ಬೆಂಗಳೂರು,ಫೆ.19 : ಕೇಂದ್ರದ ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ರೈಲು ರೊಕೋ ಯಶ್ವಸಿಯಾಗಿ ನಡೆದಿದೆ. ಇದರ ಭಾಗವಾಗಿ ಕರ್ನಾಟಕದಲ್ಲೂ ಸಂಯುಕ್ತ ಹೋರಾಟ-ಕರ್ನಾಟಕ ನೇತೃತ್ವದಲ್ಲಿ ರೈಲು ರೋಕೋ ಚಳುವಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಲು ಪೆಟ್ರೋಲ್ ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಲು ಒತ್ತಾಯಿಸಿ ರೈತ, ಕಾರ್ಮಿಕ, ದಲಿತ ಮತ್ತಿತರ ಸಂಘಟನೆಗಳು ಸೇರಿದಂತೆ ಉಳಿದ ಸಂಘಟನೆಗಳ ಬೆಂಬಲದೊಂದಿಗೆ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ತನಕ ರೈಲು ತಡೆ ಚಳವಳಿಯನ್ನು ಯಶಸ್ವಿಗೊಳಿಸಿದರು.
ಬಂಗಾರ ಪೇಟೆ ರೈಲ್ವೇ ಜಂಕ್ಷನ್ ಮುಂದೆ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸಿ ರೈಲು ತಡೆಯಲು ಮುಂದಾದಾಗ ರಾಜ್ಯ ಪೋಲೀಸರು ಮತ್ತು ಕೇಂದ್ರ ರೈಲ್ವೆ ಪೋಲೀಸರು ಕಾರ್ಯಕರ್ತರನ್ನು ಬಂಧಿಸಿದರು.
ರಾಯಚೂರು ನಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ರೈಲು ರೋಕೋ ಚಳುವಳಿ ನಡೆಸಿದ ಕಾರ್ಯಕರ್ತರನ್ನು ಪೋಲಿಸ್ ರು ಚಳುವಳಿಯನ್ನು ತಡೆದು 40 ಕ್ಕೂ ಹೆಚ್ಚು ಜನರನ್ನು ಬಂಧಿಸಿ ಬಿಡುಗಡೆ ಮಾಡಿದರು.
ಯಾದಗಿರಿ, ಬೆಳಗಾವಿ, ಹುಬ್ಬಳ್ಳಿ, ಕೋಲಾರ, ಗುಲ್ಬರ್ಗ, ಮೈಸೂರು, ಮಂಡ್ಯ, ಕೊಪ್ಪಳ ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ರೈಲ್ವೆ ಮುಂಭಾಗ ಪ್ರತಿಭಟನೆನ ನಡೆಸಿದರು.