ರಾಜ್ಯದ ಜೈಲುಗಳ ಸುಧಾರಣೆಗೆ ಹೈಕೋರ್ಟ್ ನ್ಯಾಯಮೂರ್ತಿಗೆ ಪತ್ರ!

ನಟ ದರ್ಶನ್ ಗೆ ಜೈಲಿನಲ್ಲಿ ವೈಭವೋಪೇತ ಸೌಲಭ್ಯ ಪೂರೈಕೆ  ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತರು ರಾಜ್ಯದ ಜೈಲುಗಳ ಸುಧಾರಣೆಗೆ ಹೈಕೋರ್ಟ್ ಗೆ ಮೊರೆ ಹೋಗಿದ್ದಾರೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿರುವ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ, ರಾಜ್ಯದ ಎಲ್ಲಾ ಜೈಲುಗಳ ಸುಧಾರಣೆಗೆ ಆದೇಶಿಸುವಂತೆ ಮನವಿ ಮಾಡಿದ್ದಾರೆ.

ದರ್ಶನ್ ವಿಚಾರದಲ್ಲಿ ನಡೆದಿರುವ ನಿಯಮಾವಳಿಗಳ ಉಲ್ಲಂಘನೆಗಳನ್ನು ಪತ್ರದಲ್ಲಿ ಉಲ್ಲೇಖಿಸಿರುವ ನರಸಿಂಹ ಮೂರ್ತಿ, ಜೈಲಿನ ವ್ಯವಸ್ಥೆಯಲ್ಲೇ ಅಮೂಲಾಗ್ರ ಬದಲಾವಣೆ ಮಾಡುವ ಮಹತ್ವದ ಆದೇಶ ನೀಡುವಂತೆ ಮನವಿ ಮಾಡಿದ್ದಾರೆ.

ಪ್ರಿಸನ್ ಮ್ಯಾನುವೆಲ್ ನ್ನೇ ಉಲ್ಲಂಘಿಸಿರುವ ಜೈಲ್ ಅಧಿಕಾರಿಗಳು ಕೈದಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ನಿಯಮದ ಪ್ರಕಾರ ಒಬ್ಬ ಕೈದಿ ಭೇಟಿಗೆ 5 ಸಂದರ್ಶಕರಿಗಷ್ಟೆ ಅವಕಾಶ ನೀಡಬೇಕು. ಆದರೆ ದರ್ಶನ್ ವಿಚಾರದಲ್ಲಿ 5ಕ್ಕಿಂತ ಹೆಚ್ಚು ಜನರು ಭೇಟಿಗೆ ಅವಕಾಶ ನೀಡಿ ನಿಯಮಗಳ ಸ್ಪಷ್ಟ ಉಲ್ಲಂಘನೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಜೈಲುಗಳ ಸ್ವರೂಪ-ಚಿತ್ರಣವನ್ನೇ ಬದಲಿಸುವಂತೆ ಆದೇಶ ನೀಡಬೇಕು. ಜೈಲುಗಳಲ್ಲಿ ಅಸಮಾನತೆ-ಭ್ರಷ್ಟಾಚಾರ ತಾಂಡವ ಆಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕರನ್ನು ಒಳಗೊಂಡ ಸಮಿತಿ ರಚಿಸುವಂತೆ ಮನವಿ ಮಾಡಲಾಗಿದೆ.

ಮುಖ್ಯ ನ್ಯಾಯಮೂರ್ತಿಗೆ ಅಲ್ಲದೇ ಪೊಲೀಸ್ ಮಹಾನಿರ್ದೇಶಕರು, ಗೃಹ ಕಾರ್ಯದರ್ಶಿ, ಕಾರಾಗೃಹ ಎಡಿಜಿಪಿಗೂ ದಾಖಲೆ ಸಮೇತ ಪತ್ರ ಬರೆದಿರುವ ನರಸಿಂಹಮೂರ್ತಿ ಮನವಿ ಮಾಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *