ಹಂಪಿ | ಮೂಲಸೌಕರ್ಯವಿಲ್ಲದೆ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕಿದ ಪ್ರವಾಸಿಗರು

ಹಂಪಿ : ಸರಣಿ ರಜೆ ಇದೆ, ಸಹಜವಾಗಿಯೇ ಹಂಪಿಗೆ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ ಎಂಬ ನಿರೀಕ್ಷೆ ಇದ್ದೇ ಇರುತ್ತದೆ. ಅದಕ್ಕೆ ತಕ್ಕಂತೆ ಕನಿಷ್ಠ ಮೂಲಸೌಲಭ್ಯ ಕಲ್ಪಿಸಬೇಡವೇ? ನಾವು ಮತ್ತೊಮ್ಮೆ ಇಲ್ಲಿಗೆ ಬರಬೇಕೇ, ಬೇಡವೇ?’ ಎಂಬುದು ಹಲವು ಪ್ರವಾಸಿಗರ ಪ್ರಶ್ನೆಯಾಗಿತ್ತು.

ನಿರೀಕ್ಷೆಗೂ ಮೀರಿ ಪ್ರವಾಸಿಗರು ಶನಿವಾರ ಹಂಪಿಗೆ ಬಂದ ಕಾರಣ ಎಲ್ಲೆಡೆ ಸಂಚಾರ ದಟ್ಟಣೆ ಕಂಡುಬಂತು. ಸೂಕ್ತ ಮೂಲಸೌಲಭ್ಯ ಕಲ್ಪಿಸದ ಆಡಳಿತ ವ್ಯವಸ್ಥೆಗೆ ಪ್ರವಾಸಿಗರು ಹಿಡಿಶಾಪ ಹಾಕಿದರು.

‘ಪ್ರವಾಸಿಗರಿಗೆ ಅಗತ್ಯದ ಮೂಲಸೌಲಭ್ಯ ಒದಗಿಸದಿದ್ದರೆ ಅವರು ಮುಂದಿನ ಬಾರಿ ಬರುತ್ತಾರೆಯೇ? ಇದರ ನೇರ ಹೊಡೆತ ಬೀಳುವುದು ರಿಕ್ಷಾಗಳು, ಗೈಡ್‌ಗಳಿಗೆ’ ಎಂದು ಪ್ರವಾಸಿ ಮಾರ್ಗದರ್ಶಿಯೊಬ್ಬರು ಅಳಲು ತೋಡಿಕೊಂಡರು.

ಇದನ್ನೂ ಓದಿ:  ಮನೆ-ನಿವೇಶನಕ್ಕಾಗಿ ವಸತಿ ರಹಿತರಿಗೆ ನಿವೇಶನಕ್ಕಾಗಿ ಆಗಸ್ಟ್‌ 20 ರಂದು ಪ್ರತಿಭಟನೆ ಕೆಪಿಆರ್ ಎಸ್

ವಿಜಯವಿಠ್ಠಲ ದೇವಸ್ಥಾನದ ಗೆಜ್ಜಲ ಮಂಟಪದಿಂದ ಆರಂಭವಾದ ವಾಹನ ದಟ್ಟಣೆ ಎರಡು ಕಿ.ಮೀ. ದೂರದ ಟಾಮರೆಂಡ್ ಟ್ರೀ ರೆಸಾರ್ಟ್‌ ತನಕವೂ ಇತ್ತು. ಹೊಂಡ, ಗುಂಡಿಗಳಿಂದ ಕೂಡಿದ ಉಗ್ರ ನರಸಿಂಹ ಸಮೀಪ ವಾಹನ ನಿಲುಗಡೆಗೆ ಸ್ಥಳವೇ ಇರಲಿಲ್ಲ. ವಿರೂಪಾಕ್ಷ ದೇವಸ್ಥಾನಕ್ಕೆ ತೆರಳುವ ಹೇಮಕೂಟ ಏರು ಮಾರ್ಗದಲ್ಲೂ ಹಲವು ವಾಹನಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದವು.

1 ಲಕ್ಷ  ಮಂದಿ ಭೇಟಿ: ಸಾಲು ಸಾಲು ರಜೆ ಇದ್ದ ಕಾರಣ ಹಂಪಿಗೆ ಶನಿವಾರ 70 ಸಾವಿರದಿಂದ 1 ಲಕ್ಷದವರೆಗೆ ಪ್ರವಾಸಿಗರು ಬಂದಿರಬಹುದು ಎಂಬ ಅಂದಾಜು ಮಾಡಲಾಗಿದೆ. ಕಮಲಾಪುರ, ಕಡ್ಡಿರಾಂಪುರ, ಹೊಸಪೇಟೆಗಳಲ್ಲಿ ಬಹುತೇಕ ಲಾಡ್ಜ್‌ಗಳು, ಕಾಟೇಜ್‌ಗಳು ಭರ್ತಿಯಾಗಿದ್ದವು. ಇವುಗಳ ದರ ದುಪ್ಪಟ್ಟು, ಮೂರು ಪಟ್ಟು ಏರಿಕೆಯಾಗಿದ್ದು ಸಹ ಕಂಡುಬಂತು.

ಹಂಪಿ ಹಲವು ಇಲಾಖೆಗಳ ಸುಪರ್ದಿಗೆ ಒಳಪಡುವ ಪ್ರವಾಸಿ ತಾಣವಾಗಿದ್ದು ಹೊಣೆಗಾರಿಕೆ ವಹಿಸಿಕೊಳ್ಳಲು ಯಾವ ಇಲಾಖೆಯೂ ಸಿದ್ಧವಿಲ್ಲ. ಮೂಲಸೌಲಭ್ಯ ಸಂಚಾರ ದಟ್ಟಣೆ ಸಹಿತ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಿಕೊಡುವ ಕೆಲಸವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಹಂಪಿ ವಿಶ್ವಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ) ಮಾಡಬೇಕು ಎಂದು ಹೇಳಿದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರವಾಸಿಗರಿಗೆ ಆಗುವ ತೊಂದರೆಗೂ ನಿಮಗೂ ಸಂಬಂಧವೇ ಇಲ್ಲವೇ’ ಎಂದು ಕೇಳಿದ್ದಕ್ಕೆ ನಿರುತ್ತರರಾದರು.

ಇದನ್ನೂ ನೋಡಿ: ಮಹೇಶ ಜೋಶಿಯನ್ನು ಮನೆಗೆ ಕಳುಹಿಸಿ : ಕನ್ನಡ ಸಾಹಿತ್ಯ ಪರಿಷತ್‌ ಉಳಿಸಿ Janashakthi Media

Donate Janashakthi Media

Leave a Reply

Your email address will not be published. Required fields are marked *