ್ತಮ ಹಾಕಿ ಪಟು ಆಗಿದ್ದು ತಾಯಿಯಂತೆ ತಾನು ಕೂಡ ಹಾಕಿ ಆಟಗಾರ್ತೀಯಾಗ ಬೇಕು ಎಂದು ಕನಸು ಕಾಣುತ ಬೆಳೆದು ಹಾಕಿ ಕ್ರೀಡೆಯಲ್ಲಿ ಸಾಧನೆಯನ್ನು ಮಾಡಲು ಪ್ರಾರಂಭಿಸುತ್ತಾರೆ . ಕೂಡಿಗೆಯ ಕ್ರೀಡಾ ಶಾಲೆ ಮತ್ತು ಕ್ರೀಡಾ ಪ್ರಾಧಿಕಾರ, ಸಾಯಿಯಲ್ಲಿ ಹಾಕಿ ತರಬೇತಿ ಪಡೆದು ವೀರಾರಾಜಪೇಟೆಯ ಕಾವೇರಿ ಮಹಿಳಾ ಕಾಲೇಜಿನಲ್ಲಿ ಪದವಿ ಮುಗಿಸಿ .ಹಾಕಿಯಲ್ಲಿ ರಾಜ್ಯ ಮತ್ತು ದೇಶದ ತಂಡಗಳಲ್ಲಿ ಪ್ರತಿನಿಧಿಸುವ ಪ್ರಯತ್ನದಲ್ಲಿ ಸಾಗುತ್ತಾರೆ .
ಹಾಕಿ ಕ್ರೀಡೆಯಲ್ಲಿ ಅತ್ಯುತ್ತಮ ಆಟಗಾತಿಯಾಗಿ ಹೊರಹೊಮ್ಮಿ, ರಾಜ್ಯ ತಂಡಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು . ಆದರೇ ? ಭಾರತ ತಂಡದ ಜರ್ಸಿ ಧರಿಸುವ ಅವಕಾಶ ದೊರಕಲಿಲ್ಲ. ನಿರಾಶೆಯ ಕರಿ ಕತ್ತಲು ಮನಸ್ಸಿನಲ್ಲಿ ಮೂಡಿದರು ಎದೆಗುಂದದೆ ಕೊಡಗಿನ ಹುಲಿ ಅನುಪಮ ಮುಂದೆ ನುಗ್ಗಿ, ಹಾಕಿ ಅಂಪೈರ್ ಕೋರ್ಸ್ ಗೆ ಸೇರಿ ದೇಶದ ಪ್ರಥಮ ಮಹಿಳಾ ಹಾಕಿ ಅಂಪೈರ್ ಆಗಿ ಹೊರಬರುತ್ತಾರೆ .
ಇದನ್ನೂ ಓದಿ : ನಗೂ ನಿಲ್ಲಿಸಿದ ಖ್ಯಾತ ಹಾಸ್ಯ ನಟ ವಿವೇಕ
ಕಳೆದ ಬಹಳಷ್ಟು ವರ್ಷಗಳಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಂಪೈರ್ ಆಗಿ ಕಾರ್ಯನಿರ್ವಾಹಿಸಿ ದಾಖಲೆ ಬರೆದ ಕೊಡಗಿನ ದಿಟ್ಟ ಮಹಿಳೆ ಅನುಪಮ ಇಂದು ಕೊರೋನಕ್ಕೆ ಬಲಿಯಾಗಿರುವುದು ನಿಜವಾಗಿಯೂ ದುರಂತವೇ ಸರಿ.ಇವರ ಅಗಲಿಕೆ ನಾಡಿನ ಹಾಕಿ ಪ್ರೇಮಿಗಳಿಗೆ ತೀವ್ರವಾದ ಆಘಾತ ಉಂಟು ಮಾಡಿದೆ. ಇವರ ಅಭಿಮಾನಿಗಳು, ಶಿಷ್ಯಂದಿರು ಕಂಬನಿ ಮಿಡಿದಿದ್ದಾರೆ.