ಮಾಸ್ಕೋ: ರಷ್ಯಾದ ಶಾಲೆಯೊಂದರಲ್ಲಿ ಬಂದೂಕುಧಾರಿಯೊಬ್ಬ ಸೋಮವಾರ ಬೆಳಿಗ್ಗೆ ಗುಂಡಿನ ದಾಳಿ ನಡೆಸಿದ್ದಾನೆ. ಉದ್ಮುರ್ಶಿಯಾ ಪ್ರಾಂತ್ಯದ ರಾಜಧಾನಿ ಇಜ್ಹೆಸ್ಕ್‌ನ ಶಾಲೆಗೆ ನುಗ್ಗಿದ ಅಪರಿಚಿತ ಬಂದೂಕುಧಾರಿ ಶಾಲೆಯ ಗಾರ್ಡ್ ಮತ್ತು ಮಕ್ಕಳನ್ನು ಕೊಂದಿದ್ದಾನೆ.
ಶಾಲೆಯಲ್ಲಿ 1ರಿಂದ 11ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. 7 ಮಕ್ಕಳು ಸೇರಿ 13 ಮಂದಿ ಮೃತಪಟ್ಟಿದ್ದು, 14 ಮಕ್ಕಳು ಸೇರಿದಂತೆ 21 ಮಂದಿ ಗಾಯಗೊಂಡಿದ್ದಾರೆ ಎಂದು ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿ ನಡೆಸಿದವನು “ನಾಜಿ ಚಿಹ್ನೆ” ಹೊಂದಿರುವ ಕಪ್ಪು ಟಿ-ಶರ್ಟ್ ಧರಿಸಿದ್ದು, ಸ್ವಯಂ ತಾನೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಗನ್‌ಮ್ಯಾನ್ ಮತ್ತು ಅವನ ಉದ್ದೇಶ ಏನಾಗಿತ್ತು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಗವರ್ನರ್ ಅಲೆಗ್ಸಾಂಡರ್ ಬ್ರೆಚಲೊವ್ ತಿಳಿಸಿದ್ದಾರೆ.
ಹಲವಾರು ಸಾಮೂಹಿಕ ಗುಂಡಿನ ದಾಳಿಗಳ ನಂತರ ಇತ್ತೀಚಿನ ವರ್ಷಗಳಲ್ಲಿ ಶಾಲೆಗಳಲ್ಲಿ ಭದ್ರತೆಯನ್ನು ಸುಧಾರಿಸಲು ರಷ್ಯಾ ಕೆಲಸ ಮಾಡುತ್ತಿದೆ. ಮೇ 2021 ರಲ್ಲಿ ಕಜಾನ್‌ನ ಶಾಲೆಯಲ್ಲಿ ಒಂಬತ್ತು ಜನರು ಕೊಲ್ಲಲ್ಪಟ್ಟಿದ್ದರು, 2014 ರಲ್ಲಿ ರಷ್ಯಾವನ್ನು ಸ್ವಾಧೀನಪಡಿಸಿಕೊಂಡ ಕ್ರೈಮಿಯಾದ ಕೆರ್ಚ್‌ನಲ್ಲಿರುವ ತಾಂತ್ರಿಕ ಕಾಲೇಜಿನಲ್ಲಿ 2018 ರ ಗುಂಡಿನ ದಾಳಿಯಲ್ಲಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.