ರಾಜಕೀಯ ಬೇಧ ಮರೆತು ಎಲ್ಲರೂ ಕೊಡಗಿನ ಹಾನಿಗೆ ಶಾಶ್ವತ ಪರಿಹಾರ ಯೋಜನೆ ರೂಪಿಸಬೇಕು: ಡಿ.ಕೆ.ಶಿವಕುಮಾರ್

ಮಡಿಕೇರಿ: ರಾಜ್ಯಕ್ಕೆ ಕಿರೀಟದಂತಿರುವ ಕೊಡಗು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಪ್ರಾಕೖತ್ತಿಕ ವಿಕೋಪ ಸಂಬಂಧಿತ ರಾಜಕೀಯ ಬೇಧ ಮರೆತು ಎಲ್ಲಾ ಪಕ್ಷಗಳ ನಾಯಕರು ಒಂದಾಗಿ ಶಾಶ್ವತವಾದ ಪರಿಹಾರ ಕ್ರಮಗಳ ಯೋಜನೆಯನ್ನು ಸಕಾ೯ರದ ಮೂಲಕ ಜಾರಿಗೊಳಿಸಬೇಕಾಗಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

 

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ದೇಶಕ್ಕೆ ಅಪ್ರತಿಮ ಸೈನಿಕರನ್ನು ನೀಡಿದ, ಜೀವನದಿ ಕಾವೇರಿಯ ತವರು, ಕನಾ೯ಟಕ ರಾಜ್ಯಕ್ಕೆ ವಿಲೀನಗೊಂಡ ಸಂದಭ೯ದ ಅಂದಿನ ಸಂದಭ೯ದಲ್ಲಿಯೇ 10 ಲಕ್ಷ ರು. ತೆರಿಗೆ ನೀಡಿದ ಕೊಡಗಿನ ರಕ್ಷಣೆಗೆ ಎಲ್ಲರೂ ಮುಂದಾಗಬೇಕಾಗಿದೆ. ನಾಡಿಗೆ ಮಳೆ ಅಗತ್ಯವಾಗಿದೆ. ಆದರೆ ಮಳೆಯಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟಲೇಬೇಕಾಗಿದೆ. ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಯೋಜನೆ ರೂಪಿಸುತ್ತೇವೆ ಎಂದು ಹೇಳಿದರು.

ಕಳೆದ ವಷ೯ ರಾಜ್ಯದಲ್ಲಿ ಸಂಭವಿಸಿದ ಪ್ರಾಕೖತ್ತಿಕ ವಿಕೋಪ ಸಂತ್ರಸ್ಥರಿಗೇ ಇನ್ನೂ ರಾಜ್ಯ ಸಕಾ೯ರ ಭರವಸೆ ನೀಡಿದ್ದ ಪರಿಹಾರ ಇನ್ನೂ ನೀಡಿಲ್ಲ. ಶಾಸಕರು, ಸಂಸದರಿಗೆ ಈ ಬಗ್ಗೆ ಪ್ರಶ್ನಿಸಲೂ ಸಾಧ್ಯವಾಗದ ಅಸಾಹಯಕ ಸ್ಥಿತಿಯಿದೆ. ರಾಜ್ಯದಲ್ಲಿ ಕೋರೋನಾ ಮತ್ತು ಮಳೆಹಾನಿ ಪರಿಸ್ಥಿತಿಯನ್ನು ಸಮಥ೯ವಾಗಿ ನಿವ೯ಹಿಸುವಲ್ಲಿ ಸಕಾ೯ರ ಸಂಪೂಣ೯ ವಿಫಲವಾಗಿದೆ ಎಂದೂ ಶಿವಕುಮಾರ್ ಆರೋಪಿಸಿದರು. ಹಾಗಾಗಿ ಕೊಡಗು ಭಾಗದ ಜನರ ಶಾಶ್ವತ ರಕ್ಷಣೆಗೆ ನಾವೆಲ್ಲರೂ ಒಟ್ಟಾಗಿ ಮುಂದಿನ ಅಧಿವೇಶನದಲ್ಲಿ 10 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ತಿಳಿಸಿದ್ದಾರೆ.

ಮಳೆ ಹಾನಿ ಪರಿಸ್ಥಿತಿ ನಿಭಾಯಿಸುವಲ್ಲಿ ಕೊಡಗಿನ ರಾಜಕಾರಣಿಗಳು ವಿಫಲರಾಗಿದ್ದಾರೆಯೋ ಅಥವಾ ರಾಜಕಾರಣಿಗಳು ವಿಫಲರಾಗಿದ್ದಾರೆಯೋ ಎಂಬ ಬಗ್ಗೆ ಪರಿಶೀಲಿಸುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಮುಖಂಡರು ಈ ಸಂದಭ೯ ಇದ್ದರು.

Donate Janashakthi Media

Leave a Reply

Your email address will not be published. Required fields are marked *