ಬೆಂಗಳೂರು : ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಮೂರು ಪಕ್ಷಗಳ ಜಂಡ ಬೇರೆ ಬೇರೆ ಆದರೂ ಅಜೆಂಡಾಗಳು ಒಂದೇ ಇದೆ. ಮೂರು ಪಕ್ಷಗಳು ರೈತ ವಿರೋಧಿ ನಿಲುವುಗಳನ್ನೇ ತಾಳಿದ್ದಾರೆಎಂದು ಚಿತ್ರನಟ ಚೇತನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಯುಕ್ತ ಹೋರಾಟ ಕರ್ನಾಟಕ ಹಮ್ಮಿಕೊಂಡಿದ್ದ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಮೂರು ಪಕ್ಷಗಳು ರೈತ ವಿರೋಧಿ ನೀತಿಗಳನ್ನೇ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಗೆ ರೈತರ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ, ಎಪಿಎಂಸಿ ಕಾಯ್ದೆಗೆ ತಿದ್ದಪಡಿ ತರಬೇಕು ಎಂಬುದು ಅವರ ಮುಂಚಿನ ಕನಸಾಗಿತ್ತು. ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡೆ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುತ್ತಿದ್ದಾರೆ. ಮಣ್ಣಿನ ಮಕ್ಕಳು ರೈತರ ಪರವಾಗಿ ನಿಲ್ಲಲು ಸಿದ್ಧರಿಲ್ಲ, ಇವರು ಕೂಡಾ ಕಾರ್ಪೋರೇಟ್‌ಗಳ ಪರ ಜೈ ಅನ್ನುವವರು ಆಗಿದ್ದಾರೆ. ಹಾಗಾಗಿ ಚಳುವಳಿಯೆ ಇವರಿಗೆಲ್ಲ ಪಾಠ ಕಲಿಸಲಿದೆ. ಈ ಕಾಯ್ದೆಗಳು ವಾಪಾಸ್ ಆದ ತಕ್ಷಣ ನಮ್ಮ ಹೋರಾಟ ನಿಲ್ಲುವುದಿಲ್ಲ. ಬುದ್ಧ ಬಸವಣ್ಣ ಅಂಬೇಡ್ಕರ್ ಅವರ ಆಶಯದ ದೇಶ ನಿರ್ಮಾಣ ನಮ್ಮ ಗುರಿಯಾಗಿರಬೇಕು ಎಂದರು.
ಇದನ್ನೂ ಓದಿ : ರೈತರನ್ನು ಬೆಂಬಲಿಸದ ಚಿತ್ರನಟರ ವಿರುದ್ಧ ನಟ ಚೇತನ್ ಅಸಮಾಧಾನ
ಇಲ್ಲಿ ಈ ಹೋರಾಟದಲ್ಲಿ ಭಾಗಿಯಾಗಿರುವವರು ಬಸವಣ್ಣರ ಆಶಯದ ಪರಿಪಾಲಕರಾದ ನಿಜವಾದ ಶರಣರು ನೀವೇ ಆಗಿದ್ದಿರಿ. ನಿಮಗೆ ನನ್ನ ನಮಸ್ಕಾರಗಳು. ರೈತ ಹೋರಾಟದ ಜೊತೆಗೆ ನಾನು ನಿಲ್ಲುತ್ತೇನೆ ಎಂದು ಚೇತನ್ ಹೇಳಿದರು.