ಶಿವಮೊಗ್ಗದಲ್ಲಿ ವೃದ್ಧರೊಬ್ಬರು ಝೀಕಾ ವೈರಸ್ ಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಝೀಕಾ ವೈರಸ್ ಗೆ ಮೊದಲ ಬಲಿ ವರದಿಯಾಗಿದೆ.
ಜೂನ್ 24ರಂದು 73 ವರ್ಷದ ವ್ಯಕ್ತಿಗೆ ಝಿಕಾ ವೈರಸ್ ಕಾಣಿಸಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಅಸುನೀಗಿದ್ದಾರೆ.
ರಾಜ್ಯದಲ್ಲಿ ಒಟ್ಟು 9 ಝಿಕಾ ವೈರಸ್ ಕೇಸ್‌ಗಳು ಪತ್ತೆಯಾಗಿವೆ. ಈ ಪೈಕಿ ಶಿವಮೊಗ್ಗದಲ್ಲಿ ಮೂರು ಹಾಗೂ ಬೆಂಗಳೂರಲ್ಲಿ 6 ಪ್ರಕರಣಗಳು ವರದಿಯಾಗಿವೆ.
ಬೆಂಗಳೂರಿನ ಜಿಗಣಿಯಲ್ಲಿ ಒಂದೇ ಕಡೆ 6 ಝೀಕಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಮೂವರು ಗರ್ಭಿಣಿಯರಾಗಿದ್ದರೆ.
ಮೂವರ ಗರ್ಭಿಣಿಯರ ಪೈಕಿ ಒಬ್ಬರು ಅಸ್ಸಾಂ ಮೂಲದವರಾಗಿದ್ದು, ಕಳೆದ ಒಂದು ವರ್ಷದಿಂದ ಜಿಗಣಿಯಲ್ಲಿ ವಾಸವಾಗಿದ್ದಾರೆ.
ಇಬ್ಬರು ಗರ್ಭಿಣಿಯರು ಜಿಗಣಿ ನಿವಾಸಿಯಾಗಿದ್ದಾರೆ. ಒಬ್ಬರಿಗೆ ಹೆರಿಗೆಯಾಗಿದ್ದು ತಾಯಿ-ಮಗು ಆರೋಗ್ಯವಾಗಿದ್ದಾರೆ. ಇಬ್ಬರು ಗರ್ಭಿಣಿಯರು ವೈದ್ಯರ ನಿಗಾದಲ್ಲಿ ಇದ್ದಾರೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.