ಮಹತ್ವದ ಬೆಳವಣಿಗೆಯೊಂದರಲ್ಲಿ ಉಕ್ರೇನ್ ನ 1000 ಸೇನಾ ತುಕಡಿಗಳು ರಷ್ಯಾದೊಳಗೆ ನುಗ್ಗಿದ್ದು, ಸುಮಾರು 30 ಕಿ.ಮೀ.ವರೆಗೆ ಅತಿಕ್ರಮಣ ಮಾಡಿದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಪ್ರಮುಖ ತಿರುವು ಪಡೆದಿದ್ದು, ಈಶಾನ್ಯ ರಷ್ಯಾದ ಸುಮಿ ಒಬ್ಲೆಸ್ಟ್ ದಿಂದ ಪ್ರವೇಶಿಸಿರುವ ಉಕ್ರೇನ್ ಸೇನೆ ರಷ್ಯಾದ ಕ್ರುಸ್ಕ್ ಒಬ್ಲಾಸ್ಟ್ ಕಡೆ ಪ್ರವೇಶಿಸಿವೆ.
ಕಳೆದೆರಡು ವರ್ಷಗಳಿಂದ ಯುದ್ಧದಲ್ಲಿ ಮೇಲುಗೈ ಸಾಧಿಸಿದ್ದ ರಷ್ಯಾಗೆ ಇದೀಗ ಹಿನ್ನಡೆ ಆಗಿದೆಯೇ ಇಲ್ಲವೇ ಎಂಬುದು ದೃಢಪಡಬೇಕಿದೆ. ಆದರೆ ಶಸ್ತ್ರಸಜ್ಜಿತ ಉಕ್ರೇನ್ ಸೈನಿಕರು ರಷ್ಯಾದ ಮೇಲೆ ಡ್ರೋಣ್ ಮತ್ತು ಭೂಸೇನಾ ದಾಳಿಯಿಂದ ಹಿಮ್ಮೆಟ್ಟಿಸಿವೆ ಎಂದು ತಿಳಿದು ಬಂದಿದೆ.
ಉಕ್ರೇನ್ ರಷ್ಯಾದೊಳಗೆ ಪ್ರವೇಶಿಸಿರುವ ವೀಡಿಯೋ ಹಾಗೂ ನಕ್ಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದೇ ವೇಳೆ ರಷ್ಯಾ ತಿರುಗೇಟು ನೀಡಿ ಉಕ್ರೇನ್ ಸೈನಿಕರು ಮುಂದುವರಿಯದಂತೆ ತಡೆದು ನಿಲ್ಲಿಸಿದ್ದಾರೆ.
ಉಕ್ರೇನ್ ಯುದ್ಧ ಟ್ಯಾಂಕರ್ ಗಳು ಹಾಗೂ ಭೂಸೇನಾ ರಷ್ಯಾದ ನೆಲೆದ ಮೇಲೆ ಮುನ್ನುಗ್ಗುತ್ತಿರುವ ಫೋಟೊಗಳನ್ನು ಕೂಡ ಹಂಚಿಕೊಂಡಿವೆ. ಉಕ್ರೇನ್ ಬಲ ಹೆಚ್ಚಲು ಅಮೆರಿಕ ಸೇರಿದಂತೆ ನ್ಯಾಟೊ ದೇಶಗಳು ಸಹಕಾರ ಕಾರಣ ಎಂದು ಹೇಳಲಾಗಿದೆ.