ರಾಜ್ಯದಲ್ಲಿ ಕಳೆದ 10 ವರ್ಷದ ದಾಖಲೆ ಗಡಿ ದಾಟಿದ ಡೆಂಘೀ ಪ್ರಕರಣ!

ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ 10 ಸಾವಿರ ಗಡಿ ತಲುಪಿದ್ದು, ಇದು ಕಳೆದ 10 ವರ್ಷಗಳಲ್ಲೇ ಅತ್ಯಧಿಕ ಪ್ರಕರಣಗಳಾಗಿವೆ.

ಈ ವರ್ಷ 7 ತಿಂಗಳಲ್ಲಿ 19,923 ಡೆಂಘೀ ಪ್ರಕರಣಗಳು ದಾಖಲಾಗಿದ್ದು, ವರ್ಷಾಂತ್ಯಕ್ಕೆ 30 ಸಾವಿರದ ಗಡಿ ದಾಟುವ ಆತಂಕ ಉಂಟಾಗಿದೆ.

ಕಳೆದ ವರ್ಷ ರಾಜ್ಯದಲ್ಲಿ 19,300 ಡೆಂಘೀ ಕೇಸ್ ಪತ್ತೆಯಾಗಿದ್ದವು. ಈ ಬಾರಿ ಅಂದರೆ 2024 ಜನವರಿ 1 ರಿಂದ ಆಗಸ್ಟ್ 6 ವರೆಗೆ 19,923 ಡೆಂಘೀ ಪ್ರಕರಣಗಳು ವರದಿಯಾಗಿದೆ. ಕಳೆದ ವರ್ಷದ ದಾಖಲೆಯನ್ನು ಈ ಬಾರಿ 7 ತಿಂಗಳಲ್ಲೇ ದಾಟಿದೆ.

9035 ಕೇಸ್ ಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ವರದಿ ಆಗಿದ್ದು, ಮಹಾಮಾರಿ ರಾಜಧಾನಿಯನ್ನು ಹೆಚ್ಚಾಗಿ ಕಾಡುತ್ತಿದೆ.

ಈ ವರ್ಷ ರಾಜ್ಯದಲ್ಲಿ ಇಲ್ಲಿಯವರೆಗೆ 10 ಜನರು ಡೆಂಘೀಗೆ ಬಲಿ ಆಗಿದ್ದಾರೆ. ಬೆಂಗಳೂರಿನಲ್ಲಿ 3, ಶಿವಮೊಗ್ಗ ಮತ್ತು ಹಾಸನದಲ್ಲಿ ತಲಾ 2 ಪ್ರಕರಣ ವರದಿಯಾಗಿವೆ.

ಧಾರವಾಡ, ಹಾವೇರಿ ಮತ್ತು ಮೈಸೂರಿನಲ್ಲಿ ತಲಾ ಒಂದರಂತೆ ಡೆಂಘೀ ಮರಣ ಪ್ರಕರಣಗಳು ವರದಿ ಆಗಿದೆ.

ಮಳೆಯ ಕಾರಣದಿಂದಾಗಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಳ ಆಗಿದ್ದು, ಡೆಂಘೀ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ ಡೆಂಘೀ ಟೆಸ್ಟ್ ಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಳೆದ ಹತ್ತು ವರ್ಷದ ಡೆಂಘೀ ಪ್ರಕರಣಗಳ ಅಂಕಿ ಅಂಶ ಹೀಗಿದೆ.

ವರ್ಷ ಒಟ್ಟು ಡೆಂಘೀ ಕೇಸ್

2014 – 3358
2015 – 5077
2016 – 6083
2017 – 17844
2018 – 4848
2019 – 18183
2020 – 3823
2021 – 7393
2022 – 9889
2023 – 19300
2024(7 ತಿಂಗಳು) 19923

 

Donate Janashakthi Media

Leave a Reply

Your email address will not be published. Required fields are marked *