ಯೆಚುರಿಯವರಿಗೆ ‘ಪ್ರಭುತ್ವ-ಪ್ರಾಯೋಜಿತ ದಾಳಿ’ಯ ಆಪಲ್‍ ಅಲರ್ಟ್ ಇದು ಪ್ರಜಾಪ್ರಭುತ್ವವೋ, ಗೂಢಚಾರಿ ಪ್ರಭುತ್ವವೋ- ಪ್ರಧಾನಿಗಳಿಗೆ ಪತ್ರ

ನವದೆಹಲಿ: ಅಕ್ಟೋಬರ್ 30 ರ ರಾತ್ರಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರಿಗೆ ಆಪಲ್‍ ನಿಂದ ” ನೀವು ಪ್ರಭುತ್ವ  ಪ್ರಾಯೋಜಿತ ದಾಳಿಕಾರರಿಗೆ ಗುರಿಯಾಗಿದ್ದೀರಿ ಎಂದು ಆಪಲ್ ಭಾವಿಸುತ್ತದೆ, ಅವರು ನಿಮ್ಮ ಆಪಲ್‍ ಐಡಿಯೊಂದಿಗೆ ಸಂಯೋಜಿತವಾಗಿರುವ ಐ ಫೋನ್‍ ಗೆ ದೂರದಿಂದಲೇ ಭಂಗ ಒಡ್ಡಲು ಪ್ರಯತ್ನಿಸುತ್ತಿದ್ದಾರೆ” ಎಂಬೊಂದು ಎಚ್ಚರಿಕೆ ಸಂದೇಶ ಬಂದಿತ್ತು.

ಈ ಬಗ್ಗೆ ಅವರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು “ಇದು ಭಾರತದ ಸಂವಿಧಾನವು ತನ್ನ ಎಲ್ಲಾ ನಾಗರಿಕರಿಗೆ ಖಾತರಿಪಡಿಸಿರುವ ಮೂಲಭೂತ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ. ಕಣ್ಗಾವಲು ಪ್ರಭುತ್ವ ಪ್ರಜಾಪ್ರಭುತ್ವಕ್ಕೆ ತದ್ವಿರುದ್ಧವಾಗಿರುವಂತದ್ದು” ಎಂದು ಹೇಳಿದ್ದಾರೆ.

“ನನ್ನ ಕೆಲಸವು ತೆರೆದ ಪುಸ್ತಕವಾಗಿದೆ , ಅದರಲ್ಲಿ ಮರೆಮಾಚಲು ಏನೂ ಇಲ್ಲ. ಆದ್ದರಿಂದ, ಇಂತಹ ಗೂಢಚಾರಿಕೆ  ಮತ್ತು ನಾನು ಬಳಸುವ ಉಪಕರಣಗಳನ್ನು ದೂರದಿಂದಲೇ ಪ್ರವೇಶಿಸುಂತೆ ಮಾಡಿ,ನನ್ನ ಸಾಧನಗಳಲ್ಲಿ ಕೆಲವು ಮಾಹಿತಿಯನ್ನು ದೂರದಿಂದಲೇ ನೆಡುವುದೆಂದರೆ, ನಂತರ ಅಂತಹ ನೆಟ್ಟ ಸುಳ್ಳು ಸಾಮಗ್ರಿಯ ಆಧಾರದ ಮೇಲೆ ನನ್ನನ್ನು ದೋಷಿಯಾಗಿಸುವ ಆಶಯದಿಂದಲೇ ಎಂದು ಅರ್ಥೈಸಬಹುದು. ನಿಮ್ಮ ನೇತೃತ್ವದ ಈ ಸರ್ಕಾರದಿಂದ ಕೇಂದ್ರೀಯ ಸಂಸ್ಥೆಗಳ ಸಂಪೂರ್ಣ ದುರುಪಯೋಗವನ್ನು ಗಮನಿಸಿದರೆ, ಅಂತಹ ಸಾಧ್ಯತೆಯು ತುಂಬಾ ನಿಜವಾಗಿದೆ” ಎಂದು ಯೆಚುರಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಮುಂದುವರೆದು “ ಪ್ರಧಾನಮಂತ್ರಿ ಹುದ್ದೆಗೆ ನೀವು ಭಾರತದ ಸಂವಿಧಾನವನ್ನು ಎತ್ತಿಹಿಡಿಯುವ ಪ್ರಮಾಣ ವಚನಕ್ಕೆ ಒಳಪಟ್ಟು ಏರಿರುವಿರಿ. ಆದರೆ ಇದರ ಬದಲು, ಪ್ರಜಾಪ್ರಭುತ್ವದ ಮತ್ತು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳ ಸಂಪೂರ್ಣ ಧ್ವಂಸ ನಡೆಯುತ್ತಿದೆ. ಇದು ಸ್ವೀಕಾರಾರ್ಹವಲ್ಲ” ಎನ್ನುತ್ತ ಯೆಚುರಿಯವರು ಈ ವಿಷಯದ ಬಗ್ಗೆ ಪ್ರಧಾನ ಮಂತ್ರಿಗಳು ಸ್ಪಂದಿಸುತ್ತಾರೆ ಎಂದು ನಿರೀಕ್ಷಿಸುವುದಾಗಿ ಪತ್ರ ಬರೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *